ಆಸ್ಪತ್ರೆಗಳಿಗೆ ರೇಬಿಸ್ ಔಷಧ ಪೂರೈಕೆ

 

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ಜನರಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ಸರಕಾರಿ ಆಸ್ಪತ್ರೆಗಳಲ್ಲಿ ಲಭಿಸುತ್ತಿರಲಿಲ್ಲ. ಇದನ್ನರಿತ ಸರಕಾರವು ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಚುಚ್ಚುಮದ್ದು ಪೂರೈಸಲು 60067 ವೈಲ್ಸಗಳನ್ನು ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ ವೇರಹೌಸಿಂಗ ಸೊಸೈಟಿ (ಕೆಡಿಎಲ್‍ಡಬ್ಲುಎಸ್) ಖರೀದಿಸಿ, ವಿತರಿಸಿದೆ.

ಮೂರು ಬಾರಿ ಟೆಂಡರ ಕರೆದರೂ ಬಿಡ್ ದಾರರು ಭಾಗವಹಿಸದೇ ಇರುವ ಕಾರಣ ಮರುಟೆಂಡರ ಕರೆಯಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ಔಷಧ ಸರಬರಾಜು ಮಾಡಲು 4 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಪರ್ಯಾಯವಾಗಿ ಕೇರಳದಿಂದ ತುರ್ತಾಗಿ 10 ಸಾವಿರ ವೈಲ್ಸಗಳನ್ನು ಖರೀದಿಸಿ ವಿತರಿಸಿದೆ. ತಮಿಳುನಾಡಿನಿಂದ ಎಆರ್‍ವಿ ಔಷಧ ಪಡೆಯಲು ಮುಂದಾಗಿದೆ. ಈಲ್ಲೆಯ ವೈದ್ಯಾಧಿಕಾರಿಗಳು ಲಭ್ಯವಿರುವ ಅನುದಾನದಲ್ಲಿ ಸ್ಥಳೀಯವಾಗಿ ಖರೀದಿಸಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು.

ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳು ಖರೀದಿಸಿರುವ ಲಸಿಕಾ ಪ್ರಮಾಣವನ್ನು ಪರಿಶೀಲಿಸಿ 3 ದಿನದೊಳಗೆ ಸಂಸ್ಥೆಯ ನಿರ್ದೇಶಕರಿಗೆ ತಿಳಿಸಿಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

vaccine

Popular Doctors

Related Articles