ವೈದ್ಯಕೀಯ ಸೀಟುಗಳ ಶುಲ್ಕ ಈ ಬಾರಿ ₹ 25 ಲಕ್ಷದಿಂದ 50 ಲಕ್ಷ

ಬೆಂಗಳೂರು: 2019ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಸರ್ಕಾರ ಸೀಟ್ಮ್ಯಾಟ್ರಿಕ್ಸ್ನೀಡಿದ್ದು, ಎನ್ಆರ್ ಮತ್ತು ಇತರ ವೈದ್ಯಕೀಯ ಸೀಟುಗಳ ಶುಲ್ಕ ಬಾರಿ25 ಲಕ್ಷದಿಂದ 50 ಲಕ್ಷದವರೆಗೂ ಇರಲಿದೆ ಎಂದು ತಿಳಿಸಲಾಗಿದೆ.

ಸೀಟ್ಮ್ಯಾಟ್ರಿಕ್ಸ್ಜತೆಗೆ ಶುಲ್ಕದ ವಿವರವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದೆ. ಎನ್ಆರ್ ಮತ್ತು ಇತರರಿಗೆ ದಂತ ವೈದ್ಯಕೀಯ ಕಾಲೇಜುಗಳ ಶುಲ್ಕ2.91 ಲಕ್ಷದಿಂದ8.88 ಲಕ್ಷದವರೆಗೆ ಇರಲಿದೆ. ಇತರ ಸೀಟುಗಳು ಶುಲ್ಕ ಮೊದಲು ಪ್ರಕಟಿಸಿದಂತೆ ಇರಲಿದೆ.

ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟುಗಳು 3,950, ಖಾಸಗಿ ಸೀಟುಗಳು 1,845, ಎನ್ಆರ್ ಸಿಟುಗಳು 596, ಇತರ ಸೀಟುಗಳು 186, ಹೀಗೆ ಒಟ್ಟು 6,577 ಸೀಟುಗಳು ಲಭ್ಯ ಇವೆ. ದಂತ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟುಗಳು 915, ಖಾಸಗಿ ಸೀಟುಗಳು 1,255, ಎನ್ಆರ್ ಸೀಟುಗಳು 383, ಇತರ ಸೀಟುಗಳು 121, ಹೀಗೆ 2,674 ಸೀಟುಗಳಿವೆ.

ಜುಲೈ 3 ಬೆಳಿಗ್ಗೆ 11ರವರೆಗೆ ಇಚ್ಛೆ ನಮೂದು ನಡೆಯಲಿದೆ. 4ರಂದು ಬೆಳಿಗ್ಗೆ 11ಕ್ಕೆ ಅಣಕು ಸೀಟು ಆಯ್ಕೆ ಪ್ರಕಟವಾಗಲಿದೆ. 4ರಂದು ಮಧ್ಯಾಹ್ನ 2ರಿಂದ 6ರಂದು ಮಧ್ಯಾಹ್ನ 2ರವರೆಗೆ ಇಚ್ಛೆ ಬದಲಾಯಿಸಲು ಅವಕಾಶ ನೀಡಲಾಗಿದೆ. 7ರಂದು ಸಂಜೆ 6 ಗಂಟೆಯ ಬಳಿಕ ಮೊದಲ ಸುತ್ತಿನಲ್ಲಿ ನೀಡಲಾದ ಕಾಲೇಜುಗಳ ಪಟ್ಟಿ ಬಿಡುಗಡೆಯಾಗಲಿದೆ. ಮಾಹಿತಿಗೆ 
kea.kar.nic.in
ವೆಬ್ಸೈಟ್ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

Popular Doctors

Related Articles