ಎಚ್‌ಐವಿ ವೈರಾಣು ನಾಶದಲ್ಲಿಯಶಸ್ವಿಯಾದ ವಿಜ್ಞಾನಿಗಳು

ಈ ಸಂಶೋಧನೆಯಿಂದ ಭಾರಿ ದೊಡ್ಡ ಆವಿಷ್ಕಾರವಾಗಿದೆ ಎಂದಿರುವ ಡಾ. ಹೊವಾರ್ಡ್‌, ವಿಶ್ವದ ಸುಮಾರು 3.7 ಕೋಟಿ ಎಚ್‌ಐವಿ ಪೀಡಿತರು ಸಮಾಧಾನ ನಿಟ್ಟುಸಿರು ಬಿಡಬಹುದಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌: ಪ್ರಯೋಗಾಲಯದಲ್ಲಿನ ಇಲಿಯ ದೇಹದಿಂದ ಎಚ್‌ಐವಿ ವೈರಾಣುವನ್ನು ಸಂಪೂರ್ಣವಾಗಿ ನಾಶಪಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ನಿಧಾನ ಗತಿಯಲ್ಲಿ ಅನುವಂಶಿಕ ಧಾತುವನ್ನು ಮಾರ್ಪಡಿಸುವ ಔಷಧವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದರಿಂದ ವೈರಾಣುವನ್ನು ಸಂಪೂರ್ಣವಾಗಿ ನಾಶಪಡಿಸಬಹುದಾಗಿದೆ ಎಂದು ನೆಬ್ರಾಸ್ಕಾ ವಿಶ್ವವಿದ್ಯಾಲಯದ ಸಂಶೋಧಕ ಡಾ. ಹೊವಾರ್ಡ್‌ ಜೆಂಡಲ್‌ಮೆನ್‌ ಹೇಳಿದ್ದಾರೆ. ಈ ಸಂಶೋಧನೆಯಿಂದ ಭಾರಿ ದೊಡ್ಡ ಆವಿಷ್ಕಾರವಾಗಿದೆ ಎಂದಿರುವ ಡಾ. ಹೊವಾರ್ಡ್‌, ವಿಶ್ವದ ಸುಮಾರು 3.7 ಕೋಟಿ ಎಚ್‌ಐವಿ ಪೀಡಿತರು ಸಮಾಧಾನ ನಿಟ್ಟುಸಿರು ಬಿಡಬಹುದಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ‘ಲೇಸರ್‌ ಎಆರ್‌ಟಿ’ ಎಂಬ ಔಷಧವನ್ನು ಐದು ವರ್ಷಗಳ ಸಂಶೋಧನೆಯಿಂದ ಅಭಿವೃದ್ಧಿಪಡಿಸಿದ್ದೇವೆ. ನಮಗೂ ಮೊದಲು ನಂಬಲು ಆಗಲಿಲ್ಲ. ಆದರೆ ಬಳಿಕ ರಕ್ತ ಮಾದರಿಗಳ ಪರೀಕ್ಷೆಯಲ್ಲಿ ಇಲಿಯ ರಕ್ತದಿಂದ ಎಲ್ಲ ವೈರಾಣುಗಳು ನಾಶಗೊಂಡಿರುವುದ ಖಾತ್ರಿಯಾಯಿತು.

HIV-Virus
ಹಲವು ವೈಜ್ಞಾನಿಕ ಜರ್ನಲ್‌ಗಳಿಗೆ ಸಂಶೋಧನಾ ವರದಿ ನೀಡಿದಾಗ ಅವರೂ ಕೂಡ ನಂಬಲೇ ಇಲ್ಲ. ವರದಿಯನ್ನು ಪ್ರಕಟಿಸಲಿಲ್ಲ,” ಎಂದು ಅನುಭವವನ್ನು ಡಾ.ಹೊವಾರ್ಡ್‌ ಹಂಚಿಕೊಂಡಿದ್ದಾರೆ.

Popular Doctors

Related Articles