ಸಿಹಿ ಪದಾರ್ಥ ಹಾಗೂ ಐಸ್ ಕ್ರೀಮ್ ಮಕ್ಕಳಿಗೆ ಅಚ್ಚುಮೆಚ್ಚು ಆದರೆ ಅವು ಬೇಡ ಎನ್ನುತ್ತಿರುವ ಕೆಎಲ್ಇ ಮಧುಮೇಹ ಕೇಂದ್ರದ ಮಕ್ಕಳು ಸ್ವಯಂಪ್ರೇರಿತವಾಗಿ ಬೇಡ ಎನ್ನುತ್ತಾರೆ. ಇದು ಸಂಕಲ್ಪ, ಶಿಸ್ತು ಮತ್ತು ಶಿಕ್ಷಣದಿಂದ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ. ಅದನ್ನು ಈ ಕೇಂದ್ರವು ಮಾಡಿದೆ. ಇದು ಎಲ್ಲರಿಗೂ ಮಾದರಿ. ಮಧುಮೇಹ ಬಳಲುತ್ತಿರುವ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಆಯ್ದ ಪಾಲಕರ ತಂಡ ರಚಿಸಿ ಅವರಿಗೆ ಮಧುಮೇಹ ನಿಯಂತ್ರಣ ಕುರಿತು ಶಿಕ್ಷಣ ನೀಡಿದರೆ ಸಾಕು. ಪ್ರತಿದಿನ ಊರಿಂದ ಊರಿಗೆ ಅಲೆಯುವ ಕಬ್ಬು ಕಡಿಯುವ ಹಾಗೂ ಕುರಿ ಕಾಯುವ ಮಕ್ಕಳೂ ಕೂಡ ತಪಾಸಣೆ ಮತ್ತು ಚಿಕಿತ್ಸೆ ಪಡೆಯುತ್ತಾರೆ. ಅದಕ್ಕಾಗಿ ಅವಶ್ಯವಿರುವ ಇಚ್ಛಾಶಕ್ತಿ ಬೇಕು. ಪಾಲಕರ ಬಲಿಷ್ಠವಾದ ತಂಡ ಎಲ್ಲವನ್ನು ಸಾಧಿಸಬಹುದು ಎಂದು ಔರಂಗಬಾದನ ಸಾರ್ದಾ ಡಯಾಬಿಟಿಸ್ ಕೇಂದ್ರ ಹಾಗೂ ಸೆಲ್ಫ ಕೇರನ ಡಾ. ಅರ್ಚನಾ ಸರ್ದಾ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ವಿಶ್ವ ತಾಯಿಂದಿರ ದಿನಾಚರಣೆ ಅಂಗವಾಗಿ ದಿ. 15 ಮೇ 2023ರಂದು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ 23ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರಿಗೆ ನೀಡುವ ಮಧುಮೇಹ ಶಿಕ್ಷಣಕ್ಕಾಗಿ ಹಣ, ಪದವಿಯೂ ಅವಶ್ಯವಿಲ್ಲ. ಕೇವಲ ಕಲೆಯೊಂದಿದ್ದರೆ ಸಾಕು. ಆಹಾರ ಪದ್ದತಿ ತಿಳಿದಿರಬೇಕು. ಅದರಿಂದ ಮಧುಮೇಹ ಬದಲಾವಣೆ ಸಾಧ್ಯ. ಪಾಲಕರ ತಂಡ ರಚಿಸಿ ಅವರಿಗೆ ಶಿಕ್ಷಣ ನೀಡಿದರೆ ಸಾಕು ಎಂದು ತಿಳಿಸಿದರು.
ಮಕ್ಕಳಿಗೆ ಇನ್ಸುಲಿನ್ ಅವಶ್ಯವಿಲ್ಲ. ಮುಖ್ಯವಾಗಿ ಮಧುಮೇಹ ತಪಾಸಿಸಿಕೊಳ್ಳಲು ಗ್ಲುಕೊಮೀಟರ ಹಾಗೂ ಕಡಿಮೆ ದರದ ಸ್ಟ್ರಿಪ್ ಸಿಗಬೇಕು. ಇದರಿಂದ ಎಲ್ಲ ಮಕ್ಕಳ ತಪಾಸಣೆ ಸಾಧ್ಯ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ತಪಾಸಣಾ ಸಾಮಗ್ರಿಗಳನ್ನು ಪಡೆಯಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ ಅವರು, ನಮ್ಮ ಉಡಾನ ಯೋಜನೆಯಲ್ಲಿ 3 ಸಾವಿರ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯ ಮಧುಮೇಹ ಕೇಂದ್ರದಲ್ಲಿ 512 ಮಕ್ಕಳು ಚಿಕಿತ್ಸೆ ಪಡೆಯುತ್ತಿರುವದು ಸಂತೋಷವನ್ನುಂಟು ಮಾಡಿದೆ. ಡಾ. ಎಂ ವಿ ಜಾಲಿ ಹಾಗೂ ಸುಜಾತಾ ದಂಪತಿಗಳ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಈ ಭಾಗದ ಮಧುಮೇಹ ಮಕ್ಕಳಿಗೆ ಆಶಾಕಿರಣವಾಗಿದೆ ಎಂದು ಶ್ಲಾಘಿಸಿದರು.
