ಪ್ರಾಣ ಹಿಂಡುವ ಅಸ್ತಮಾ

ಡಾ|| ಎಸ್.ಎಸ್. ದೇವಲಾಪೂರ

ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ಲೇಖನ

ಅಸ್ತಮಾ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುವ ರೋಗ. ವಿಶ್ವದಾದ್ಯಂತ ಅಂದಾಜು 300 ಮಿಲಿಯನ್ ಜನರು ಅಸ್ತಮಾದಿಂದ ಬಳಲುತ್ತಿದ್ದು, 2025 ಸುಮಾರಿಗೆ 400 ಮಿಲಿಯನ್ಗೆ ಹೆಚ್ಚಾಗುವ ಸಂಭವವಿದೆ. ಅಸ್ತಮಾ ಎಂಬ ಪದವು ಮೂಲ ಗ್ರೀಕ್ ಭಾಷೆಯದು. ಪ್ರಾಚೀನ ಈಜಿಪ್ತನಲ್ಲಿ ಮೊದಲ ಬಾರಿಗೆ ಕಂಡು ಬಂದ ಇದನ್ನು ಆಯುರ್ವೇದ ಶಾಸ್ತ್ರದಲ್ಲಿ ತಮಕ ಶ್ವಾಸವ್ಯಾಧಿ ಎಂದು ಉಲ್ಲೇಖಿಸಿದ್ದಾರೆ. ವಿಕೃತ ಕಫ ಹಾಗೂ ವಾತ ದೋಷಗಳು ಪ್ರಾಣವಹ ಸ್ರೋತಸ್ನಲ್ಲಿ ಪ್ರಾಣಾವರೋಧವನ್ನು ಮಾಡಿ ತಮಕ ಶ್ವಾಸವನ್ನುಂಟು ಮಾಡುತ್ತದೆ.

ಉಸಿರುನಾಳಗಳು ಸಂಕುಚಿಸುತ್ತವೆ. ಉಸಿರುನಾಳಗಳನ್ನು ಸುತ್ತುವರಿದಿರುವ ಸ್ನಾಯುಗಳ ಬಿಗಿತ, ನಾಳಗಳ ಒಳಮೈ ಉರಿಯೂತ, ಹೆಚ್ಚಾಗಿ ಸ್ರವಿಸಲ್ಪಡುವ ಕಫ ಹಾಗೂ ಶ್ವಾಸಕೋಶಗಳ ನರಮಂಡಲದ ವ್ಯವಸ್ಥೆಯಲ್ಲಿನ ಕಾರ್ಯಗಳ ಏರುಪೇರು ಇತ್ಯಾದಿ ಕಾರಣಗಳಿಂದಲೇ ಶ್ವಾಸನಾಳಗಳು ಸಂಕುಚಿಸುತ್ತವೆ. ಅಲರ್ಜಿಕ್ ಪ್ರತಿಕ್ರಿಯೆ ಕೂಡ ಕೆಲವರಲ್ಲಿ ಕಾರಣವಾಗಿರುತ್ತದೆ. ಇದರಿಂದ ರೋಗಿಗೆ ಉಸಿರಾಟದ ತೊಂದರೆ ಅನುಭವ ಉಂಟಾಗುತ್ತದೆ.

