ದೇಸಿ ವೈದ್ಯ ಪದ್ಧತಿಯ ಅರಿವು ಅವಶ್ಯಕ

ಆಯುಷ್, ಯುನಾನಿ, ಪ್ರಕೃತಿ ಚಿಕಿತ್ಸೆ, ಹೋಮಿಯೋಪಥಿ ತಜ್ಞರ ಸಂವಾದ

ದೇಸಿ ವೈದ್ಯ ಪದ್ಧತಿಯ ಅರಿವು ಅವಶ್ಯಕ

ವಾರ್ತಾ ಇಲಾಖೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಜಲಕ್ಷ್ಮೀ ಮಾತನಾಡಿದರು

ರಾಮನಗರ: ಆಯುರ್ವೇದ, ಯೋಗ, ಹಾಗೂ ಅರಬ್ ಮೂಲದ ಯುನಾನಿ ಚಿಕಿತ್ಸೆ, ಜರ್ಮನಿ ಮೂಲದ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡ ಭಾರತೀಯ ಪುರಾತನ ಆಯುಷ್ ಚಿಕಿತ್ಸಾ ಪದ್ಧತಿಗಳಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ‘ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುಷ್ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಅರಿವು ಹೆಚ್ಚಬೇಕಿದೆ. ಇದಕ್ಕಾಗಿ ಇಲಾಖೆಯು ಸಕಲ ಪ್ರಯತ್ನಗಳನ್ನು ಮಾಡುತ್ತಿದೆಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಜಲಕ್ಷ್ಮೀ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಇತ್ತೀಚೆಗೆ ನಡೆದಜನಪರ ಮಾಹಿತಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆಯುಷ್ ಯಾವುದೇ ಅಡ್ಡಪರಿಣಾಮ ಇಲ್ಲದೆ ನಿಧಾನಗತಿಯಲ್ಲಿ ಪರಿಣಾಮಕಾರಿ ಪರಿಹಾರ ನೀಡಲಿದೆ. ಆದರೆ ತ್ವರಿತ ಗತಿಯಲ್ಲಿ ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಆಲೋಪಥಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿ ಇತ್ತೀಚೆಗೆ ಪರಿಚಯವಾದ ನಂತರ ಆಯುಷ್ ಚಿಕಿತ್ಸಾ ಪದ್ಧತಿ ಬಳಕೆ ಕಡಿಮೆಯಾಗಿದೆ ಎಂದರು.

ayur

2009 ನಂತರ ಆಯುಷ್ ಚಿಕಿತ್ಸಾ ಪದ್ಧತಿಯ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಉಚಿತ ತಪಾಸಣೆ ಶಿಬಿರ, ಅರಿವು ಕಾರ್ಯಕ್ರಮಗಳ ಮೂಲಕ ಆಯುಷ್ ಚಿಕಿತ್ಸೆಯತ್ತ ಸಾರ್ವಜನಿಕರನ್ನು ಸೆಳೆಯುವ ಪ್ರಯತ್ನ ಮುಂದುವರಿದಿದೆಎಂದು ಹೇಳಿದರು.

ಯುನಾನಿ ವೈದ್ಯೆ ಡಾ. ಜಮೀಲಾ ಮಾತನಾಡಿ, ವಾತ, ಪಿತ್ತ, ಕಫಗಳಲ್ಲಿ ಏರುಪೇರು ಉಂಟಾದಾಗ ರೋಗ ಹೆಚ್ಚಾಗುತ್ತವೆ. ಅದಕ್ಕಾಗಿ ಮೂಲ ದಲ್ಲಿಯೇ ರೋಗ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅನೇಕ ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದರ ಮೂಲಕ ವಿವಿಧ ಕಾಯಿಲೆಗಳಾದ ಮಧುಮೇಹ, ಹೃದಯರೋಗ ನಿವಾರಣೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯು ಫಲಕಾರಿಯಾಗಬೇಕಾದರೆ ರೋಗಿಯ ಸಹಕಾರ ಅತಿಮುಖ್ಯ ಎಂದು ತಿಳಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯೆ ಡಾ. ಹರ್ಷಿತಾ ಮಾತನಾಡಿ, ‘ಪಂಚಭೂತ ತತ್ವದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೈಡ್ರೋ ಥೆರಫಿ(ಜಲ ಚಿಕಿತ್ಸೆ), ಮಡ್ ಥೆರಫಿ(ಮಣ್ಣಿನ ಸ್ನಾನ), ಮಸಾಜ್ ಮತ್ತಿತರ ಚಿಕಿತ್ಸಾ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾರ್ಶ್ವವಾಯು ರೋಗಿಗಳಿಗೆ ಫಿಸಿಯೋಥೆರಫಿ ನೀಡಿ ಮೂಲಕ ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಡಯಾಬಿಟಿಸ್, ಥೈರಾಯಿಡ್, ಮತ್ತಿತರ ರೋಗಗಳನ್ನು ನಿವಾರಿಸಲು ಯೋಗ ಚಿಕಿತ್ಸೆಯನ್ನು ನೀಡಲಾಗುತ್ತಿದೆಎಂದು ಅವರು ಹೇಳಿದರು.

