10 ರೂ. ಖ್ಯಾತಿಯ ಹೃದಯವಂತ ಬಡವರ ವೈದ್ಯ

ವೈದ್ಯಕೀಯ ಸೇವೆಯನ್ನು ಪ್ರಾರಂಭಿಸುವ ಮುಂಚೆ ವೈದ್ಯರು ಐತಿಹಾಸಿಕವಾದ ಪ್ರಮಾಣವನ್ನು ಮಾಡುತ್ತಾರೆ. ನಾನು ಯಾವುದೇ ರೀತಿಯ ಲಿಂಗ, ವರ್ಣ, ಧರ್ಮ, ಜಾತಿ, ಜೀವನಶೈಲಿ, ಆರ್ಥಿಕ ಅಂತಸ್ತು, ನಿರ್ಗತಿಕರು ಬಡವ ಬಲ್ಲಿದ ಎಂದು ಬೇಧಭಾವ ಮಾಡದೇ ಸಕಲರಿಗೂ ಚಿಕಿತ್ಸೆ ನೀಡುತ್ತೇನೆ. ಅದರಲ್ಲಿ ಕೆಲವು ಸಮಯವನ್ನು ಸ್ವಯಂ ಸೇವಕನಾಗಿ ಕಾರ‍್ಯನಿರ್ವಹಿಸಲು ಮೀಸಲಿಡುತ್ತೇನೆ ಎಂದು.

ಪ್ರಮಾಣ ಮಾಡಿದಂತೆ ನಡೆಯುತ್ತ ಸಮುದಾಯದ ಆರೋಗ್ಯ ಕಾಪಾಡುವಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಪಟ್ಟುಬಿಡದೇ ಸಮಾಜದ ಒಳಿತಿಗಾಗಿ ಸೇವೆ ನೀಡುವ ವೈದ್ಯರನ್ನು ಹುಡುಕಿ ಸಮಾಜಕ್ಕೆ ಪರಿಚಯಿಸುವ ಕಾರ‍್ಯವನ್ನು “ಮೈಆರೊಗ್ಯ” ಮಾಡುತ್ತಿದೆ. ಭಾರತದಲ್ಲಿ ನಿರ್ಗತಿಕರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇವೆ ಕೈಗೆಟುಕುವುದಿಲ್ಲ. ಆದರೆ ಹೃದಯಂತ ವೈದ್ಯರ ಸೇವೆ ಅತ್ಯಮೂಲ್ಯವಾಗಿದೆ. ಅಂತ ವೈದ್ಯರೊಬ್ಬರು ಕಲ್ಯಾಣ ಕರ್ನಾಟಕದಲ್ಲಿ ಕೇವಲ 10 ರೂ. ಡಾಕ್ಟರ ಎಂದು ಚಿರಪರಿಚಿತರಾಗಿದ್ದಾರೆ, ವೈದ್ಯರ ದಿನಾಚರಣೆಯಂದು ಅವರೇ ಡಾ. ಕೆ. ಮಲ್ಹಾರ ರಾವ ಮಲ್ಲೆ ವೈದ್ಯವೃಂದದ ನಿಜವಾದ ನಾಯಕ. ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಳಿದಿದ್ದ ಗುಲ್ಬರ್ಗಾದಲ್ಲಿ ಕಳೆದ 5 ದಶಕಗಳಿಂದ ಬಡರೋಗಿಗಳ ಆಶಾಕಿರಣವಾಗಿ, ವೈದ್ಯಕೀಯ ಸೇವೆಯೊಂದಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ನಿರತರಾಗಿದ್ದಾರೆ. ಶ್ರೀಮಂತರು ಹಾಗೂ ಪ್ರಭಾವಿಗಳು ಚಿಕಿತ್ಸೆಗಾಗಿ ಹೈದರಾಬಾದ, ಸೊಲ್ಲಾಪೂರ, ಪುಣೆ ಅಥವಾ ಮುಂಬೈಗೆ ತೆರಳುತ್ತಿದ್ದರು, ಆದರೆ ಆರ್ಥಿಕವಾಗಿ ಹಿಂದುಳಿದವರು ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಕಂಡು ಮರುಗಿದ ಡಾ. ಕೆ. ಮಲ್ಹಾರ ರಾವ ಅವರು ಬಡಜನರ ಸೇವೆಗ ತಮ್ಮ ಜೀವನವನ್ನು ಮುಡುಪಾಗಿಟ್ಟರು.

75 ವರ್ಷದ ಯುವ ವೈದ್ಯ ಡಾ. ರಾವ ಅವರು ಹಿಂದುಳಿದ ಸಮಾಜದ ಸ್ವಾಸ್ಥ್ಯ ಕಾಪಡುವಲ್ಲಿ ಮತ್ತು ಅವರ ಅನಾರೋಗ್ಯವನ್ನು ಹೋಗಲಾಡಿಸಲು ಸದಾ ಕಾರ‍್ಯಪ್ರವೃತ್ತರಾಗಿದ್ದಾರೆ.