ಪ್ರಚೋದಿಸುವ ಕಾರಣಗಳು

ಸುತ್ತಮುತ್ತಲಿನ ವಾತಾವರಣ ಹಾಗೂ ಅನುವಂಶಿಕತೆಯ ಪ್ರಭಾವವೂ ಇರುತ್ತದೆ. ಅಲರ್ಜಿ ಉಂಟು ಮಾಡುವ ವಸ್ತುಗಳ ಸಂಪರ್ಕದಿಂದಲೂ ಉಲ್ಬಣಗೊಳ್ಳುತ್ತದೆ. ಸಾಮಾನ್ಯವಾಗಿ ಪರಾಗಗಳು, ಹೊಗೆ, ಕಟ್ಟಿಗೆಯ ಧೂಳು, ಸಣ್ಣ ಹುಳುಗಳು ಧಾನ್ಯಗಳ ಸುಂಕು, ಜಿರಲೆ, ಸಾಕುಪ್ರಾಣಿಗಳ ಚರ್ಮದಿಂದ ಉದುರುವ ಹೊಟ್ಟು, ರಾಸಾಯನಿಕ ವಸ್ತುಗಳು, ಮೀನು (ಖಚಿತಪಟ್ಟಲ್ಲಿ), ಅಜಿನೊಮೊಟೊ, ಹುಳಿಹಣ್ಣುಗಳು, ಧೂಮಪಾನ, ತಂಬಾಕು ಸೇವನೆ, ಮದ್ಯಪಾನ, ಸುಗಂಧ ದ್ರವ್ಯ, ಕಾಂತಿವರ್ಧಕಗಳು, ಮಳೆ, ಶೀತ ವಾತಾವರಣ, ಹಿಮ, ಕಲುಷಿತ ವಾತಾವರಣ, ವಿಷಕಾರಿ ಹೊಗೆ, ಬಾಷ್ಪ, ಬ್ಯಾಕ್ಟಿರೀಯಾ ಹಾಗೂ ವೈರಸ್ ಸೋಂಕು, ಓಡುವುದು, ಕೆಲವೊಮ್ಮೆ ದೈಹಿಕ ಶ್ರಮಗಳಿಂದ, ಮಾನಸಿಕ ಒತ್ತಡ, ಕೆಲವು ಔಷಧಿಗಳ ಸೇವನೆಯಿಂದ ಹೆಚ್ಚಾಗಬಹುದು.

ಲಕ್ಷಣಗಳು

ಉಸಿರಾಟಕ್ಕೆ ಶ್ರಮ, ಸೀರ್, ಗೊರ್ ಶಬ್ದ, ಎದೆಬಿಗಿತ ಮತ್ತು ಕೆಮ್ಮು ಲಕ್ಷಣಗಳು ರಾತ್ರಿ ಹೊತ್ತು ರೋಗಿಯನ್ನು ಹೆಚ್ಚು ಕಾಡುತ್ತವೆ. ಋತುಮಾನಸಾರವಾಗಿ ಅಸ್ತಮಾದ ತೀವ್ರತೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಮಳೆಗಾಲದಲ್ಲಿ ಇದರ ತೀವ್ರತೆ ಹೆಚ್ಚು. ಅತೀ ತೀವ್ರತೆಯಿಂದ ಬಾಧಿಸಿದಾಗ (ಂಅUಖಿಇ ಂಖಿಖಿಂಅಏ), ಬೆವರು, ಅಶಾಂತತೆ (ಖಇSಖಿಐಇSSಓಇSS) ಹಾಗೂ ಅತೀ ಹೃದಯ ಬಡಿತ ಕಾಣಿಸಿಕೊಳ್ಳುತ್ತವೆ. ಸ್ಟೇಟಸ್ ಅಸ್ತಮೇಟಿಕ್ಸ್ನಲ್ಲಿ ಅತೀ ಶ್ವಾಸಾವರೋಧ, ಚಿತ್ತ ಮಂದಗೊಳ್ಳುವಿಕೆ, ಕೆಲವು ಸಲ ಜೀವಕೋಶಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಚರ್ಮ ಹಾಗೂ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುತ್ತದೆ.

