ಗ್ರಾಮೀಣ ವೈದ್ಯ ಕಾಯಕದಲ್ಲಿ ಮಾನವೀಯತೆ ಮೆರೆದ ಡಾ. ನಾಯಿಕವಾಡಿ

ತಾನು ಮಾಡುವ ಕಾಯಕದಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಕಾಳಜಿಯ ಪ್ರಮುಖ ಮೌಲ್ಯಗಳನ್ನು ಒತ್ತಿಹೇಳಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು, ವೈದ್ಯಕೀಯ ಸೇವಾ ನಿರತರ ಕುರಿತು, “ನೀವು ನಿಸ್ವಾರ್ಥ ಸಮರ್ಪಣೆಯ ಮನೋಭಾವದಿಂದ ಸೇವೆ ಸಲ್ಲಿಸಿದರೆ, ಅಪರಿಮಿತ ಮತ್ತು ನಿಜವಾದ ಸಂತೋಷವನ್ನು ಪಡೆಯುತ್ತೀರಿ” ಎಂದು ಹೇಳಿದ್ದರು. ಅದಕ್ಕನುಗುಣವಾಗಿ ಗಾಂಧಿಜಿಯ ತತ್ವಾದರ್ಶದ ಮೂಲಕ ನಿಸ್ವಾರ್ಥ ಸೇವೆಯನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡು, ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಅರ್ಪಿಸುವಲ್ಲಿ ನಿರತರಾಗಿದ್ದಾರೆ ಡಾ.ವಿಲಾಸ ನಾಯಿಕವಾಡಿ. ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಹಾಗೂ ಅವರ ಆರೋಗ್ಯ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಘಟಪ್ರಭಾ ಎಂಬ ಚಿಕ್ಕ ಪಟ್ಟಣದಲ್ಲಿ ನೆಲೆನಿಂತರು. ಇಂದಿಗೂ ಕೂಡ ಅವರ ಸೇವೆ ನಿರಂತರವಾಗಿ ಬಿಡುವಿಲ್ಲದೆ ನಡೆದಿದೆ.

ಘಟಪ್ರಭಾದ ಜೆ ಜಿ ಸಹಕಾರಿ ಆಸ್ಪತ್ರೆಗೆ ಬಂದ ಅವರು ರೋಗಿಗಳ ಮಾನವೀಯ ಸೇವೆಯ ಮೂಲಕ ಅಭಿವೃದ್ದಿಯ ದಾಪುಗಾಲು ಹಾಕಿತು. ಅವರಲ್ಲಿನ ಉತ್ಸಾಹ, ವೈದ್ಯಕೀಯ ವೃತ್ತಿಯ ಬದ್ಧತೆ ಹಾಗೂ ಯೋಜನೆಗಳಿಗೆ ಆಡಳಿತ ಮಂಡಳಿಯ ಬೆಂಬಲದಿAದ ಹಲವಾರು ಯೋಜನೆಗಳನ್ನು ಕರ‍್ಯಗತಗೊಳಿಸಿದಾಗ ಚಿಮ್ಮುವ ಕಾರಂಜಿಯAತೆ ಒಮ್ಮೆಲೆ ಅಭಿವೃದ್ದಿಯ ಪರ್ವ ಹಾಗೂ ರೋಗಿಗಳ ಆರೈಕೆ, ಚಿಕಿತ್ಸೆ ಪುಟಿದೆದ್ದಿತು. ಅನಾರೋಗ್ಯದಿಂದ ಬಳಲುತ್ತಿದ್ದ ಆಸ್ಪತ್ರೆಯು ನೂತನ ಆಲೋಚನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಸುಮಾರು 2 ದಶಕಗಳ ಕಾಲ ಅವರ ಧೈರ್ಯದ ಅವಿರತ ಪ್ರಯತ್ನಗಳ ಫಲವಾಗಿ ಆಸ್ಪತ್ರೆಯ ಯಶೋಗಾಥೆ ಒಂದು ಉನ್ನತ ಮಟ್ಟಕ್ಕೆ ಬಂದು ತಲುಪಿತು.