Dr. K Malhar Rao Malle
Dr. K Malhar Rao Malle

ಮೈಆರೋಗ್ಯ ಜೊತೆ ತಮ್ಮ ಅನುಭವ ಹಂಚಿಕೊAಡ ಅವರು, ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲೆ ಗ್ರಾಮದ ರೈತ ಕುಟುಂಭದಲ್ಲಿ 16 ಅಕ್ಟೋಬರ 1946ರಲ್ಲಿ ಜನಿಸಿ, ಬಿಎಸ್ಸಿ ನಂತರ ಬಳ್ಳಾರಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1974ರಲ್ಲಿ ಎಂಬಿಬಿಎಸ್ ಪೂರೈಸಿದೆ. ಗುಲ್ಬರ್ಗಾ ನಗರದ ಸುತ್ತವಿರುವ ಗಾಜಿಪೂರ ಕೊಳಚೆ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದೆ. ಕ್ಲಿನಿಕಲ್ ಅಭ್ಯಾಸದಲ್ಲಿ ಅಘಾಧವಾದ ನಂಬಿಕೆ, ರೋಗಿಗಳ ಮೇಲೆ ನಿಗಾ, ಇತಿಹಾಸ, ಸಮಸ್ಯೆ ಆಲಿಸುವದರ ಜೊತೆಗೆ ಅವರನ್ನು ಗಮನಿಸಬೇಕು. ಸ್ಟೆಥೆಸ್ಕೋಪ, ಬಿಪಿ ಆಪರೆಟಸ್ ಹಾಗೂ ಕ್ಲಿನಿಕಲ್ ಪರೀಕ್ಷೆಯ ಮೇಲೆ ನಮ್ಮ ಬಲ ನಿಂತಿರುತ್ತದೆ. ಅದರ ಮೇಲೆಯೇ ರೋಗ ಪತ್ತೆ ಹಾಗೂ ಚಿಕಿತ್ಸೆ ನೆರವೇರಿಸಲಾಗುತ್ತದೆ. ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಮಾತ್ರೆಗಳನ್ನು ಕಲ್ಪಿಸಲು ಜನೌಷಧಿ(ಜನರಿಕ್) ಕೇಂದ್ರವನ್ನು ತೆರೆಯಲಾಗಿದೆ. ಪ್ರತಿದಿನ ಸುಮಾರು 100 ಕ್ಕೂ ಅಧಿಕ ರೋಗಿಗಳಿಗೆ ಕಳೆದ 5 ದಶಕಗಳಿಂದ ಚಿಕಿತ್ಸೆ ನೀಡುತ್ತಿದ್ದೇನೆ. 2012ರವರೆಗೆ ರೋಗಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆದಿರಲಿಲ್ಲ. ಆದರೆ ಸರಕಾರವು ಖಾಸಗಿ ಸೇವೆ ನೀಡುವ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ತಮ್ಮ ಶುಲ್ಕವನ್ನು ಪ್ರದರ್ಶಿಸಬೇಕೆಂದು ಆದೇಶಿಸಿದಾಗ 10ರೂ.ಗಳ ಶುಲ್ಕವನ್ನು ಪಡೆಯಲು ಪ್ರಾರಂಭಿಸಿದೆ. ಅಂದಿನಿAದ ನನ್ನನ್ನು 10 ರೂ. ಡಾಕ್ಟರ ಎಂದು ಕರೆಯಲು ಪ್ರಾರಂಭಿಸಿದರು. ನಾನು ಎಲ್‌ಎಲ್‌ಬಿ ಕೂಡ ಮಾಡಿದ್ದೇನೆ. ಆದರೆ ನಮ್ಮ ತಂದೆಯವರು ಈ ಕ್ಷೇತ್ರಕ್ಕೆ ನೀನು ಬರುವದು ಬೇಡ, ತುಳಿತ್ತಕ್ಕೊಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ರಕ್ಷಣೆ ಮತ್ತು ಸೇವೆಯಲ್ಲಿ ನಿರತನಾಗು ಎಂದಿದ್ದಕ್ಕೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ ಎನ್ನುತ್ತಾರೆ ಡಾ. ಮಲ್ಹಾರ ರಾವ್.