ಪತ್ತೆ ಹಚ್ಚುವಿಕೆ

ವೈದ್ಯರು ರೋಗಿಯ ದೇಹ ಪರೀಕ್ಷೆ ಕಾಲದಲ್ಲಿ ಉಸಿರುನಾಳಗಳ ಪರಿಸ್ಥಿತಿಯ ಬಗ್ಗೆ ವಿಶೇಷ ಗಮನವಹಿಸುತ್ತಾರೆ. ಸ್ಪೈರೊಮೆಟ್ರಿ, ಮೆಟಾಕೊಲೀನ್ ಚಾಲೆಂಜ್, ಪಿಕ್ ಪ್ಲೋ, ಎಕ್ಸೆಲ್ಡ್ ನೈಟ್ರಿಕ್ ಆಕ್ಸೈಡ್ ಟೆಸ್ಟ್ ಮುಂತಾದವುಗಳಿಂದ ಶ್ವಾಸಕೋಶ ಕಾರ್ಯ ಪರೀಕ್ಷೆ ಮಾಡಲಾಗುತ್ತದೆ. ಅಸ್ತಮಾ ಹೆಚ್ಚಾದಾಗ ರಕ್ತ ಹಾಗೂ ಕಫದಲ್ಲಿ ಎಸಿನೋಫೀಲ್ಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಕ್ಷಕಿರಣ ಪರೀಕ್ಷೆ, ಆಜಿಈ ಟೆಸ್ಟ್, ಸ್ಕೀನ್ ಪ್ರಿಕ್ ಟೆಸ್ಟ್ ಹಾಗೂ ಆರ್ಟಿಯಲ್ ಬ್ಲಡ್ ಗ್ಯಾಸ್ ಟೆಸ್ಟ್ ಮಾಡಲಾಗುವುದು.

ಚಿಕಿತ್ಸಾ ಕ್ರಮ

ಧೂಳು, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ, ಖಾದ್ಯ ವಸ್ತುಗಳು (ಖಚಿತವಾದಲ್ಲಿ) ಇತ್ಯಾದಿಗಳಿಂದ ದೂರವಿರಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶವು ಸಾಕಷ್ಟು ಗಾಳಿ, ಬೆಳಕು ಹಾಗೂ ಸ್ವಚ್ಛತೆಯಿಂದ ಕೂಡಿರಬೇಕು. ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು. ಔಷಧಿಗಳನ್ನು ಚುಚ್ಚುಮದ್ದು, ಮಾತ್ರೆ ಹಾಗೂ ಅನಿಲ ರೂಪಗಳಲ್ಲಿ ಉಪಯೋಗಿಸುತ್ತಾರೆ. ಉಸಿರುನಾಳಗಳ ಸಂಕೋಚನೆ ತಗ್ಗಿಸಲು ಬ್ರೊಂಕೊಡೈಲೇಟರ್ಸ್ ಹಾಗೂ ಸೋಂಕು ನಿವಾರಿಸಲು ರೋಗನಿರೋಧಕ ನೀಡುತ್ತಾರೆ. ಅಲರ್ಜಿಕ್ ಪ್ರತಿಕ್ರಿಯೆ ಕಡಿಮೆ ಮಾಡಲು ಇಮ್ಯೂನೋ ಥೆರಪಿಯನ್ನು ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

