ಬನ್ನಿ ಆತ್ಮಹತ್ಯೆ ತಡೆಗಟ್ಟಲು ಕೈ ಜೋಡಿಸೋಣ

 

ಸೆಪ್ಟಂಬರ್ ೧೦ ವಿಶ್ವದಾದ್ಯಂತ ಆತ್ಮಹತ್ಯಾ ತದೆಗಟ್ಟುವ ದಿನಾರಣೆಯನ್ನಾಗಿ ಆಚರಿಸಲಾಗುತ್ತದೆ. ಆತ್ಮ್ ಹತ್ಯೆಯು ಒಂದು ಗಂಭೀರ ಸಾಮಾಜಿಕ ಪಿಡುಗು. ನಮ್ಮ ದೇಶದಲ್ಲಿ ಪ್ರತೀ ೩ ರಿಂದ ೪ ನಿಮಿಷಕ್ಕೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾನೆ. ಸಮಯೋಚಿತವಾದ ಸಹಾಯ ದೊರೆತರೆ ಆತ್ಮಹತ್ಯೆಯನ್ನು ತಡೆಗಟ್ಟಬಹುದಾಗಿದೆ. ಆತ್ಮಹತ್ಯೆಗೆ ಕಾರಣಗಳೇನು? ಇದನ್ನು ತಡಯಬೇಕಾದ ಬಗೆ ಏನು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವಿರಿಸಿರುವೆ.

ಆತ್ಮಹತ್ಯಾ ಪ್ರವರ್ತಿಗೆ ಕಾರಣಗಳು ಹಲವಾರು. ಈ ಕಾರಣಗಳನ್ನು ಜೈವಿಕ ಕಾರಣಗಳು, ಮನಸ್ಥಿತಿಗೆ ಸಂಬಂಧಿಸಿದ ಕಾರಣಗಳು, ಹಾಗೂ ಸಾಮಾಜಿಕ ಕಾರಣಗಳಾಗಿ ವಿಂಗಡಿಸಹುದು. ಜೈವಿಕ ಕಾರಣಗಳಲ್ಲಿ ಅನುವಂಶಿಕತೆ (ಹೌದು! ಆತ್ಮಹತ್ಯಾ ಪ್ರವರ್ತಿಯು ಕೆಲವೊಂದು ವಂಶಗಳಲ್ಲಿ ಹೆಚ್ಚಾಗಿ ಕಕಂಡುಬರುತ್ತದ ಹಾಗೂ, ಆತ್ಮಹತ್ಯೆಗೆ ಕಾರಣೀಭೂತವಾದ ವಂಶವಾಹಿಗಳನ್ನು (genes) ಪತ್ತೆ ಹಚ್ಚಲಾಗಿದೆ.), ಮೆದುಳಿನಲ್ಲಿ ರಾಸಾಯನಿಕಗಳ ಏರು ಪೇರುಗಳು ಮುಖ್ಯವಾಗಿವೆ. ಸಾಮಾಜಿಕ ಕಾರಣಗಳಲ್ಲಿ ಕೌಟುಂಬಿಕ ಕಲಹಗಳು, ವಯಕ್ತಿಕ ಜೀವನದಲ್ಲಿನ ಕಷ್ಟ ನಷ್ಟಗಳು, ಬಹುದಿನಗಳಿಂದ ಬಳಲಿಸುತ್ತಿರುವ ರೋಗಹಾಗೂ ಇತ್ತೀಚಿಗೆ, ಮಕ್ಕಳಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗುವದು ಮುಂತಾದವು ಸಾಮಾನ್ಯ ಕಾರಣಗಳಾಗಿವೆ.

ಇನ್ನೊಂದು ಮುಖ್ಯ ಅಂಶವೆಂದರೆ, ಮಾಧ್ಯಮಗಳಲ್ಲಿ ಆತ್ಮಹತ್ಯೆಯನ್ನು ವರದಿ ಮಾಡುವ ಶೈಲಿ ಕೂಡಾ ಒಂದು ಕಾರಣವಾಗಿದ್ದು, ಕೆಲೋವೊಮ್ಮೆ copy cat suicide ಕಾರಣವಾಗಬಹುದು. ಇನ್ನು ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಕಾರಣಗಳಲ್ಲಿ ಅತೀ ಸೂಕ್ಷ್ಮ ಪ್ರವರ್ತಿ , ಅತೀ ದುಡುಕು ಸ್ವಭಾವ, ಮಾದಕ ವಸ್ತು ಸೇವನೆ ಪ್ರಮುಖವಾದವುಗಳು.

