ಬೆಂಗಳೂರು: ‘ಜೀವ ನಿರೋಧಕಗಳು ಬಹುಬೇಗ ತಮ್ಮ ಶಕ್ತಿ ಕಳೆದುಕೊಳ್ಳುತ್ತಿರುವುದರಿಂದ ಔಷಧ ಉತ್ಪಾದನಾ ಕಂಪನಿಗಳು ಹೊಸ, ಹೊಸ ಜೀವ ನಿರೋ
ಧಕಗಳನ್ನು ಉತ್ಪಾದಿಸಲು ಹಿಂದೇಟು ಹಾಕುತ್ತಿವೆ. ಇದು ಅಪಾಯಕಾರಿಯಾಗಿ ಪರಿಣಮಿಸಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಇಸ್ರೇಲ್ನ ಪ್ರೊ.ಅದಾ ಯೊನಾಥ್ ಹೇಳಿದರು.
ಇಲ್ಲಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಉಪನ್ಯಾಸ ನೀಡಿದ ಅವರು, ‘ಪ್ರೊಟೀನ್ನಲ್ಲಿ ಡಿಎನ್ಎ ಅಡಕವಾಗಿರುತ್ತದೆ. ಇಂತಹ ಪ್ರೊಟೀನ್ ಉತ್ಪಾದಿಸುವ ಕಾರ್ಖಾನೆ ಎಂದರೆ ರೈಬೋಸೋಮ್. ಬ್ಯಾಕ್ಟೀರಿಯಾಗಳು ರೈಬೋಸೋಮ್ ಮೇಲೆಯೇ ದಾಳಿ ನಡೆಸುವುದರಿಂದ ಜೀವ ನಿರೋಧಕಗಳು ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ’ ಎಂದರು.
‘ಅಮೆರಿಕದಲ್ಲಿ ಪ್ರತಿವರ್ಷ 20 ಲಕ್ಷ ಜನರು ನಂಜಿನ ಕಾಯಿಲೆಗಳಿಂದ ಬಳಲುತ್ತಾರೆ. ಯೂರೋಪ್ನಲ್ಲಿ 2010-14ರ ನಡುವೆ ಇದೇ ಕಾರಣ
ದಿಂದ 33 ಸಾವಿರ ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ನಿರ್ದಿಷ್ಟ ಜೀವ ನಿರೋಧಕಗಳ ಬಳಕೆ ದುಪ್ಪಟ್ಟಾಗಿ
ದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ’ ಎಂದರು.
‘ಆಫ್ರಿಕಾದಲ್ಲಿ ಜನರ ಸರಾಸರಿ ಜೀವಿತಾವಧಿ ತೀರಾ ಕಡಿಮೆ ಇದೆ. ಜನರು ಸರಾಸರಿ 70ರಿಂದ 80 ವರ್ಷ ಬದುಕಬೇಕು ಎಂಬ ಗುರಿ ನನ್ನದು. ಇದಕ್ಕಾಗಿ ಉಪಯುಕ್ತ ಜೀವ ನಿರೋಧಕಗಳ ಉತ್ಪಾದನೆ ಆಗಬೇಕಿದ್ದು, ಮುಂದಿನ ದಿನಗಳಲ್ಲಿ ಸಹ ಇದಕ್ಕಾಗಿ ಶೋಧನೆ ಮುಂದುವರಿಸುತ್ತೇನೆ’ ಎಂದು ಅವರು ತಿಳಿಸಿದರು.
ರಾಮಚಂದ್ರನ್
ಸ್ಫೂರ್ತಿ
‘ಬೆಂಗಳೂರಿನ ಜಿ.ಎನ್.ರಾಮಚಂದ್ರನ್ ಅವರು ಪ್ರೊಟೀನ್ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಹಾನ್ ಸಾಧನೆ ಮಾಡಿದ್ದರು. ಕಂಪ್ಯೂಟರ್ ಬಳಕೆ ಇಲ್ಲದ ಸಮಯದಲ್ಲೇ ಅವರು ರೈಬೋಸೋಮ್ನ ಸಂಕೀರ್ಣ ರಚನೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು. ಅವರ ಪ್ರೇರಣೆಯಿಂದಲೇ ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವುದು ಸಾಧ್ಯವಾಯಿತು‘ ಎಂದು ಅದಾ ಯೊನಾಥ್ ಹೇಳಿದರು.
ಪರಿಸರಸ್ನೇಹಿ ಜೀವ ನಿರೋಧಕ ಔಷಧಗಳ ಉತ್ಪಾದನೆಯತ್ತ ಈಗ ವಿಶೇಷ ಗಮನವನ್ನು ಹರಿಸಲೇಬೇಕಾಗಿದೆ
ಪ್ರೊ.ಅದಾ ಯೊನಾಥ್
ನೊಬೆಲ್ ಪುರಸ್ಕೃತ ವಿಜ್ಞಾನಿ