ಕೇಂದ್ರದ ಆಯುಷ್ಯ ಮಂತ್ರಾಲಯವು ಆಯುರ್ವೇದ ವೈದ್ಯರಿಗೆ ಹಾಗೂ ಸ್ನಾತ್ತಕೋತ್ತರ (ಶಲ್ಯ ತಂತ್ರ) ವಿದ್ಯಾರ್ಥಿಗಳಿಗೆ ಸುಮಾರು 58 ವಿವಿಧ ರೀತಿಯ ಆಯ್ದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಅನುಮತಿ ನೀಡಿದ್ದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿತು.
ದೇಶಾದ್ಯಂತ ವೈದ್ಯರು ಹಮ್ಮಿಕೊಂಡಿದ್ದ ಪ್ರತಿಭಟನೆಯ ಅಂಗವಾಗಿ ಬೆಳಗಾವಿಯಲ್ಲಿಯೂ ಕೂಡ ನಡೆಸಿ, ಆಯುಷ್ಯನ ಶಲ್ಯತಂತ್ರದ ವೈದ್ಯರು ಎಲಬುಕೀಲು, ಕಿವಿಮೂಗು, ಕಣ್ಣು ಹಾಗೂ ದಂತ ಶಸ್ತ್ರಚಿಕಿತ್ಸೆ ನೆರವೆರಿಸಲು ಅವಕಾಶ ಮಾಡಿಕೊಟ್ಟಿರುವದನ್ನು ವಿರೋಧಿಸಿ, ಇದು ಅವೈಜ್ಞಾನಿಕ ಕ್ರಮ. ಆಧುನಿಕ ವೈದ್ಯಕೀಯ ಸೇವೆಯನ್ನು ಪಡೆಯಲು ಜನರಿಗೆ ತೊಂದರೆಯುಂಟಾಗಲಿದೆ ಅಲ್ಲದೇ ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡಲಿದೆ. ಆದ್ದರಿಂದ ಈ ಕ್ರಮವನ್ನು ಮರುಪರೀಶೀಲಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಆಯ್ಎಂಎ ಅಧ್ಯಕ್ಷರಾದ ಡಾ. ಅನಿಲ ಪಾಟೀಲ, ಕಾರ್ಯದರ್ಶಿ ಡಾ. ದೇವೆಗೌಡ, ಡಾ ಎ ಎಸ್ ಗೋಧಿ, ಡಾ. ಶಶಿಕಾಂತ ಕುಲಗೋಡ, ಡಾ. ರವೀಂದ್ರ ಅನಗೋಳ, ಡಾ. ಸುಧೀರ ಭಟ್ ಡಾ. ವಿಜಯ ಪಾಟೀಲ, ಡಾ. ಯಲಬುರ್ಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.