ತೀವ್ರನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಬಿರುಗಾಳಿಯ ಮದ್ಯದಲ್ಲಿ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಹಲವು ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಭಯಬೀಳದೇ ಶಾಂತಿಯಿಂದ ಸವಾಲನ್ನು ಎದುರಿಸಬೇಕೆಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯ ಹಿರಿಯ ತೀವ್ರನಿಗಾ ಘಟಕದ ತಜ್ಞವೈದ್ಯರಾದ ಡಾ. ಜೆಮಶೆಡ್ ಸೋನವಾಲಾ ಅವರಿಂದಿಲ್ಲಿ ವ್ಶೆದ್ಯರಿಗೆ ಕರೆ ನೀಡಿದರು.
ಬೆಳಗಾವಿಯ ಕಾಹೆರನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಮೆಡಿಸಿನ್ ವಿಭಾಗ ಹಾಗೂ ಅಸೊಸಿಯೇಶನ್ ಆಫ್ ಇಂಡಿಯಾ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 37ನೇ ವಾರ್ಷಿಕ ಕೆಎಪಿಸಿಒಎನ್ (KAPICON-19) ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ರೋಗಿಯ ಸೇವೆಯಲ್ಲಿರುವ ವೈದ್ಯರು, ವೈದ್ಯಕೀಯ ಸಮಸ್ಯೆಗಳಿಗೆ ಎದೆಗುಂದಬಾರದು. ವೈದ್ಯವೃತ್ತಿಯನ್ನು ಗೌರವಿಸುತ್ತ ಸೇವೆಯನ್ನು ನೀಡಬೇಕಾಗಿದೆ. ಯುವ ವೈದ್ಯರು ಅತ್ಯಂತ ಶಾಂತವಾಗಿ ಚಿಕಿತ್ಸೆ ನೀಡುತ್ತ ಕಾರ್ಯನಿರ್ವಹಿಸಬೇಕು. ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಅನೋನ್ಯವಾಗಿದ್ದರೆ ಬಹಳ ಒಳ್ಳೆಯದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜುಕೇಶನ್ ಆ್ಯಂಡ ರಿಸರ್ಚನ ಕ್ಯಾಂಪಸ್ ಅತ್ಯಂತ ಸುಂದರವಾಗಿದ್ದು, ಸ್ವಚ್ಚತೆಯಲ್ಲಿ ಅಗ್ರಗಣ್ಯವಾಗಿದೆ.ನುರಿತ ತಜ್ಞವೈದ್ಯರು , ಕಲಿಕಾ ಸೌಲಭ್ಯ ಉತ್ತಮಗಿರುವದು ಇಲ್ಲಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಡಾ. ಪ್ರಭಾಕರ ಕೋರೆ ಅವರ ಕಾಳಜಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತರ್ದಲ್ಲಿ ಸಾಧನೆಗೈದ ಡಾ. ಜೆಮಶೆಡ್ ಸೋನವಾಲ, ಬೆಂಗಳೂರಿನ ಡಾ. ಚಿಕ್ಕಮಗಾ ಮಂಗಳೂರಿನ ಯೆನಪೋಯಾ ವೈದ್ಯಕೀಯ ಮಹಾವಿದ್ಯಾಲಯದ ಡಾ. ಅಧಿಕಾರಿ ಪ್ರಭಾ ಹಾಗೂ ಬೆಳಗಾವಿಯ ಮಧುಮೇಹ ತಜ್ಞವೈದ್ಯರಾದ ಡಾ ಎಂ ವಿ ಜಾಲಿ ಅವರನ್ನು ಸತ್ಕರಿಸಿಲಾಯಿತು.
ಕಾಹೆರನ ಕುಲಪತಿ ಡಾ. ವಿವೇಕ ಸಾವೋಜಿ ಅವರು ಮೂರ್ಚೆರೋಗದ ಪುಸ್ತಕ, ಡಾ. ವಿ ಡಿ ಪಾಟೀಲ ಅವರು ಸ್ಮರಣಿಕೆಯನ್ನು ಬಿಡುಗಡೆಗೊಳಿಸಿದರು. ಹುಬ್ಬಳ್ಳಿಯ ಡಾ. ಜಿ ಬಿ ಸತ್ತೂರ ಮಾತನಾಡಿದರು.ಸಮಾರಂಭದಲ್ಲಿ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಎ ಎ ಪಾಂಗಿ, ಡಾ. ನಾಗರಾಜ ಡಾ. ಸ್ವಾಮಿ, ಡಾ. ರಮೇಶ, ಡಾ. ಹೆಚ್ ಬಿ ರಾಜಶೇಖರ, ಡಾ.ಮಾಧವ ಪ್ರಭು, ಡಾ. ಆರತಿ ದರ್ಶನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ವಿ ಎ ಕೋಠಿವಾಲೆ ಅವರು ಸ್ವಾಗತಿಸಿದರೆ, ಡಾ. ರೇಖಾ ಪಾಟೀಲ ವಂದಿಸಿದರು.