Dr. Vilas Naikwadi ghataprabha

ಮಹಾರಾಷ್ಟçದ ಗಡಿಂಗ್ಲಜ ತಾಲೂಕಿನ ಬುಗಡಕಟ್ಟಿಯಲ್ಲಿ ದಿ. 24 ಅಗಷ್ಟ 1944 ರಂದು ಜನಿಸಿದ ಡಾ. ವಿಲಾಸ ನಾಯಿಕವಾಡಿ ಅವರು ತಮ್ಮ ಶಿಕ್ಷಣವನ್ನು ಶಿಕ್ಷಣವನ್ನು ರಾಯಬಾಗ ತಾಲೂಕಿನ ಕುಡಚಿಯಿಂದ ಪ್ರಾರಂಭಿಸಿ. ಸಂಕೇಶ್ವರ ಮತ್ತು ಬೆಳಗಾವಿಯ ಆರ್‌ಎಲ್‌ಎಸ್ ಮಹಾವಿದ್ಯಾಲಯದಲ್ಲಿ ಪಿಯುಸಿ ಅಭ್ಯಸಿಸಿ, ಹುಬ್ಬಳ್ಳಿಯಲ್ಲಿ (1964-68) ವೈದ್ಯಕೀಯ MBBS ಪದವಿಯನ್ನು ಪಡೆದು, ಪಾಂಡಿಚೇರಿಯ ಪ್ರತಿಷ್ಠಿತ JIPMER ನಲ್ಲಿ MS (ಜನರಲ್ ಸರ್ಜ್ರಿ) 1978-80ರಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಕೊಂಡರು. ಗ್ರಾಮೀಣ ಜನರ ಸೇವೆ ಮಾಡಬೇಕೆಂಬ ಮಹೋನ್ನತ ಉದ್ದೇಶ ಹೊತ್ತು ಉತ್ಸಾಹ ಭರಿತ ಯುವ ವೈದ್ಯರಾಗಿ, ಘಟಪ್ರಭಾದ ಜೆ ಜಿ ಸಹಕಾರಿ ಆಸ್ಪತ್ರೆಯಲ್ಲಿ ಸೇವಾ ಕಾಯಕದಲ್ಲಿ ನಿರತರಾದರು.

ಡಾ. ನಾಯಿಕವಾಡಿ ಅವರು ಜೆ ಜಿ ಸಹಕಾರಿ ಆಯುರ್ವೇದ, ನರ್ಸಿಂಗ್ ಮಹಾವಿದ್ಯಾಲಯ, ವಸತಿ ಗೃಹಗಳು ಹಾಗೂ ಉನ್ನತ ದರ್ಜೆಯ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದೇಶ ಹಾಗೂ ವಿದೇಶಗಳಿಂದ ಚಿಕಿತ್ಸೆ ಹಾಗೂ ಆರೈಕೆಗಾಗಿ ಜನರನ್ನು ಆಕರ್ಷಿಸುತ್ತಿದೆ. ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಗೊಂಡ ಕೇಂದ್ರವು ಬೆಂಗಳೂರು ಮತ್ತು ಮುಂಬೈ ನಡುವಿನ ಏಕೈಕ ಸಮಗ್ರ ಪ್ರಕೃತಿ ಚಿಕಿತ್ಸಾ ಕೇಂದ್ರ. 1981-2004 ರಿಂದ 2 ದಶಕಗಳ ಕಾಲ ಅವರ ಸೇವೆಯು ಜೆ ಜಿ ಸಹಕಾರಿ ಆಸ್ಪತ್ರೆ ಮತ್ತು ಸಂಸ್ಥೆಗಳ ಸಮೂಹದ ಇತಿಹಾಸದಲ್ಲಿ ಸುವರ್ಣ ಘಳಿಗೆ. 5 ಲಕ್ಷಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸಿ, 70,000 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಸಂಘಟನಾ ಕರ‍್ಯದರ್ಶಿಯಾಗಿ 1990ರಲ್ಲಿ ಬೆಳಗಾವಿಯಲ್ಲಿ ಎಸಿಆರ್‌ಎಸ್‌ಐ ಸಮ್ಮೇಳನವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 1999 ರಲ್ಲಿ ಕೊಲೊ-ರೆಕ್ಟಲ್ ಸರ್ಜನ್ಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

WhatsApp Image 2022 06 30 at 10.21.13 PM

ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ದಿನದ 12-14 ಗಂಟೆಗಳ ಕಾಲ ನಿರಂತರ ಸೇವೆಯಲ್ಲಿ ನಿರತರಾಗಿರುತ್ತಾರೆ. ಐಷಾರಾಮಿ ಜೀವನವನ್ನು ಬದಿಗಿಟ್ಟು, ಜನರ ಸೇವೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 78 ವರ್ಷ ವಯಸ್ಸಿನ ಇವರು ತುರ್ತು ಚಿಕಿತ್ಸೆಗಾಗಿ ಮದ್ಯರಾತ್ರಿ ಕೂಡ ಆಸ್ಪತ್ರೆಗೆ ಧಾವಿಸುತ್ತಾರೆ.

