ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕೆಎಲ್ಇಎಸ್ ರೋಟರಿ ಸ್ಕಿನ್ (ಚರ್ಮ ಭಂಡಾರ) ಬ್ಯಾಂಕಗೆ ಚರ್ಮವನ್ನು ದಾನ ಮಾಡುವದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರದು, ಸುಟ್ಟ ಗಾಯಗಳಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುವ ರೋಗಿಗಳಿಗೆ ಆಸರೆಯಾಗಿದ್ದಾರೆ.
ಮುಂಬೈನ ಫೆಡರೇಶನ್ ಆಫ್ ಆರ್ಗನ್ ಆ್ಯಂಡ ಬಾಡಿ ಡೊನೇಶನ್ನ ಪದಾಧಿಕಾರಿ ಪುರುಶೋತ್ತಮ ಪವಾರ ಅವರು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ಲಾಸ್ಟಿಕ್ ಸರ್ಜನ ಹಾಗೂ ಸ್ಕಿನ್ ಬ್ಯಾಂಕನ ನಿರ್ದೇಶಕರಾದ ಡಾ. ರಾಜೇಶ ಪವಾರ ಅವರನ್ನು ಸಂಪರ್ಕಿಸಿ, ಮಂದಾಕಿನಿ ಸುರೇಶ ಭುಮಕರ (83) ಅವರು ನಿಧನರಾಗಿದ್ದು, ಅವರ ಕುಟುಂಬ ಸದಸ್ಯರು ಚರ್ಮದಾನ ಮಾಡಲು ಉತ್ಸುಕರಾಗಿದ್ದಾರೆ, ಆದ್ದರಿಂದ ತಾವು ದಯವಿಟ್ಟು ಮುಂದಿನ ಕಾರ್ಯಕ್ಕೆ ಅಣಿಯಾಗಿ ಎಂದು ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರರ್ವತ್ತರಾದ ಡಾ. ರಾಜೇಶ ಅವರು, ಡಾ. ಸಾಗರ ಕಾಟ್ಕರ, ಡಾ. ದೀಪಕ ಕೆ., ಹಾಗೂ ಸದಾನಂದ ಭಜಂತ್ರಿ ಅವರನ್ನು ಕೊಲ್ಹಾಪೂರದ ಭವಾನಿ ಪ್ರಸಾದ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ಕಳುಹಿಸಿಕೊಟ್ಟು, ಕೇವಲ 3 ಗಂಟೆಯಲ್ಲಿ ಮೃತದೇಹದ ಚರ್ಮವನ್ನು ತೆಗೆದುಕೊಂಡು ಬಂದರು.
ಚರ್ಮ ದಾನ ಮಾಡಿದ ಕುಟುಂಬ ಸದಸ್ಯರನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕ್ಲಿನಿಕಲ್ ಸೇವೆಗಳ ನಿರ್ದೇಶಕರಾದ ಡಾ. ಆರ್ ಬಿ ನೇರ್ಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅವರ ಕುಟುಂಬದ ಸದಸ್ಯರ ಹೃದಯ ಸ್ಪರ್ಶಿ ಮಾನವೀಯತೆ ಕಾರ್ಯವನ್ನು ಅವರು ಕುಟುಂಬಸ್ಥರ ಕಾರ್ಯವನ್ನು ಶ್ಲಾಘಿಸಿದ್ದಾರೆ.