ಅತೀ ಮುಖ್ಯವಾದ ಸಂಗತಿ ಎಂದರೆ ಆತ್ಮಹತ್ಯೆಯು ವ್ಯಕ್ತಿಯಲ್ಲಿ ಮನೆ ಮಾಡಿರುವ ಮನೋರೂಗದ ಲಕ್ಷಣವೂ ಆಗಿರಬಹುದು. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರತೀ ಮೂರು ವ್ಯಕ್ತಿಗಳಲ್ಲಿ ಇಬ್ಬರಿಗೆ ಗಂಭೀರ ಮನೋರೋಗವಿರುವದು ಧೃಡಪಟ್ಟಿದೆ.

ಈಗಾಗಲೆ ಹೇಳಿದಂತೆ ಆತ್ಮಹತ್ಯೆಯನ್ನು ತಡೆಗಟ್ಟಬಹುದಾಗಿದೆ. ಅದಕ್ಕೆ ಮನೋವೈದ್ಯರು, ಆಪ್ತ ಸಲಹೆಗಾರರು,ಸಾಮಾಜಿಕ ಕಾರ್ಯಕರ್ತರು, ಜನಸಾಮಾನ್ಯರು, ಸರ್ಕಾರ ಎಲ್ಲರ ಪ್ರಯತ್ನ ಹಾಗೂ

ಸಹಭಾಗಿತ್ವ ಅವಶ್ಯಕ. ಆತ್ಮಹತ್ಯೆಯ ಅಪಾಯದ ಲಕ್ಷಣಗಳನ್ನು ಗುರುತಿಸುವುದು ಇಲ್ಲಿ ಬಹಳ ಮುಖ್ಯ.

ಇಂತಹ ವ್ಯಕ್ತಿಗಳು ಸಮಾಜದಿಂದ ವಿಮುಖರಾಗುವರು, ತಮ್ಮ ಪ್ರೀತಿಪಾತ್ರರಿಗೆ ಕೊನೆಯ ವಿದಾಯ ಸೂಚಿಸುವುದು, death note ಬರೆಯುವದು, ಅಥವಾ ನೇರವಾಗಿ ತಮ್ಮ ಮರಣದ ಇಚ್ಛೆಯನ್ನು ವ್ಯಕ್ತ ಪಡಿಸುವುದು, ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವುದು ಮುಖ್ಯ ಲಕ್ಷಣಗಳಾಗಿವೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಯೋಚಿತ ಸಾಂತ್ವನ, ಸಹಾಯ ಹಾಗೂ ಅವಶ್ಯಕತೆ ಕಂಡಲ್ಲಿ ಮನೋರೋಗ ಚಿಕಿತ್ಸೆಯನ್ನು ನೀಡುವುದರಿಂದ ಒಂದು ಜೀವವನ್ನು ಉಳಿಸಬಹುದು. ಸರ್ಕಾರ ಕೂಡ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕು.

ಕೊನೆಯಲ್ಲಿ ಒಂದು ಸಂತಸದ ಸಂಗತಿ ಏನೆಂದರೆ, ಇತ್ತೀಚಿಗೆ ಭಾರತ ಸರ್ಕಾರವು ಆತ್ಮಹತ್ಯೆ ಅಥವಾ ಆತ್ಮಹತ್ಯೆಯ ಪ್ರಯತ್ನಗಳನ್ನು ಅಪರಾಧಗಳ ಪಟ್ಟಿಯಿಂದ ಕೈಬಿಟ್ಟಿರುವುದು. ಇದರಿಂದಾಗಿ ಇನ್ನು ಯಾವುದೇ ಪೋಲೀಸು ಕೇಸಿನ ಭಯವಿಲ್ಲದೆ ನಾವು ಇಂತಹ ವ್ಯಕ್ತಿಗಳನ್ನು ಚಿಕಿತ್ಸೆಗೆ ಕರೆತರಬಹುದು.

ಬನ್ನಿ ಎಲ್ಲರೂ ಕೈ ಜೋಡಿಸೋಣ, ಆತ್ಮಹತ್ಯೆಗಳನ್ನು ತಡೆಯೋಣ.

About the Author: Dr Bhimsen Tekkalaki, Psychiatrist
KLES Dr Prabhakar Kore Hospital & MRC, Belagavi

Popular Doctors

Related Articles