ಎರಡು ದಶಕಗಳ ಕಾಲ ಜೆ ಜಿ ಸಹಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ನಂತರ, 2005-2008 ರವರೆಗೆ ಗಡಿಂಗ್ಲಜ್ ಪಟ್ಟಣದಲ್ಲಿ ಸೇವೆ ಸಲ್ಲಿಸಿದರು. ಆದರೆ ಜನರ ಪ್ರೀತಿ ಮತ್ತು ಬೇಡಿಕೆ ಅವರನ್ನು ಘಟಪ್ರಭಾಕ್ಕೆ ಮರಳಿ ಕರೆತಂದಿತು. ಅವರು 2010 ರಲ್ಲಿ ನಾಯ್ಕವಾಡಿ ವೈದ್ಯಕೀಯ ಕೇಂದ್ರ ಮತ್ತು 2022 ರಲ್ಲಿ ಶಿರಢಾನ್‌ನಲ್ಲಿ ಫಿಸಿಯೋ-ವೆಲ್ನೆಸ್ ಸೆಂಟರ್ ಅನ್ನು ಸ್ಥಾಪಿಸಿದರು. ಘಟಪ್ರಭಾದ ನಾಯಿಕವಾಡಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಡಾ.ವಿಲಾಸ ನಾಯಿಕವಾಡಿ ಅವರು ಮಾತನಾಡಿ, ವೈದ್ಯ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ವೈದ್ಯಕೀಯ ಕ್ಷೇತ್ರ ಕೇವಲ ಚಿಕಿತ್ಸೆ ಮತ್ತು ರೋಗಕ್ಕೆ ಸಂಬAಧಿಸಿದ್ದಲ್ಲ. ತನ್ನ ರೋಗಿಗಳು ಮತ್ತು ಅವರ ತೊಂದರೆಗಳನ್ನು ಅರ್ಥಮಾಡಿಕೊಳ್ಳುವವನೇ ನಿಜವಾದ ವೈದ್ಯ ಎಂದು ಹೆಮ್ಮೆಯಿಂದ ಹೇಳುವ ಅವರು, ನನ್ನ ಮಗ ಡಾ. ವಿವೇಕ್‌ಗೆ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವ ಸಂಸ್ಕೃತಿ, ಸಂಸ್ಕಾರ ಕಲಿಸಿದ್ದೇನೆ. ಹುಕ್ಕೇರಿ ತಾಲೂಕಿನ ಶಿರಢಾನ ಗ್ರಾಮದಲ್ಲಿ ಎಲಬು ಕೀಲು ಶಸ್ತ್ರಚಿಕಿತ್ಸಕರಾಗಿ ಮತ್ತು ಸೊಸೆ ಡಾ. ಸೌಮ್ಯಾ ಅವರು ನಿಡಸೋಶಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ತಿçÃರೋಗ ಮತ್ತು ಹೆರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಬ್ಬ ಪುತ್ರ ಅರವಿಂದ್ ಬೆಂಗಳೂರಿನ ಐಬಿಎಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

