ಮಧುಮೇಹಿಗಳಿಗೆ ಆಪತ್ಬಾಂದವ ಈ ಇನ್ಸುಲಿನ್

ಮಧುಮೇಹ ದೀರ್ಘಕಾಲಿನ ರೋಗವಾಗಿದ್ದು, ಅದರ ನಿಯಂತ್ರಣಕ್ಕೆ ಇನ್ಸುಲಿನ್ ಅತೀ ಮುಖ್ಯವಾದ ಚಿಕಿತ್ಸೆಯಾಗಿ ಪರಿಣಮಿಸಿದೆ. ವಿಶ್ವದಲ್ಲಿ ಇನ್ಸುಲಿನ್ ಬಳಕೆಗೆ ಬಂದು ಈಗ ಶತಮಾನ ಕಂಡಿದೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಇನ್ಸುಲಿನ್ ಬಳಸುತ್ತಿದ್ದು, ಮಧುಮೇಹದಿಂದಾಗುವ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಪಾರಾಗುವಲ್ಲಿ ಯಶಸ್ಸು ಕಂಡಿದ್ದಾರೆ. 460 ಮಿಲಿಯನಗಿಂತಲೂ ಅಧಿಕ ಜನ ಮಧುಮೇಹ ಪೀಡಿತರಾಗಿದ್ದು, ಅದರಲ್ಲಿ ಲಕ್ಷಾಂತರ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ 2014ರಲ್ಲಿ ಸುಮಾರು 422 ಮಿಲಿಯನ್ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದರು. ಆದರೆ 1980ರಲ್ಲಿ ಕೇವಲ 108 ಮಿಲಿಯನ್ ಜನರು ಸಕ್ಕರೆ ರೋಗ ಪೀಡಿತರಾಗಿದ್ದರು. ಆದರೆ 30 ವರ್ಷದಲ್ಲಿ ಶೇ. 4.7ರಿಂದ 8.5 ಕ್ಕೇರಿ ದ್ವಿಗುಣಗೊಂಡಿದೆ. ಭಾರತದಲ್ಲಿ ಸುಮಾರು 72 ಮಿಲಿಯನ್ ಯುವಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಂಡುಬAದಿದೆ. ಯುವಕರಲ್ಲಿ ಅಧಿಕವಾಗಿ ಕಂಡು ಬರುತ್ತಿರುವದು ಅತ್ಯಂತ ಕಳವಳಕಾರಿ ಎಂದು ಮಧುಮೇಹ ತಜ್ಞವೈದ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಶತಮಾನ ಕಂಡ ಇನ್ಸುಲಿನ್ ಕುರಿತು ಅರಿತುಕೊಳ್ಳಲು ಅವಕಾಶ ಸಿಕ್ಕಿದೆ.

ಇನ್ಸುಲಿನ್ಎಂದರೇನು?

ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳನ್ನು ನಿಮ್ಮ ಜೀರ್ಣಾಂಗ ವ್ಯವಸ್ಥೆ ಗ್ಲುಕೋಸ್‌ಗಳಾಗಿ ವಿಭಜಿಸುತ್ತದೆ. ಮೇದೋಜ್ಜೀರಕ ಗ್ರಂಥಿಯಿAದ ಉತ್ಪತ್ತಿಯಾಗುವ ಇನ್ಸುಲಿನ್ ಗ್ಲುಕೋಸನ್ನು ಹೀರಿಕೊಳ್ಳಲು ಜೀವಕೋಶಗಳಿಗೆ ಸಹಾಯ ಮಾಡುವದಲ್ಲದೇ, ದೇಹದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಮೆಟಬಾಲಿಸಮನ್ನು ನಿಯಂತ್ರಿಸುತ್ತದೆ.

ಟೈಪ್ 1 ಡಯಾಬಿಟಿಸ್‌ನಲ್ಲಿ ದೇಹವು ಇನ್ಸುಲಿನ್ ಅನ್ನು ಉತ್ಪಾದಿಸುವುದೇ ಇಲ್ಲ, ಆದರೆ ಟೈಪ್ 2 ಡಯಾಬಿಟಿಸ್‌ನಲ್ಲಿ ಅವಶ್ಯವಿರುವ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ ಅಥವಾ ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇನ್ಸುಲಿನ್ ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆಯ ಅನಿವಾರ್ಯ ಭಾಗವಾಗುತ್ತದೆ.

digital blood sugar meter with injections and medication
Photo by Nataliya Vaitkevich on Pexels.com

ಯಾರಿಗೆಇನ್ಸುಲಿನ್ನೀಡಬೇಕಾಗುತ್ತದೆ?

ನಿಮ್ಮ ದೇಹವು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ, ಅದರ ಕೊರೆತೆಯನ್ನು ತುಂಬಲು ಔಷಧದ ವಿಧಾನವನ್ನು ಬಳಸಲಾಗುತ್ತದೆ. 1. ಟೈಪ್ 1 ಡಯಾಬಿಟಿಸ್ 2. ಅನಿಯಂತ್ರಿತ ಟೈಪ್ 2 ಡಯಾಬಿಟಿಸ್ ಇದ್ದರೆ. ಆಹಾರ, ವ್ಯಾಯಾಮ ಮತ್ತು ಔಷಧಿಗಳು ರಕ್ತದಲ್ಲಿನ ಸಕ್ಕರೆ ಅಂಶದ ಮೇಲೆ ನಿಯಂತ್ರಣವನ್ನು ಸಾಧಿಸುವಲ್ಲಿ ವಿಫಲವಾದರೆ.

ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇದ್ದು ಮತ್ತು ನೀವು ಗರ್ಭಿಣಿಯಾಗಿದ್ದರೆ, ಶಸ್ತçಚಿಕಿತ್ಸೆಗೆ ಒಳಗಾಗಿದ್ದರೆ.

