ಅಂಗಾoಗ ದಾನ ಮಾಡಿ

ಅಂಗಾoಗ ದಾನ ಮಾಡಿ ಎನ್ನುವುದಕ್ಕಿಂತ ದಾನಮಾಡಿದವರ ಭಾವನಾತ್ಮಕ ಜೀವನವನ್ನು ಕಂಡು ಅವರಿಗೆ ಸಮಾಧಾನ ಪಡಿಸುವ ಕಾರ್ಯ ಮಾಡುವದು ಬಹಳ ಮುಖ್ಯ. ದಾನ ಪಡೆದ ವ್ಯಕ್ತಿಯು ಮರುಜನ್ಮ ಪಡೆದು ಹೊಸ ಜೀವನ ಮಾಡುತ್ತಿದ್ದರೆ, ದಾನ ಮಾಡಿದ ವ್ಯಕ್ತಿಯ ಕುಟುಂಭಸ್ಥರು ಒಂದೆಡೆ ಧನ್ಯತಾಭಾವದಿಂದ ಸುಖ ದುಖಗಳನ್ನು ಹಂಚಿಕೊಳ್ಳುತ್ತ ಕಾಲ ಕಳೆಯುತ್ತಿರುತ್ತಾರೆ. ಅವರನ್ನೆಲ್ಲ ಇಂದು ಒಂದೇ ವೇದಿಕೆಗೆ ಕರೆತಂದು ಕೃತಜ್ಞತಾ ಪೂರ್ವಕವಾಗಿ ಅಭಿನಂದನೆ ಸಲ್ಲಿಸುವ ಅವಕಾಶ ಇಂದು ಲಭಿಸಿತ್ತು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯು ಸಂಶೋಧನಾ ಕೇಂದ್ರದಲ್ಲಿ ವಿಶ್ವ ಅಂಗಾAಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಸಮಾರಂಭದಲ್ಲಿ ಹೃದಯ, ಕಿಡ್ನಿ ಹಾಗೂ ಚರ್ಮದಾನ ಮಾಡಿದ ಕುಟುಂಭಸ್ಥರನ್ನು ಸನ್ಮಾನಿಸಲಾಯಿತು.
ಕಿಡ್ನಿ ಕಸಿಯ ಮುಖ್ಯ ತಜ್ಞವೈದ್ಯರಾದ ಡಾ. ರಾಜೇಂದ್ರ ನೇರ್ಲಿ ಅವರು ಮಾತನಾಡಿ, ವಿಶ್ವದ ವಿವಿಧ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂಗಾAಗ ದಾನಗಳು ಅತೀ ಕಡಿಮೆ. ಧಾರ್ಮಿಕ, ಭಾವಾನಾತ್ಮಕ ಹಾಗೂ ಮೂಡನಂಬಿಕೆಯಿAದ ಅಂಗಾAಗ ದಾನ ಮಾಡಲು ಹಿಂಜರಿಯುತ್ತಾರೆ. ಅಂಗಾAಗ ದಾನಿಗಳ ಕುಟುಂಬ ಸದಸ್ಯರ ಭಾವನೆ ಬಹಳ ನೋವಿನಿಂದ ಕೂಡಿರುತ್ತದೆ. ಅಂತ ಸಂದರ್ಭದಲ್ಲಿ ಅವರಿಗೆ ಸಮಧಾನ ಪಡಿಸಿ ದಾನಿಗಳನ್ನಾಗಿ ಮಾರ್ಪಡಿಸಿ, ಅದನ್ನು ಮಣ್ಣು ಮಾಡುವ ಬದಲು ದಾನ ಮಾಡಿ ಎಂದು ಹೇಳುವದು ಬಹಳ ಕಠಿಣ ಕರ‍್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಾಭಾರತದ ಕರ್ಣ ತನ್ನ ಚರ್ಮವನ್ನು ದಾನ ಮಾಡುತ್ತಾನೆ. ಅದರ ಪ್ರೇರಕ ಶಕ್ತಿಯಾಗಿ ಈಗಿನ ಪೀಳಿಗೆ ಬೇರೊಬ್ಬರ ಜೀವ ಉಳಿಸಲು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾAಗಗಳನ್ನು ದಾನ ಮಾಡಲು ಮುಂದೆ ಬರಬೇಕು. ಮೆದುಳು ನಿಷ್ಕಿçÃಯಗೊಂಡ ವ್ಯಕ್ತಿಯನ್ನು ಜೀವ ಉಳಿಸುವ ಸಾಧನದ ಮೇಲೆ ಇಟ್ಟರೂ ಕೂಡ ಆತ ಇದ್ದು ಸತ್ತಂತೆ. ಆದರೆ ಆತನ ಅಂಗಾAಗಳು ಕರ‍್ಯನಿರ್ವಹಿಸುತ್ತಿರುವದರಿಂದ ಬಹು ಅಂಗಾAಗಗಳನ್ನು ದಾನ ಮಾಡಿದರೆ ಅವುಗಳಿಂದ 8 ಜನರ ಜೀವ ಉಳಿದು ಅವರಿಗೆ ಹೊಸ ಜೀವನ ನೀಡಿದಂತಾಗುತ್ತದೆ ಎಂದು ವಿವರಿಸಿರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಮನುಷ್ಯ ಸಂತ್ರಪ್ತಿಯಿAದ ಇದ್ದರೆ ಸಮೃದ್ದಿಗಾಗಿ ಹೋರಾಟ ಮಾಡುತ್ತಾರೆ. ಇವತ್ತಿನ ದಿನಗಳಲ್ಲಿ ಅಂಗಾAಗ ದಾನಿಗಳು ಭಾಗ್ಯವಂತರು, ಸಿರಿವಂತರು, ಹೃದಯವಂತರು, ಅವರು ಮರಣಾ ನಂತರ ನೀಡಿದರು