WhatsApp Image 2022 06 30 at 10.21.10 PM

ಡಾ. ಮೆಟಗುಡ್, ಡಾ. ಪಿ ಎನ್ ಜೋಶಿ, ಮುಂಬೈನ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಇಂದ್ರು ಖುಬ್ಚಂದಾನಿ, ಕೊಲೊ-ರೆಕ್ಟಲ್ ಸರ್ಜನ್ ಅವರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ. ನಿಖರವಾದ ರೋಗನಿರ್ಣಯವನ್ನು ಒದಗಿಸುವ ಇಮೇಜಿಂಗ್ ವಿಜ್ಞಾನದಲ್ಲಿನ ಇತ್ತೀಚಿನ ತಾಂತ್ರಿಕ ಪ್ರಗತಿಗೆ ಧನ್ಯವಾದ ಅರ್ಪಿಸಿ, CT, MRI ಸ್ಕ್ಯಾನ್, ಗ್ಯಾಸ್ಟ್ರೋಸ್ಕೋಪಿಗಳ ಸಹಾಯದಿಂದ ನಿಖರವಾದ ರೋಗಪತ್ತೆ ಮಾಡಿ, ಶಸ್ತ್ರಚಿಕಿತ್ಸಕರಿಗೆ ಸಹಕಾರಿಯಾಗಿವೆ. ಯುವ ವೈದ್ಯರಿಗೆ ಮಾದರಿಯಾದ ಇವರು, ನಿಮ್ಮ ಕೈಲಾದಷ್ಟು ಸಹಾಯ ಮಾಡಿ, ರೋಗಿಗಳಿಗೆ ಎಂದಿಗೂ ಹಾನಿ ಮಾಡಬೇಡಿ. ನೀವು ಕಾರ್ಯನಿರ್ವಹಿಸುವ ಮೊದಲು ಎರಡು ಬಾರಿ ಯೋಚಿಸಿ. ನೀವು ಉತ್ತಮ ಶಸ್ತ್ರಚಿಕಿತ್ಸಕರಾಗಬೇಕಾದರೆ, 5-6 ವರ್ಷಗಳ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ವೈದ್ಯರಿಗೆ ಪ್ರತಿಯೊಬ್ಬ ರೋಗಿಯೂ ಒಬ್ಬ ಶಿಕ್ಷಕ. ನಾನು ಈಗಲೂ ಕೂಡ ಪ್ರತಿ ರೋಗಿಯಿಂದ ಕಲಿಯುತ್ತೇನೆ ಎಂದು ಡಾ. ನಾಯಿಕವಾಡಿ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಔಷಧವು ನಿರಂತರ ಪ್ರಕ್ರಿಯೆ. ನೀವು ಕಲಿಯುವುದನ್ನು ನಿಲ್ಲಿಸಿದರೆ ಕಣ್ಮರೆಯಾಗುತ್ತೀರಿ. ಮೊನಚಾದ ಖಡ್ಗದ ಮೇಲಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ‘ನೈತಿಕತೆ ಅತ್ಯಂತ ಮಹತ್ವದ್ದಾಗಿದೆ. ಜನ ವೈದ್ಯರನ್ನು ನಂಬಿ ಬರುತ್ತಾರೆ. ಅವರ ನಂಬುಗೆ ಹಾಗೂ ನಿರೀಕ್ಷೆಗೆ ತಕ್ಕಂತೆ ಸೇವೆ ನೀಡಬೇಕೆಂದು ಸಲಹೆ ನೀಡುತ್ತಾರೆ.

ಘಟಪ್ರಭಾದ ಜೈಂಟ್ಸ್ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಬರಹಗಾರರು, ಸಂಗೀತ ಪ್ರೇಮಿಗಳು, ಭಜನೆಗಳ (ಭಕ್ತಿಗೀತೆಗಳು) ಸಂಯೋಜಕರು ಕೂಡ ಹೌದು. ಹಲವಾರು ಆರೋಗ್ಯ ಜಾಗೃತಿ ಉಪನ್ಯಾಸಗಳನ್ನು ನೀಡಿದ್ದಾರೆ, ಪ್ರವೇಶಿಸಲಾಗದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ಅವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಆಧರಿಸಿ “ಕೆಲಸ ಮಾಡುವ ಕೈಗಳು ಮತ್ತು ಪ್ರೀತಿಯ ಹೃದಯ” ಎಂಬ ಪುಸ್ತಕ ರಚಿಸಿದ್ದಾರೆ.

ಡಾ. ನಾಯಿಕವಾಡಿ ಅವರು, ಅನಾರೋಗ್ಯ ಪೀಡಿತರು, ದೀನದಲಿತರ ಜೀವನದ ಗುಣಮಟ್ಟವನ್ನು ಸುಧಾರಿಸುವ ಮಹೋನ್ನತ ಕಾಯಕದಲ್ಲಿ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತಾರೆ. ಡಾ.ವಿಲಾಸ್ ನಾಯ್ಕವಾಡಿ ಅವರು, ವೈದ್ಯಕೀಯ ಕ್ಷೇತ್ರದ ಧೃವತಾರೆಯಾಗಿ ನಿಲ್ಲುತ್ತಾರೆ. myarogya.in ಆರೋಗ್ಯ ಪೋರ್ಟಲ್ ದೇಶದ ನಾಗರಿಕರ ಪರವಾಗಿ ಅವರಿಗೆ ಶುಭ ಹಾರೈಸುತ್ತದೆ. ಅವರಿಗೆ ಆಯುರಾರೋಗ್ಯ ದಯಪಾಲಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Popular Doctors

Related Articles