ವಿಶ್ವದಾದ್ಯಂತ ಸುಮಾರು 463 ಮಿಲಿಯನ್ ಜನರು ಮಧುಮೇದಿಂದ ಬಳಲುತ್ತಿದ್ದರೆ, ಭಾರತದಲ್ಲಿ 77 ಮಿಲಿಯನ್ ರೋಗಿಗಳು ಇದ್ದಾರೆ. ಮಧುಮೇಹದಿಂದ ಕಾಲಿಗೆ ಆಗುವ ಅಲ್ಸರ (ಗಾಯ) ಅನ್ನು ತಡೆಯುವದು ನಿಜವಾದ ಸವಾಲಾಗಿ ಪರಿಣಮಿಸಿದೆ. ಶೇ. 25 ಜನರಲ್ಲಿ ಅತೀ ತೊಂದರೆಯಾದರೆ ಶೇ. 30ರಷ್ಟು ಜನರು ಕಾಲಿನ ಗಾಯಕ್ಕಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇದು ತುಂಬಾ ವೆಚ್ಚದಾಯಕವಾಗಿದ್ದು, ಮಧುಮೇಹ ಚಿಕಿತ್ಸೆಯ ಶೇ. 20ರಷ್ಟು ವೆಚ್ಚವನ್ನು ಇದಕ್ಕಾಗಿಯೇ ಮಾಡಬೇಕಾಗುತ್ತದೆ. ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಧುಮೇಹಿಗಳ ಸಂಖ್ಯೆಯಲ್ಲಿ ಏರುಗತಿಯಾಗುತ್ತಿದ್ದು, ಪ್ರತಿವರ್ಷ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಧುಮೇಹಿ ರೋಗಿಗಳ ಕಾಲನ್ನು ಕತ್ತರಿಸಲಾಗುತ್ತಿದೆ. ಕಾಲು ಕಳೆದುಕೊಳ್ಳುವದನ್ನು ತಡೆಯುದಕ್ಕಾಗಿಯೇ ಬೆಂಗಳೂರಿನ ಇಂಡಿಯನ್ ಇನಸ್ಟಿಟ್ಯೂಟ ಆಫ್ ಸೈನ್ಸ (ಐಐಎಸ್ಸಿ) ತಂತ್ರಜ್ಞರು ಮಧುಮೇಹಿಗಳಿಗಾಗಿಯೇ ಹಿತವಾದ ಪಾದುಕೆ(ಚಪ್ಪಲಿ)ಗಳನ್ನು ತಯಾರಿಸಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಕಾಲಿ(ಪಾದ)ನ ಸಮಸ್ಯೆ ಸಾಮಾನ್ಯ. ಕಾಲುಗಳಲ್ಲಿನ ನರ ಮತ್ತು ರಕ್ತನಾಳಗಳು ಹಾನಿಗೊಳಗಾಗಿ ಡಯಾಬಿಟಿಕ್ ನ್ಯೂರೋಪಥಿ ಎಂಬ ಸಮಸ್ಯೆ ಬಂದೆರಗುತ್ತದೆ. ಇದರಿಂದ ಪಾದದ ನರಗಳಿಗೆ ಹಾನಿಯುಂಟಾಗಿ ಮರಗಟ್ಟುವದು, ಜುಮ್ಮೆನಿಸುವದು ನೋವು ಅಥವಾ ಸ್ಪರ್ಶಜ್ಞಾನ ಇಲ್ಲದಿರುವದರಿಂದ ನರಗಳು ಸಂವೇದನೆಯನ್ನು ಕಳೆದುಕೊಂಡು, ಎಲ್ಲಿ ಎಷ್ಟು ಭಾರ ಬೀಳುತ್ತಿದೆ, ಬಿಸಿ ಆಗುತ್ತಿದೆ, ಶೀತ ತಗುಲುತ್ತಿದೆ ಎನ್ನುವದು ಗೊತ್ತಾಗುವುದಿಲ್ಲ. ಇದು ಗಂಭೀರವಾದಂತೆ ಕಾಲಿನ ಗಾಯ ಉಲ್ಭಣಿಸಿ ಸೋಂಕಿಗೆ ಒಳಗಾದ ನಿರ್ಧಿಷ್ಟ ಭಾಗವನ್ನು ಕತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಮಧುಮೇಹ ತಜ್ಞವೈದ್ಯರಾದ ಡಾ. ಎಂ ವಿ ಜಾಲಿ ಅವರು.
