ವಾಷಿಂಗ್ಟನ್: ಅಮೇರಿಕದ ಮಿಸ್ಸೌರಿ ರಾಜ್ಯದ ಕನ್ಸಾನ ನಗರದ ಆಸ್ಪತ್ರೆಯ ಸ್ತೀರೋಗ ಹಾಗೂ ಹೆರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ 14 ಜನ ಶೂರ್ಷೂಕಿಯರು (ನರ್ಸ್) ಒಂದೇ ಬಾರಿಗೆ ಗರ್ಭ ಧರಿಸಿದ ಅಪರೂಪದ ವಿದ್ಯಮಾನ ನಡೆದಿದೆ.
ಸದ್ಯ ‘ಬೇಬಿ ಬಂಪ್’ ನೊಂದಿಗೆ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕದ ಮಿಸ್ಸೋರಿ ರಾಜ್ಯದ ಕನ್ಸಾನ್ ನಗರದ ಸಂತ ಲೂಕರ ಈಸ್ಟ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ 14 ದಾದಿಯರು ಏಕಕಾಲಕ್ಕೆ ಗರ್ಭಿಣಿಯರಾಗಿದ್ದಾರೆ. ಇವರೆಲ್ಲರೂ ಹೆರಿಗೆ ವಿಭಾಗದಲ್ಲೇ ಗರ್ಭಿಣಿಯರ ಸೇವೆ ಮಾಡುತ್ತಿರುವದು ವಿಶೇಷ.
ಕೈತಿಲಿನ್ ಹಾಲ್ ಎಂಬವರು, ಮೊದಲು ಗರ್ಭಿಣಿಯಾಗಿದ್ದು, ಇದೇ ಜೂನ್ 3ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಅವರ ಸಹೋದ್ಯೋಗಿಗಳು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
‘ಇದು ನನ್ನ ಮೊದಲ ಮಗುವಾಗಿದ್ದು, ಗರ್ಭಿಣಿಯಾದ 12 ವಾರಗಳ ಕಾಲ ನಾನು ಈ ಬಗ್ಗೆ ಯಾರೊಂದಿಗೂ ಮಾಹಿತಿ ಹಂಚಿಕೊಂಡಿರಲಿಲ್ಲ. ಇದಾದ ಬಳಿಕ ಒಬ್ಬೊಬ್ಬರು ತಾವು ಗರ್ಭಿಣಿಯಾದ ಬಗ್ಗೆ ಹೇಳಿಕೊಳ್ಳಲು ಆರಂಭಿಸಿದರು. ಹೀಗಾಗಿ ನಾನು ಕೂಡ ತಾಯಿಯಾಗುತ್ತಿರುವುದರ ಬಗ್ಗೆ ಘೋಷಣೆ ಮಾಡಿದೆ’ ಎಂದು ಕೈತಿಲಿನ್ ಹೇಳಿದ್ದಾರೆ.
ಸದ್ಯ ಆಸ್ಪತ್ರೆ ತನ್ನದೇ ನರ್ಸ್ಗಳ 13 ಶಿಶುಗಳನ್ನು ಸ್ವಾಗತಿಸಲು ಸಜ್ಜಾಗಿದೆ. ‘ಸೈಂಟ್ ಲೂಕ್ ಕುಟುಂಬಕ್ಕೆ 13 ಮಂದಿಯನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಆಸ್ಪತ್ರೆ ಹೇಳಿದೆ.
‘ನಾನು ಇತರ ತಾಯಿಯಂದಿರಿಗೆ ಮಾಡುವಷ್ಟೇ ಕಾಳಜಿಯನ್ನು ನಮ್ಮ ಸಿಬ್ಬಂದಿಗಳಿಗೆ ತೋರುತ್ತೇವೆ. ಈ ವಿಶೇಷ ಸಂಧರ್ಭಕ್ಕೆ ನಮ್ಮ ಆಸ್ಪತ್ರೆ ಸಾಕ್ಷಿಯಾಗಲಿದೆ’ ತನ್ನ ಸಿಬ್ಬಂದಿಗಳ ಸಂತಸದಲ್ಲಿ ತಾನೂ ಭಾಗಿಯಾಗುವುದಾಗಿ ಎಂದು ಆಸ್ಪತ್ರೆ ತನ್ನ ಫೇಸ್ಬುಕ್ನಲ್ಲಿ ಹೇಳಿಕೊಂಡಿದೆ.
ಅಮೆರಿಕದಲ್ಲಿ ಜನನ ಪೂರ್ವ ಲಿಂಗ ಪತ್ತೆ ಅಪರಾಧ ಅಲ್ಲ. ಹೀಗಾಗಿ 13 ಮಂದಿಯ ಪೈಕಿ ಕೆಲವರು ಗಂಡು ಹಾಗೂ ಇನ್ನೂ ಕೆಲವರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರತಿಯೊಬ್ಬರಿಗೆ ಬೇರೆ ಬೇರೆ ಹೆರಿಗೆ ದಿನಾಂಕ ಇದ್ದು, ಡಿಸೆಂಬರ್ ಅಂತ್ಯದವರೆಗೆ ಈ ಸರಣಿ ಮುಂದುವರಿಯಲಿದೆ.
ಒಂದೇ ಸಮಯದಲ್ಲಿ ಗರ್ಭಿಣಿಗಳಾಗಿರುವ ಈ ಸಹೋದ್ಯೋಗಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ಪರಸ್ಪರ ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುಂಪು ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಅಮೆರಿಕ ಮಾಧ್ಯಮದೊಂದಿಗೆ ಈ ಸಂತೋಷವವನ್ನು ಈ ಗುಂಪಿನ ದಾದಿ ಎಲ್ಲಿಕಾಂಗ್ಸ್ ಎಂಬವರು ಹಂಚಿಕೊಂಡಿದ್ದು, ‘ತನ್ನ ಸಹೋದ್ಯೋಗಿಗಳೊಂದಿಗೆ ಈ ವಿಶೇಷ ಸಂದರ್ಭವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇನೆ. ಇದೊಂದು ವಿಶೇಷ ಕ್ಷಣ. ಇಂಥ ಕ್ಷಣಗಳನ್ನು ಎಲ್ಲಾರೂ ಸೇರಿ ಒಟ್ಟಾಗಿ ಅನುಭವಿಸುವುದೇ ಒಂದು ಖುಷಿಯ ಸಂಗತಿ. ಈ ಸಮಯವನ್ನು ಸಂತೋಷದಿಂದ ಕಳೆಯುತ್ತಿದ್ದೇವೆ’ ಎಂದು ಹೇಳಿದ್ದಾರೆ.