ಇನ್ಸುಲಿನ್ಏಕೆ?

ಸಾಮಾನ್ಯವಾಗಿ, ಟೈಪ್ 2 ಮಧುಮೇಹ ನಿಯಂತ್ರಿಸಲು ಹಲವು ವರ್ಷಗಳಿಂದ, ವಿವಿಧ ಔಷಧಿಗಳ ಜೊತೆಗೆ ಆರೋಗ್ಯಕರ ಆಹಾರ ಮತ್ತು ವ್ಯಾಯಾಮವನ್ನು ಸೂಚಿಸಲಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಮಾನ್ಯವಾಗಿ ಔಷಧಿಗಳ ಮೂಲಕ ಚಿಕಿತ್ಸೆ ಪ್ರಾರಂಭವಾಗುತ್ತದೆ. ಆದರೂ, ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದಲ್ಲಿ, ನಿರೀಕ್ಷಿಸಿದ ಪರಿಣಾಮ ಬೀರದಿದ್ದಲ್ಲಿ, ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ, ಇನ್ಸುಲಿನ್ ಕೊನೆಯ ಹಂತವಾಗಿ ಮಾತ್ರ ಬಳಸಲಾಗುವುದಿಲ್ಲ. ವಾಸ್ತವವಾಗಿ, ಇತ್ತೀಚಿನ ಚಿಕಿತ್ಸೆಯ ಮಾರ್ಗಸೂಚಿಗಳ ಪ್ರಕಾರ ಟೈಪ್ 2 ಮಧುಮೇಹ ಹೊಂದಿರುವ ಜನರು ಎಷ್ಟು ಬೇಗ ಇನ್ಸುಲಿನ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೋ, ಅಷ್ಟು ಒಳ್ಳೆಯದು.

• ಮಧುಮೇಹದ ಲಕ್ಷಣಗಳು: ಅತಿಯಾದ ಬಾಯಾರಿಕೆ (ಪಾಲಿಡಿಪ್ಸಿಯ), ಹೆಚ್ಚು ಪ್ರಮಾಣದಲ್ಲಿ ಮೂತ್ರವನ್ನು ಮಾಡುವುದು (ಪಾಲಿಯೂರಿಯ), ಅತಿಯಾದ ಹಸಿವು ಮಂತಾದವು.

• ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್ (ಊbಂ1ಛಿ)> 9% ಇದ್ದರೆ

• ಅತಿ ಹೆಚ್ಚು ರಕ್ತದಲ್ಲಿನ ಗ್ಲುಕೋಸ್ ಮಟ್ಟ (> 300 mg/ಜ) ಇದ್ದರೆ

ಟೈಪ್ 2 ಮಧುಮೇಹಿಗಳಿಗೆ ನೀಡಲಾಗುವ ಇನ್ಸುಲಿನ್ ಚಿಕಿತ್ಸೆಯು ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುವುದಲ್ಲದೇ ದೀರ್ಘಕಾಲದ ಡಯಾಬಿಟಿಸ್ ನಿವಾರಣೆಗೆ ಸಹಾಯಮಾಡುತ್ತದೆ ಎಂದು ಸಂಶೋಧನೆಯಿAದ ತಿಳಿದುಬಂದಿದೆ.

ಇನ್ಸುಲಿನ್ಹೇಗೆಸಹಾಯಮಾಡುತ್ತದೆ?

ಮೇದೋಜ್ಜೀರಕ ಗ್ರಂಥಿಯಿAದ ಬಿಡುಗಡೆಯಾಗುವ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯ ಮಟ್ಟದಲ್ಲಿರಿಸುತ್ತದೆ. ಗ್ರಂಥಿಯೂ ದಿನಪೂರ್ತಿ ಕೆಲಸ ಮಾಡುವ ಇನ್ಸುಲಿನ್ (ಬೇಸಲ್ ಇನ್ಸುಲಿನ್) ಅನ್ನು ಬಿಡುಗಡೆ ಮಾಡಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಆಹಾರದಲ್ಲಿನ ಸಕ್ಕರೆಯ ಹೀರುವಿಕೆಗೆ ಪ್ರತಿಯಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡುವ ಇನ್ಸುಲಿನ್ (ಬೋಲಸ್ ಇನ್ಸುಲಿನ್) ಅನ್ನು ಉತ್ಪಾದಿಸುತ್ತದೆ.

ಚುಚ್ಚುಮದ್ದಿನ ಅಥವಾ ಪಂಪ್ ಮೂಲಕ ತೆಗೆದುಕೊಂಡ ಇನ್ಸುಲಿನ್ ನೈಸರ್ಗಿಕ ಇನ್ಸುಲಿನ್‌ನಂತೆಯೇ ಪರಿಣಾಮ ಬೀರುತ್ತದೆ. ಕಣ್ಣುಗಳ (ರೆಟಿನೋಪತಿ), ಮೂತ್ರಪಿಂಡಗಳ (ನೆಫ್ರೋಪತಿ) ಮತ್ತು ನರಗಳ (ನರರೋಗ) ಮೇಲೆ ಮಧುಮೇಹದಿಂದಾಗುವ ಸಮಸ್ಯೆಗಳನ್ನು ನಿಧಾನಗೊಳಿಸಲು ಇನ್ಸುಲಿನ್ ಚಿಕಿತ್ಸೆಯು ಪರಿಣಾಮಕಾರಿ ಎಂದು ಸಂಶೋಧನೆಯಿAದ ಕಂಡು ಬಂದಿದೆ.

ಬಸವರಾಜ ಸೊಂಟನವರ

ಜನಸಪರ್ಕ ಅಧಿಕಾರಿಗಳು

LEAVE A REPLY

Please enter your comment!
Please enter your name here