ಕೂಡ 8 ಜನರು ಹೊಸ ಜೀವನ ನೀಡಿದವರು. ಅವರು ಯಾವಾಗಲೂ ಸ್ಮರಣಿಯರು ಎಂದ ಅವರು, ಬೆಂಗಳೂರು ಹೊರತುಪಡಿಸಿದರೆ ನಮ್ಮಲ್ಲಿ ಹೃದಯ ಕಸಿ ಮಾಡಿರುವದು ಪ್ರಥಮ. ಈಗ 7 ಹೃದಯ, 58 ಕಿಡ್ನಿ ಕಸಿ ಮಾಡಲಾಗಿದೆ. ಈಗ ಎಲ್ಲ ವಿಧದ ಅಂಗಾAಗಗಳ ಕಸಿ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಅಂಗಾAಗ ದಾನದ ಕುರಿತು ಅರಿವು ಮತ್ತು ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡಬೇಕಾಗಿದೆ. ತನ್ನ ಮಗು ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದಾಗ ಅಂಗಾAಗ ಸಿಕ್ಕರೆ ಎಷ್ಟು ಸಂತೋಷ. ಆದರೆ ಕೊಡುವವರ ಮನಸ್ಸು ಕೂಡ ಅಷ್ಟೆ ಮುಖ್ಯ. ಕರ್ಣನಂತೆ ದಾನಿಯಾಗಬೇಕು. ಅಂದಾಗ ಮಾತ್ರ ಸಂತೃಪ್ತಿ. ಬೇರೆವರಿಗಾಗಿ ಇರುವವರು. ಅಂಗಗಳನ್ನು ಹಾಳು ಮಾಡದೇ ಆತ್ಮ ದರ‍್ಯದಿಂದ ದಾನ ಮಾಡಬೇಕು. ಯಾವುದೇ ಜಾತಿ ಮತ ಪಂಥ ಇಲ್ಲ. ಎಲ್ಲರೂ ಒಂದೇ ಎಂದು ತಿಳಿದು ಇನ್ನೊಬ್ಬರಿಗೆ ಸಹಾಯಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ ಸರ್ಜನ್ ಡಾ. ದರ್ಶನ ರಜಪೂತ ಅವರು ಮಾತನಾಡಿ, ಸ್ಕಿನ್ ದಾನ ಮುಖ್ಯವಾಗಿ ಸಣ್ಣಮಕ್ಕಳು ಸುಟ್ಟಕೊಂಡು ಗಾಯಗೊಂಡಾಗ ಬಹಳ ಉಪಯೋಗಕ್ಕೆ ಬರುತ್ತದೆ. ಚರ್ಮವನ್ನು ಮರಣಾನಂತರ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಇದನ್ನು 5 ವರ್ಷಗಳವರೆಗೆ ಸಂರಕ್ಷಿಸಿ ಇಟ್ಟುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿ ಬ್ಲಡ್ ಗ್ರುಪ ಅವಶ್ಯವಿಲ್ಲ. 20 ಲಕ್ಷ ಜನ ಸುಟ್ಟ ಗಾಯಗಳಿಂದ ಪ್ರತಿವರ್ಷ ಬಳಲುತ್ತಾರೆ. ಅವರಿಗೆ ಚಿಕಿತ್ಸೆ ಬದಲಾಗಿ ಚರ್ಮ ಗ್ರಾಪ್ಟ ಮಾಡಿದರೆ ಬದುಕುಳಿಯುವ ಸಾಧ್ಯತೆ ಅಧಿಕವಾಗಿರುತ್ತದೆ. 60 % ಜನರಿಗೆ ಅಲೋಗ್ರಾಫ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಮ್ಟೆ ಗ್ರಾಮದ ಸರಪಂಚÀ ಲಕ್ಷö್ಮಣ ಕೇಸಲ್ಕರ, ವಿಜಯ ಮೋರೆ, ಅಭಿಮನ್ಯು ಡಾಗಾ ಹಾಗೂ ಅಂಗಾAಗಳನ್ನು ದಾನ ಮಾಡಿದ ಅವರ ಕುಟುಂಬ ಸದಸ್ಯರು ಮಾತನಾಡಿದರು. ಪುಷ್ಪಾ ಪವಾರ, ಜಯಶ್ರೀ ದಂಡಗಿ, ಆಶಾ ಸಾವಂತ, ಅರ್ಜುನ ಗಾಂವಕರ, ಪ್ರಕಾಶ ನಡೋಣಿ,ಜ್ಯೋತಿ ಕುರಮುಡೆ, ಲಿಲಾದೇವಿ ರಾಜಪುರೋಹಿತ, ಪುಷ್ಪಲತಾ ಶ್ರೀಖಂಡೆ ಹಾಗೂ ಪೊಲೀಸ ಇಲಾಖೆಯನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆನಂದ ವಾಘರಾಳಿ, ಡಾ. ಬಸವರಾಜ ಬಿಜ್ಜರಗಿ, ಡಾ. ಪ್ರಮೋದ ಸುಳಿಕೇರಿ, ನಿರಜ ದಿಕ್ಷಿತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ

Popular Doctors

Related Articles