ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಜುಲೈ 2022ರಲ್ಲಿ ಒಂದರ ಹಿಂದೆ ಒಂದು ಹೀಗೆ ಮೂರು ಹೃದಯ ಕಸಿ ಮಾಡಿ ಸಾವಿನಂಚಿನಲ್ಲಿದ್ದ ಮೂವರ ಜೀವ ಉಳಿಸುವ ಅಪರೂಪದ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೊಮ್ಮೆ ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಲ್ಲದೇ ಬೆಳಗಾವಿ ನಗರದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ. ರಾಜ್ಯದಲ್ಲಿ ಕೇವಲ 18 ದಿನಗಳಲ್ಲಿ 3 ಹೃದಯ ಕಸಿ ಮಾಡಿದ ಆಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, ದಾಖಲೆಯ ಸಾಧನೆಯಾಗಿದೆ. ಬೆಂಗಳೂರಿನಲ್ಲಿ ಯಕೃತ್ತ (ಲೀವರ) ಹೊರತಾಗಿ ಬೇರೆ ಅಂಗಗಳನ್ನು ಒಂದೆ ತಿಂಗಳಿನಲ್ಲಿ ಕಸಿ ಮಾಡಿರುವ ದಾಖಲೆಯಾಗಿಲ್ಲ. ಆದರೆ ನಾವು ಆ ದಾಖಲೆಯನ್ನು ಮಾಡಿದ್ದೇವೆ. ಇಬ್ಬರು ರೋಗಿಗಳಿಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡುವದರ ಮೂಲಕ ಜೀವದಾನ ನೀಡಲಾಗಿದೆ. ಇವುಗಳನ್ನು ಗಮನಿಸಿದರೆ ರೋಮಾಂಚನವಾಗುತ್ತದೆ. ಕೆಎಲ್‌ಇ ಸಂಸ್ಥೆಯು ಎರಡು ದಶಕಗಳ ಹಿಂದೆ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಈ ಭಾಗದ ಯಾವುದೇ ರೋಗಿ ಒಳ್ಳೆಯ ಗುಣಮಟ್ಟದ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೃದಯ ಸೇರಿದಂತೆ ಅಂಗಾAಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ತರಬೇತಿ ಪಡೆದ ವೃತ್ತಿನಿರತ ಕಾರ್ಯಪಡೆ, ನಿಖರವಾದ ಯೋಜನೆ, ಕಸಿ ನಂತರದ ತೀವ್ರ ನಿಗಾ ವಹಿಸಬೇಕಾಗಿರುತ್ತದೆ. ವೃತ್ತಿನಿರತ ತಂಡದ ಕರ‍್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಅದೆಲ್ಲ ಇಲ್ಲ ಸಮ್ಮಿಳಿತಗೊಂಡಿದೆ. ಆದ್ದರಿಂದಲೇ ಕೇವಲ 18 ದಿನಗಳಲ್ಲಿ 3 ಹೃದಯ ಕಸಿ ಮಾಡಿದ ದಾಖಲೆ ಮಾಡಲು ಸಾಧ್ಯವಾಗಿದೆ ಎಂದು ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ರಿಚರ್ಡ್ ಸಲ್ಡಾನ್ಹಾ ಅವರು ಖುಷಿಯಿಂದ ಹೆಳುತ್ತಾರೆ. ಸುರಿಯುತ್ತಿರುವ ಭಾರೀ ಮಳೆ ಹಾಗೂ ಅತ್ಯಂತ ವಾಹನ ದಟ್ಟನೆಯ ಸಮಯದಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಪ್ರಥಮ ಹೃದಯವನ್ನು ತರುವದು ಅತ್ಯಂತ ಸವಾಲಿನ ಕರ‍್ಯವಾಗಿತ್ತು. ಆದರೆ ಬೆಳಗಾವಿ- ಹುಬ್ಬಳ್ಳಿ ದಾರವಾಡ ಪೋಲೀಸರ ಸಹಕಾರದಿಂದ ರಾಷ್ಟಿçÃಯ ಹೆದ್ದಾರಿಯಲ್ಲಿ ಹಸಿರು ಪಥದಲ್ಲಿ ಕೇವಲ 58 ನಿಮಿಷಗಳಲ್ಲಿ ಬೆಳಗಾವಿಗೆ ಹೃದಯವನ್ನು ತರಲಾಯಿತು. ಪೊಲೀಸರ ಕರ‍್ಯಕ್ಕೆ ನಮ್ಮದೊಂದು ಸಲಾಮ ಹಾಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಅನಕ್ಷರಸ್ಥರು, ಗ್ರಾಮೀಣ ಭಾಗದ ಜನರು ಅಂಗಾAಗ ದಾನ ಮಾಡಲು ಮುಂದೆ ಬರುವುದಿಲ್ಲ ಎಂಬ ಸುಳ್ಳು ಭ್ರಮೆಯನ್ನು ದೂರಮಾಡುವಲ್ಲಿ ಖಾನಾಪುರ ತಾಲೂಕಿನ ಅಮ್ಟೆ ಗ್ರಾಮದ 26 ವರ್ಷದ ಸಹದೇವ ಗಾಂವಕರ್ ಎಂಬಾತ ಅಪಘಾತದಲ್ಲಿ ಗಾಯಗೊಂಡು ಮೆದುಳು ಮೃತಗೊಂಡಾಗ ಧೃತಿಗೆಡದ ಆತನ ಪೋಷಕರು ಮುಂದೆ ಬಂದು ಅಂಗಾAಗ ದಾನ ಮಾಡಿದರು. ಮೆದುಳು ನಿಷ್ಕ್ರಿಯಗೊಂಡ ದಾನಿ ಸಹದೇವ್ ಗಾಂವ್ಕರ್ ಅವರನ್ನು ಚಿಕಿತ್ಸೆಗಾಗಿ ವಿಜಯ್ ಆರ್ಥೋ ಮತ್ತು ಟ್ರಾಮಾ ಸೆಂಟರನಲ್ಲಿ ದಾಖಲಿಸಲಾಗಿತ್ತು. ಗಂಭೀರ ಪರಿಸ್ಥಿಯಲ್ಲಿದ್ದ ಯುವಕನನ್ನು ವಿಒಟಿಸಿ ಯಿಂದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆಆಂಬುಲೆನ್ಸ್ನಲ್ಲಿ ವೆಂಟಿಲೇಟರ್ ಉಪಯೋಗಿಸಿ ವರ್ಗಾಯಿಸುವುದು ಅತ್ಯಂತ ಕಷ್ಟಕರವಾಗಿತ್ತು.
ಸುಮಾರು ಎರಡು ವರ್ಷಗಳಿಂದ ಹೃದಯಕ್ಕಾಗಿ ಕಾಯುತ್ತಿದ್ದ ಕೊಲ್ಲಾಪುರದ 25 ವರ್ಷದ ಯುವಕÀ, ಗೋಕಾಕ ತಾಲೂಕಿನ 18 ವರ್ಷದ ಬಾಲಕ ಹಾಗೂ ರಾಣೆಬೆನ್ನೂರಿನ 48 ವರ್ಷದ ರೋಗಿಗಳಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ. ಮೂವರೂ ರೋಗಿಗಳು ಎರಡು ವರ್ಷಗಳಿಂದ ಕಾಯುವ ಪಟ್ಟಿಯಲ್ಲಿದ್ದರು ಮತ್ತು ಅವರ ಹೃದಯವು ಕೇವಲ ಶೇ. 20 ರಿಂದ 25ರಷ್ಟು ಮಾತ್ರ ಕರ‍್ಯನಿರ್ವಹಿಸುತ್ತಿದ್ದ ಕಾರಣ ಅವರು ಯಾವುದೇ ಕರ‍್ಯಚಟುವಟಿಕೆಗಳಿಲ್ಲದೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಹೃದಯ ಕಸಿಗೊಳಗಾದ ಇಬ್ಬರು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಮೂರನೆಯವರನ್ನೂ ಶೀಘ್ರವೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ ಎಂ ವಿ ಜಾಲಿ ತಿಳಿಸಿದ್ದು, ರೋಗಿಯನ್ನು ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಿದ ವಿಒಟಿಸಿ ನಿರ್ದೇಶಕರಾದ ಡಾ ರವಿ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಹೃದಯ ಕಸಿ ಮಾಡಲು ಮೆಟ್ರೋ ನಗರಗಳಲ್ಲಿ ಸುಮಾರು 20 ರಿಂದ 25 ಲಕ್ಷ ರೂ.ಗಳ ವೆಚ್ಚವಾಗುತ್ತದೆ. ಆದರೆ ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿಯನ್ನು ಗಮನದಲ್ಲಿರಿಸಿ ಕೇವಲ 10 ಲಕ್ಷ ರೂ.ಗಳಲ್ಲಿ ಹೃದಯ ಕಸಿ ನೆರವೇರಿಸಲಾಗುತ್ತಿದೆ. ಅದರಲ್ಲಿಯೂ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದಿರುವ (ಬಿಪಿಎಲ್) ರೋಗಿಗಳಿಗೆ ಹೃದಯ ಕಸಿಯನ್ನು ಉಚಿತವಾಗಿ ನೆರವೇರಿಸಲಾಗುತ್ತದೆ ಎಂದು ಡಾ. ಪ್ರಭಾಕರ ಕೋರೆ ಅವರು ಹೇಳಿದರು. ಉಚಿತ ಹೃದಯ ಕಸಿಯ ಪ್ರಯೋಜನೆ ಪಡೆದಿದ್ದು ಗೋಕಾಕ ತಾಲೂಕಿನ ಬಾಲಕ ಎರಡನೇ ಫಲಾನುಭವಿ. ಈ ಭಾಗದಲ್ಲಿ ಅಂಗಾAಗ ದಾನದ ಅರಿವು ಕಡಿಮೆಯಾಗಿದೆ. ಜನರು ತಮ್ಮ ಅಂಗಾAಗಗಳನ್ನು ಹೂಳುವ ಅಥವಾ ಸುಡುವ ಬದಲು ದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಹೃದಯ ಕಸಿ ನೆರವೇರಿಸಿದ ತಂಡದಲ್ಲಿ ಡಾ.ಮೋಹನ್ ಗಾನ್, ಡಾ.ಕಿರಣ್ ಕುರಕುರೆ, ಡಾ ದರ್ಶನ್, ಡಾ.ಅಭಿಷೇಕ್ ಪ್ರಭು ಮತ್ತು ಡಾ.ಪಾರ್ಶ್ವನಾಥ ಪಾಟೀಲ ಅವರು ಶಸ್ತçಚಿಕಿತ್ಸೆ ನೆರವೇರಿಸಿದರೆ, ಅರವಳಿಕೆ ತಜ್ಞರಾದ ಡಾ.ಶರಣಗೌಡ ಪಾಟೀಲ್, ಡಾ.ಆನಂದ ವಗ್ರಾಳಿ, ಡಾ.ಅಜೀತ ಶಿತೋಳೆ, ಡಾ ಜಬ್ಬಾರ್, ಡಾ.ಶ್ವೇತಾ ಅವರು ಸಹಕರಿಸಿದರೆ , ರ‍್ಪೂö್ಯಸನಿಸ್ಟ, ಸಂಯೋಜಕರುಗಳು, ದಾದಿಯರು ಮತ್ತು ತಾಂತ್ರಿಕ ಸಹಾಯಕ ಸಿಬ್ಬಂದಿಗಳು ಕಸಿಗಳನ್ನು ಯಶಸ್ವಿಗೊಳಿಸುವಲ್ಲಿ ಅವರ ಸಹಕಾರ ಬಹುಮುಖ್ಯವಾಗಿತ್ತು. ರೋಗಿಯ ಮೆದುಳು ಮೃತಪಟ್ಟಿದೆ ಎಂಬ ಸಂಕೀರ್ಣ ಕಾರ್ಯವಿಧಾನವನ್ನು ನರತಜ್ಞವೈದ್ಯರಾದ ಡಾ. ಕುತುಬ್ ಮಕಾಂದರ್ ಮತ್ತು ಇಂಟೆನ್ಸಿವಿಸ್ಟ್ ಡಾ. ಅಂಬರೀಶ್ ನೇರ್ಲಿಕರ್ ನೆರವೇರಿಸಿದರು.2018ರಿಂದ ಇಲ್ಲಿಯವರೆಗೆ ಹೃದಯರಕ್ತನಾಳದ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ 6 ಯಶಸ್ವಿ ಹೃದಯ ಕಸಿಗಳನ್ನು ನಡೆಸಲಾಗಿದೆ.