ಚಿಕ್ಕ ಮಕ್ಕಳ ಮಧುಮೇಹ ತಜ್ಞವೈದ್ಯರಾದ ಡಾ. ಸ್ಮಜಾತಾ ಜಾಲಿ ಅವರು ಮಾತನಾಡಿ, ಬೇರೆಯವರಿಗೋಸ್ಕರ ಸೇವೆ ನೀಡುವವರು ತಾಯಿಯಾಗಿರುತ್ತಾರೆ. ಬೇರೆಯವರ ಸೇವೆಯಲ್ಲಿದ್ದರೆ ಸದಾ ಜೀವಂತ ಆದರೆ ಏನೂ ಮಾಡದಿದ್ದರೆ ಇದ್ದರೂ ಸತ್ತಂತೆ ಎಂದ ಅವರು, ಡಾ, ಅರ್ಚನಾ ಅವರು ಪ್ರಾರಂಭಿಸಿದ ಉಡಾನ ಸಂಸ್ಥೆಯ 3000 ಮಕ್ಕಳು ಇದ್ದಾರೆ. ಅವರ ಮಾದರಿ ಕರ್ಯದಂತೆ ಉಡಾನ ಯೋಜನೆಯನ್ನು ಬೆಳಗಾವಿಯಲ್ಲಿಯೂ ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ನಮ್ಮ ಕೇಂದ್ರದಲ್ಲಿ 512 ಮಕ್ಕಳು, 12 ಮೊಮ್ಮಕ್ಕಳು ಇದ್ದಾರೆ. ಮಧುಮೇಹ ಇದ್ದರೂ ಕೂಡ ಮದುವೆಯಾಗಬಹುದು. ಸುರತ, ಗೋವಾ ಹಾಗೂ ಮಹಾರಾಷ್ಟ್ರದಿಂದ ಮಕ್ಕಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. 10 ತಿಂಗಳೊಳಗಿನ ಮಧುಮೇಹ ಪೀಡಿತ ಮಕ್ಕಳಿಗೆ ವಿಶೇಷ ಕಾಳಜಿವಹಿಸಲಾಗುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಮಾತನಾಡಿ, ಮಧುಮೇಹ ತಪಾಸಣೆ ಮತ್ತು ಚಿಕಿತ್ಸೆಯ ಯೋಜನೆಯನ್ನು ವಿಸ್ತರಿಸಿ ಎಲ್ಲರಿಗೂ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಬೇಕಾಗಿದೆ. ಅದಕ್ಕೆ ಅವಶ್ಯವಿರುವ ಸಹಕಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ, ಹಿರಿಯ ಮಧುಮೇಹ ತಜ್ಞವೈದ್ಯರಾದ ಡಾ. ಎಂ ವಿ ಜಾಲಿ ಡಾ. ವಿ ಡಿ ಪಾಟೀಲ ಅವರು ಮಾತನಾಡಿದರು. ಡಾ. ತನ್ಮಯಾ ಮೆಟಗುಡ ಅವರು ಉಪಸ್ಥಿತರಿದ್ದರು. ಡಾ.ಪ್ರಾಚಿ ಹಾಗೂ ಡಾ. ಜ್ಯೋತಿ ನಿರೂಪಿಸಿದರು. ಡಾ. ಸಂಜಯ ಕಂಬಾರ ವಂದಿಸಿದರು.
ಮಧುಮೇಹವನ್ನು ನಿಂತ್ರಣದಲ್ಲಿಟ್ಟುಕೊಂಡಿರುವ ಸ್ವರಾಜ ಶಿಂದೆ, ಶ್ರೀದೇವಿ ಹೆಗ್ಗನ್ನವರ ಹಾಗೂ ಬೆಸ್ಟ ಮದರ ಭಾರತಿ ಜೈನ ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ರಸಪ್ರಶ್ನೆ, ಯೋಗ, ಧ್ಯಾನ, ಮಧುಮೇಹ ಅಡುಗೆ ತಯಾರಿಕೆ, ಆಹಾರ ಪದ್ದತಿ, ಶಿಕ್ಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮಾರು 140 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.