asthama-day

ಆಯುರ್ವೇದಶಾಸ್ತ್ರದ ಚರಕ ಸಂಹಿತೆಯಲ್ಲಿವಾತಶ್ಮೇಷ್ಮಹರೈಯುಕ್ತಂ ತಮಕೆತು ವಿರೆಚನಮ್ ಅಂದರೆ ವಾತಕಫ ನಾಶಕಯುಕ್ತ ಔಷಧಿಗಳಿಂದ ವಿರೆಚನ ಪದ್ಧತಿ (ಸಂಶೋಧನ) ವಿಶ್ಲೇಷಿಸಿದ್ದಾರೆ. ರೋಗಿಯು ಸಂಶೋಧನ ಚಿಕಿತ್ಸೆಗೆ ದುರ್ಬಲನಾಗಿದ್ದರೆ ಬೃಂಹಣ ಉಪಚಾರ ಮಾಡಬೇಕೆಂದಿದ್ದಾರೆ. ಬಿಸಿ ನೀರನ್ನೆ ಕುಡಿಯಬೇಕು. ತುಳಸಿ, ದಾಲ್ಚಿನ್ನಿ, ಕರಿಮೆಣಸು, ಒಣಶುಂಠಿ ಹಾಗೂ ಒಣದ್ರಾಕ್ಷಿಗಳನ್ನು ಸೇರಿಸಿ ಕಷಾಯ ತಯಾರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ 15 ರಿಂದ 20 ಮಿ.ಲಿ. ಕುಡಿಯಬೇಕು. ಪ್ರತಿದಿನ ಬೆಳಿಗ್ಗೆ ಒಂದು ಚಮಚ ಚ್ಯವನ್ಪ್ರಾಶ ಸೇವಿಸಬೇಕು. ಹಸಿಶುಂಠಿಯ ರಸ ಅಥವಾ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು. ಆಹಾರದಲ್ಲಿ ಅಗಸೆ ಪುಡಿ, ಬೀನ್ಸ್, ಶುಂಠಿ, ಕಾಳುಮೆಣಸು, ಜೀರಿಗೆ, ಹಿಪ್ಪಲಿ, ಅರಿಶಿನ, ಬೆಳ್ಳುಳ್ಳಿ, ಗಜ್ಜರಿ, ಟೊಮೆಟೋ, ದಾಲ್ಚಿನ್ನಿ ಪುಡಿ ಹಾಗೂ ಪಾಲಕ ಸೊಪ್ಪುಗಳನ್ನು ಹೇರಳವಾಗಿ ಸೇವಿಸಬೇಕು. ವಿಟಾಮಿನ್ಸ್ ಸಿ,,ಡಿ, ಓಮೇಗಾ-3 ಹೇರಳವಾಗಿರುವ ಹಣ್ಣುಗಳನ್ನು ಸೇವಿಸಬೇಕು. ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಯೋಗ ಗುರುಗಳ ಮಾರ್ಗದರ್ಶನದಲ್ಲಿಯೇ ಮಾಡಬೇಕು.

ಅಸ್ತಮಾದಲ್ಲಿ ಅನುವಂಶಿಕತೆ ಪ್ರಭಾವವೂ ಇರುವುದರಿಂದ ವಿವಾಹಕ್ಕೆ ಮುನ್ನ ಗಂಡು, ಹೆಣ್ಣು ಇಬ್ಬರಲ್ಲೂ ಕಾಯಿಲೆ ಇದ್ದಲ್ಲಿ ಮಕ್ಕಳಿಗೂ ಕಾಯಿಲೆಯ ಸಂಭವ ಹೆಚ್ಚು ಎಂಬುದನ್ನು ಗಮನದಲ್ಲಿಡಬೇಕು. ಅಸ್ತಮಾ ಕಾಯಿಲೆ ದೀರ್ಘಕಾಲ ತೊಂದರೆ ಕೊಡುತ್ತದೆ. ಕಾಯಿಲೆಯು ದೀರ್ಘಕಾಲಿತವಾಗಿದ್ದಲ್ಲಿ ಪೂರ್ಣ ಪರಿಹಾರ ಸಾಧ್ಯವಿಲ್ಲ. ಆದ್ದರಿಂದ ರೋಗಿಗಳು ತಮ್ಮ ಕಾಯಿಲೆ ಹಾಗೂ ಚಿಕಿತ್ಸೆಗಳ ಬಗ್ಗೆ ಅರಿತು ವೈದ್ಯರೊಡನೆ ಸಹಕರಿಸುವುದು ಅತ್ಯಗತ್ಯ. ನೆಗಡಿ, ಕೆಮ್ಮು, ಜ್ವರ ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಗಳು ವೈದ್ಯರು ಸೂಚಿಸಿದ ಔಷಧಿಗಳನ್ನು ಮಾತ್ರ ಸೇವಿಸಬೇಕು.

Dr. Shivashankarprasad S. Devalapur ಡಾ|| ಎಸ್.ಎಸ್. ದೇವಲಾಪೂರ

ಆಯುರ್ವೇದ & ಆಹಾರ ತಜ್ಞರುಮೊಃ 9535568309

LEAVE A REPLY

Please enter your comment!
Please enter your name here