ನಮ್ಮ ಪಾದದ ರಚನೆ ವಿಭಿನ್ನವಾಗಿದ್ದು, ಸಮತಟ್ಟಾಗಿಲ್ಲ, ಆದರೆ ಚಪ್ಪಲಿಯ ವಿನ್ಯಾಸ ಸಮತಟ್ಟಾಗಿರುತ್ತದೆ. ಮಧುಮೇಹಿಗಳ ಪಾದದಲ್ಲಿ ಗಾಯವಾದಾಗ, ಅವರ ನಡಿಗೆಯ ಶೈಲಿ ಬದಲಾಗುತ್ತದೆ. ನೋವು ಇಲ್ಲದ ಕಡೆಗೆ ಹೆಚ್ಚು ಭಾರ ಹಾಕಲಾಗುತ್ತದೆ. ಪರಿಣಾಮ ಅಲ್ಲಿ ಗಾಯವಾಗುತ್ತದೆ. ಹೊಸದಾದ, ಬಿಗುವಾದ ಚಪ್ಪಲಿಗಳಿಂದ ಗಾಯವಾಗುವದು ಸಾಮಾನ್ಯ. ರಾತ್ರಿ ಮಲಗಿದಾಗ ಧುತ್ತನೆ ಬಂದೆರಗುವ ಕಾಲುನೋವಿಗೂ ಕೂಡ ಚಪ್ಪಲಿ ಅಥವಾ ಬೂಟು ಕಾರಣವಾಗಿರುತ್ತವೆ. ಚಪ್ಪಲಿ ಸವೆದು ದೇಹದ ಭಾರ ಪಾದದ ಎಲ್ಲ ಕಡೆಯೂ ಒಂದೇ ತೆರನಾಗಿ ಬೀಳದೇ ಹೋದಾಗ ಕಾಲು ನೋಯುತ್ತದೆ.
ಮಧುಮೇಹ ಪೀಡಿತರ ಪಾದಗಳನ್ನು ರಕ್ಷಿಸಲು ವಿಶೇಷ ರೀತಿಯ ಪಾದರಕ್ಷೆಗಳ ಅವಶ್ಯಕತೆ ಇದೆ, ಈಗಾಗಲೇ ಮಧುಮೇಹಿಗಳಿಗಾಗಿಯೇ ವಿಶೇಷ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಲಭ್ಯ. ಪಾದದ ರಚನೆಯನ್ನು ಅನುಸರಿಸಿ ರೂಪಿಸಲಾದವುಗಳು ಬಹಳ ಜನಪ್ರಿಯ. ಸ್ವಲ್ಪ ಅಗ್ಗವೂ ಕೂಡ, ಆದರೆ ಇವುಗಳನ್ನು ವ್ಯಕ್ತಿಗಳ ಪಾದಗಳ ಅಚ್ಚನ್ನು ತೆಗೆದು, ವಿಶೇಷವಾಗಿ ತಯಾರಿಸಬೇಕು. ‘ಮೆಮರಿ ಫೋಮ್’ ಎನ್ನುವ ವಸ್ತುಗಳಿಂದ ಚಪ್ಪಲಿ ಮಾಡುವುದೂ ಉಂಟು. ಪಾದದ ಆಕಾರಕ್ಕೆ ಹೊಂದಿಕೊಳ್ಳುತ್ತದೆಯಾದ್ದರಿAದ ತುಸು ಒತ್ತಡ ಕಡಿಮೆಯಾದಂತೆ ಅನಿಸುತ್ತದೆ. ಗುಬುಟುಗಳಿರುವ ಪ್ರೆಶರ ಸೋಲ್ ಡಯಾಬೆಟಿಕ್ ಚಪ್ಪಲಿಗಳು ದೊರೆಯುತ್ತವೆ, ಆದರೆ ಇವುಗಳ ವಿನ್ಯಾಸÀದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಫಲಕಾರಿಯಾಗದೇ ಫಲಿತಾಂಶ ನಿರೀಕ್ಷಿಸಿದಂತೆ ಇರುವುದಿಲ್ಲ. ಇವುಗಳನ್ನು ಸ್ಟೇಟೆಕ್ ಆಪ್ಲೋಡಿಂಗ್ ಪಾದರಕ್ಷೆ ಎನ್ನುತ್ತಾರೆ.