ದಾನಿ 1: ಬೆಳಗಾವಿಯ ಸುಭಾಷ ನಗರದ 29 ವರ್ಷದ ಸುನಿಲ್ ಉದಯ್ ಸಾವಂತ್ ಅವರು ದಿ. 01-07-2022 ರಂದು ರಸ್ತೆ ಅಪಘಾತಕ್ಕೀಡಾಗಿ, ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಪೊಲೀಸ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಆಶಾ ಸಾವಂತ ದಂಪತಿಗಳಿಗೆ ಏಕೈಕ ಪುತ್ರರಾಗಿದ್ದರು. ಮೆದುಳು ಮೃತಪಟ್ಟ ನಂತರ ಅವರ ಏಕೈಕ ಮಗನ ಅಂಗಾAಗಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರ ತೆಗೆದುಕೊಂಡÀÄ, ಅವರಹೃದಯ, ಚರ್ಮ ಮತ್ತು ಕಣ್ಣುಗಳನ್ನು ದಾನ ಮಾಡಿದರು..
ದಾನಿ 2: ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾದ 16 ಬಾಲಕಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಅವಳ ಪೋಷಕರು ಮುಂದೆ ಬಂದು ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳನ್ನು ದಾನ ಮಾಡಿ 4 ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಜುಲೈ 11, 2022 ರಂದು ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯ ಪೊಲೀಸ್ ಅಧಿಕಾರಿಗಳ ಬೆಂಬಲದೊAದಿಗೆ 58 ನಿಮಿಷಗಳ ದಾಖಲೆಯ ಸಮಯದಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಹಸಿರು ಕಾರಿಡಾರ್ ಮೂಲಕ ತೆಗೆದುಕೊಂಡು ಬಂದ ಪ್ರಥಮ ಹೃದಯವಾಗಿದ್ದು, ಉತ್ತರ ಕರ್ನಾಟಕದ ಇತಿಹಾಸದಲ್ಲಿಯೇ ಪ್ರಥಮ.
ದಾನಿ 3: ಖಾನಾಪೂರ ತಾಲೂಕಿನ ಆಮ್ಟೆ ಗ್ರಾಮದ 26 ವರ್ಷದ ಸಹದೇವ ಅರ್ಜುನ್ ಗಾಂವ್ಕರ್, ಅವರು ದಿ. 18-07-2022 ರಂದು ಜಾಂಬೋಟಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಅವರನ್ನು ಬೆಳಗಾವಿಯ ಅಯೋಧ್ಯಾ ನಗರದ ವಿಜಯ್ ಅರ್ಥೊ ಮತ್ತು ಟ್ರಾಮಾ ಸೆಂಟರ್‌ನಲ್ಲಿ ದಾಖಲಿಸಲಾಗಿತ್ತು. ಅದರ ನಿರ್ದೇಶಕರಾದ ಡಾ. ರವಿ ಪಾಟೀಲ್ ಅವರು ಅಂಗಾAಗ ದಾನದ ಕುರಿತು ತಿಳಿಸಿ, ಅಂಗಾAಗ ದಾನಕ್ಕೆ ಅನುಕೂಲವಾಗುವಂತೆ ರೋಗಿಯನ್ನು ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗೆ ಸ್ಥಳಾಂತರಿಸಿದರು. ಸಹದೇವ್ ಅವರ ಪೋಷಕರು ದೂರದ ಹಳ್ಳಿಯ ಕೃಷಿ ಹಿನ್ನೆಲೆಯಿಂದ ಬಂದವರು. ಸಹದೇವ್ ಅವರ ಪಾಲಕರಾದ ಅರ್ಜುನ್ ಮತ್ತು ದ್ರುಪದಿ ಗಾಂವ್ಕರ್, ಕಾಸರ್ಲೇಕರ್ ಅಭಿಮನ್ಯು ಅವರು ಸಂಬAಧಿಕರಿಗೆ ಅರಿವು ಮೂಡಿಸಿ ಅಂಗಾಂಗಗಳನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾಗಿ 4 ಜೀವಗಳನ್ನು ಉಳಿಸಿದರು.