ಹೋಮಿಯೋಪಥಿ ತಜ್ಞೆ ಡಾ.ಬೃಂದಾ ಮಾತನಾಡಿ, ‘ಹೋಮಿಯೋಪಥಿ ವಿಧಾನವು ಜರ್ಮನರ ಚಿಕಿತ್ಸಾ ವಿಧಾನವಾಗಿದ್ದು ಡಾ.ಸ್ಯಾಮ್ಯುಯಲ್ ಹ್ಯಾನ್‌ಮನ್‌ ವಿಧಾನವನ್ನು ಕಂಡುಹಿಡಿದರು. ಚಿಕಿತ್ಸಾ ವಿಧಾನದಲ್ಲಿ ರೋಗಕ್ಕೆ ಮೂಲವನ್ನು ಹುಡುಕಿ ಮೂಲದಿಂದಲೇ ರೋಗವನ್ನು ಗುಣಪಡಿಸುವ ಕಾರ್ಯ ನಡೆಯುತ್ತದೆ. ಒಂದು ಬಾರಿಗೆ ಒಂದೇ ಔಷಧಿ ನೀಡುವುದರ ಮೂಲಕ ಮತ್ತು ಮಿತ ಔಷಧಿಯನ್ನು ನೀಡುವುದರ ಮೂಲಕ ರೋಗಗಳನ್ನು ಗುಣಪಡಿಸಲಾಗುವುದು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಇದ್ದರು.

ಎಲ್ಲೆಲ್ಲಿ ಆಯುಷ್ಚಿಕಿತ್ಸೆ

ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 1 ಯುನಾನಿ ಆಸ್ಪತ್ರೆ, ತುಂಬೇನಹಳ್ಳಿ ಮತ್ತು ಹೊಸೂರಿನಲ್ಲಿ 1 ಆಯುಷ್ ಚಿಕಿತ್ಸಾಲಯ, ಕನಕಪುರದಲ್ಲಿ 1, ಎಲವನಹಳ್ಳಿ, ಹೊರಳುಗಲ್ಲು, ಕೊಳಗೊಂಡನಹಳ್ಳಿ, ಬಿಜ್ಜಹಳ್ಳಿ ಯಲ್ಲಿ 1 ಆಯುಷ್ ಚಿಕಿತ್ಸಾಲಯ ವಿದೆ ಎಂದು ರಾಜಲಕ್ಷ್ಮಿ ತಿಳಿಸಿದರು.

ಮಾಗಡಿ ಪಟ್ಟಣದಲ್ಲಿ ಸುಸಜ್ಜಿತವಾದ 1 ಆಯುಷ್ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಸೋಲೂರಿನಲ್ಲಿ ಒಂದು ಹೋಮಿಯೋಪಥಿ ಆಸ್ಪತ್ರೆ, ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಆರ್ಯುವೇದ ಮತ್ತು ಯುನಾನಿ ಚಿಕಿತ್ಸಾಲಯವಿದ್ದು, ಪ್ರತಿಯೊಂದು ಚಿಕಿತ್ಸಾಲಯದಲ್ಲಿ ಕನಿಷ್ಠ 50 ರಿಂದ ಗರಿಷ್ಠ 100 ಮಂದಿ ಚಿಕಿತ್ಸೆ ಪಡೆಯುತ್ತಾರೆ ಎಂದು ತಿಳಿಸಿದರು.

Popular Doctors

Related Articles