ಅಕ್ಯುಯೇಟೆಡ್ ಪಾದರಕ್ಷೆಗಳದ್ದು ಇನ್ನೊಂದು ಬಗೆ, ಪಾದಗಳ ಮೇಲೆ ಬೀಳುವ ಒತ್ತಡವನ್ನೋ ಉಷ್ಣತೆಯನ್ನೋ ಅಳೆಯುವ ಎಲೆಕ್ಟ್ರಾನಿಕ್ ಸಾಧನಗಳಿರುತ್ತವೆ. ಅದಕ್ಕೆ ತಕ್ಕಂತೆ ಪಾದರಕ್ಷೆಯಲ್ಲಿ ಗಾಳಿ ಅಥವಾ ದ್ರವಗಳನ್ನು ತುಂಬಿ ಬದಲಿಸುವ ಪಂಪಿನಂತಹ ಅಕ್ಚುವೇಟರುಗಳು ಇರುತ್ತವೆ. ನಡಿಗೆಗೆ ತಕ್ಕಂತೆ ಪಾದದ ಮೇಲಿನ ಒತ್ತಡವನ್ನು ಸಂವೇದಕ(ಸೆನ್ಸಾರ)ಗಳು ಗ್ರಹಿಸಿ, ಅಕ್ಯುವೇಟರಿಗೆ ಮಾಹಿತಿಯನ್ನು ನೀಡುತ್ತವೆ. ಆ ಕ್ಷಣವೇ ಪಂಪು ಆ ಜಾಗಕ್ಕೆ ಮಾತ್ರ ಗಾಳಿಯನ್ನು ಒತ್ತಿ ಪಾದರಕ್ಷೆಯನ್ನು ದಪ್ಪ ಅಥವಾ ತೆಳ್ಳಗಾಗಿಸುವ ಕಾರ್ಯ ಮಾಡುತ್ತದೆ, ಈ ವ್ಯವಸ್ಥೆಯನ್ನು ‘ಡೈನಾಮಿಕ್ ಆಫ್ಲೋಡಿಂಗ್ ಎನ್ನುತ್ತಾರೆ, ಇವು ದುಬಾರಿ ಮತ್ತು ತಯಾರಿಕೆಯೂ ಕಷ್ಟ. ಐದು ವರ್ಷಗಳ ಹಿಂದೆ ಇಂಗ್ಲೆಂಡಿನ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ತಜ್ಞರು ರೂಪಿಸಿದ್ದ ‘ಇನ್ಫ್ಯಾಕೋಡ್.
ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸಸಿನ ತಂತ್ರಜ್ಞರಾದ ಕೊಂಡಯ್ಯ ಅನಂತಸುರೇಶ್ ಮತ್ತು ತಂಡದವರು ರೂಪಿಸಿರುವ ಪಾದರಕ್ಷೆ ಬಗೆ ಕೂಡ ಡೈನಾಮಿಕ್ ಅಫ್ಲೋಡಿಂಗ್. ಅಂದರೆ ಒತ್ತಡ ಬದಲಾದಂತೆ ತಾನೂ ಅದಕ್ಕೆ ಹೊಂದಿಕೊಳ್ಳುತ್ತ ಒತ್ತಡವನ್ನು ಕಡಿಮೆ ಮಾಡಬಲ್ಲುದು. ಆದರೆ ಇದು ಎಲೆಕ್ಟ್ರಾನಿಕ್ ಸಾಧನವಲ್ಲ, ತ್ರೀಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಭವಾಗಿ ರಚಿಸಬಹುದಾದ ವಿನ್ಯಾಸದ ಪಾದರಕ್ಷೆ, ಮೃದುವಾದ ಪಾಲಿಯುರಿಭಿನ್ ಎನ್ನುವ ವಸ್ತುವಿನಿಂದ ಇದನ್ನು ತಯಾರಿಸಲಾಗಿದೆ. ಇದು ತನ್ನಂತಾನೇ ಧರಿಸಿದವರ ಪಾದದ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ.
ಪಾದವನ್ನು ನೆಲಕ್ಕೆ ಊರಿದಾಗ ಎಲ್ಲೆಲ್ಲಿ ಭಾರ ಬೀಳುತ್ತದೆ ಎನ್ನುವುದನ್ನು ಸಂಶೋಧನೆ ಮಾಡಿ ಹಾಳೆಯನ್ನು ರಚಿಸಿದ್ದಾರೆ. ಒತ್ತಡ ಹೆಚ್ಚು ಬೀಳುವ ಜಾಗಗಳಲ್ಲಿ ಮಾತ್ರವೇ ಕಮಾನಿನಂತಹ ರಚನೆಗಳನ್ನು ರೂಪಿಸಿದ್ದಾರೆ. ಕಮಾನಿನ ಕೆಳಗೆ ಪೊಳ್ಳು ಇರುವುದರಿಂದ ಅದು ಒತ್ತಡ ಬಿದ್ದಾಗ ಕುಸಿದು, ಒತ್ತಡವಿಲ್ಲದಿದ್ದಾಗ ಪಟ್ಟನೆ ಪುಟಿದು ಮೊದಲಿನ ಆಕಾರಕ್ಕೆ ಮರಳುತ್ತದೆ, ಪುಟಿಯಲು ಸುಲಭವಾಗುವಂತೆ ಅವುಗಳ ಉದ್ದ ಮತ್ತು ಅಗಲಗಳನ್ನು ಲೆಕ್ಕ ಹಾಕಿ ಈ ಕಮಾನುಗಳ ಮೇಲೆ ಸಪಾಟಾದ ಪಾದರಕ್ಷೆಯ ಅಟ್ಟೆಯನ್ನು ಅಳವಡಿಸಲಾಗಿದೆ. ನೋಡಲು ಸಾಮಾನ್ಯ ಪಾದರಕ್ಷೆಯಂತೆಯೇ ಕಂಡರೂ, ಅವರವರ ಪಾದದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲದು. ‘ನಡಿಗೆಯ ರೀತಿ ಬದಲಾದರೂ, ಎಲ್ಲೆಲ್ಲಿ ಭಾರ ಬೀಳುತ್ತದೆಯೋ ಅಲ್ಲಿ ಮಾತ್ರ ಆಕಾರ ಬದಲಾಗುವುದರಿಂದ ಪಾದದ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ’ ಎನ್ನುತ್ತಾರೆ ಅನಂತಸುರೇಶ್, ಅರವತ್ತೈದರಿಂದ ಎಪ್ಪತ್ತೈದು ಕಿಲೋಗ್ರಾಂ ತೂಕದವರೆಗೂ ಈ ಕಮಾನುಗಳು ಮುರಿಯುವುದಿಲ್ಲವಾದ್ದರಿಂದ, ರೋಗಿಯ ತೂಕ ಹೆಚ್ಚು ಕಡಿಮೆ ಆದರೂ ಪಾದರಕ್ಷೆಯನ್ನು ಬದಲಿಸುವ ಅವಶ್ಯಕತೆ ಇಲ್ಲ.
ಬಸವರಾಜ ಸೊಂಟನವರ
ಜನಸಂಪರ್ಕ ಅಧಿಕಾರಿಗಳು