1980ರ ದಶಕದಲ್ಲಿ ಗುಲ್ಬರ್ಗಾ ಸುತ್ತಮುತ್ತ ರಕ್ತ ಅವಶ್ಯವಾಗಿ ಬೇಕಾದಾಗ ಹತ್ತಿರದ ಸೊಲ್ಲಾಪೂರ ಅಥವಾ ಹೈದರಾಬಾದ ಕಡೆ ಮುಖ ಮಾಡಬೇಕಾಗುತ್ತಿತ್ತು. ಇದರಿಂದ ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ರೋಗಿಯು ಪ್ರಾಣ ಕಳೆದುಕೊಳ್ಳುವ ಸಂದರ್ಭ ಬಂದೆರಗುತಿತ್ತು. ಇದನ್ನು ಮನಗಂಡ ಡಾ. ರಾವ್ ಅವರು ಈ ಭಾಗದಲ್ಲಿ ಪ್ರಥಮ ಬಾರಿಗೆ ಬ್ಲಡ್ ಬ್ಯಾಂಕ ಹಾಗೂ ಖಾಸಗಿ ಅಂಬ್ಯುಲನ್ಸ್ ಸೇವೆಯನ್ನು ಪ್ರಾರಂಭಿಸಿದರು.

ವೈದ್ಯರ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರು, ಯುವ ವೈದ್ಯರು ಜನರನ್ನು ನಿಯಂತ್ರಿಸುವ ಸಾಮಾನ್ಯ ಕಲೆಯನ್ನು ಉಳ್ಳವರಾಗಿರಬೇಕು. ರೋಗಿಯ ಮೇಲೆ ಕರುಣೆ ತೋರುತ್ತ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವೈದ್ಯಕೀಯ ಕಠಿಣತೆಯನ್ನು ವಿವರಿಸಬೇಕು. ರೋಗಿಗೆ ಸಾಕಷ್ಟÀÄ ಸಮಯವನ್ನು ನೀಡಿ, ಅವರ ಸಮಸ್ಯೆಯನ್ನು ಅರಿತುಕೊಳ್ಳಬೇಕು. ಈ ಕಲೆಯು ಕೇವಲ ಜೀವನದಲ್ಲಿನ ಅನುಭವದಿಂದ ಮಾತ್ರ ಬರಲು ಸಾಧ್ಯ. ವೈದ್ಯಕೀಯ ಸೇವೆಯು ಅತ್ಯಂತ ಉನ್ನತವಾದ ಒಳ್ಳೆಯ ವೃತ್ತಿಯಾಗಿದೆ. ನೈತಿಕತೆಯ ಮೂಲಕ ಮಾದರಿಯಾಗಿ ಸೇವೆ ನೀಡಬೇಕು. ಈಗ 20 ರೂ.ಗಳ ಶುಲ್ಕವನ್ನು ಪಡೆಯುತ್ತಿದ್ದೇನೆ. ಸುಮಾರು 4 ತಲೆಮಾರಿನ ಜನರು ಆರೋಗ್ಯ ಸಮಸ್ಯೆಗಾಗಿ ನನ್ನ ಹತ್ತಿರ ಬರುತ್ತಾರೆ. ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಹೊಂದಿರುವ ಕುಟುಂಭಗಳು ಆರೋಗ್ಯ ಸಮಸ್ಯೆ ಎದುರಾದಾಗ ಸದಾ ನನ್ನ ಹತ್ತಿರ ಬರುತ್ತಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ವೈದ್ಯರು ತಮ್ಮ ಕ್ಲಿನಿಕ್‌ಗಳ ಬಾಗಿಲು ಮುಚ್ಚಿದರು. ಆದರೆ ನಾನು ಒಂದು ದಿನವೂ ಬಂದ ಮಾಡದೇ ನಿರಂತರವಾಗಿ ರೋಗಿಗಳ ಸೇವೆ ಮಾಡಿದ್ದೇನೆ. ನನ್ನ ಹತ್ತಿರ ಬಂದ ರೋಗಿಗಳು ಗುಣಮುಖಗೊಂಡು ಮರಳಿ ಬಂದು ನಾನು ಅರಾಮಾಗಿದ್ದೇನೆ. ನೀವು ಕೊಟ್ಟ ಔಷಧವು ಪರಿಣಾಮ ಬೀರಿತು ಎಂದಾಗ ನನ್ನ ಶಕ್ತಿಯು ಮತ್ತೆ ಪುಟಿದೇದ್ದು ತೃಪ್ತಿಯಾಗುತ್ತದೆ. ಜನಸೇವೆಗಾಗಿ ನನಗೆ ಶಕ್ತಿಯನ್ನು ನೀಡಿದ ಆ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚಿಕ್ಕದಾದ ಸಂತೋಷ ಭರಿತ ಕುಟುಂಭದಲ್ಲಿ ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರರೊಂದಿಗೆ ಜೀವನ ಸಾಗಿಸುತ್ತಿದ್ದು, ನನ್ನ ಕರ‍್ಯಚಟುವಟಿಕೆಗಳಿಗೆ ತಮ್ಮ ಬೆಂಬಲ ಮತ್ತು ಸಹಕಾರವನ್ನು ನೀಡುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

• ಡಾ. ರಾವ್ ಅವರು ಸೆಂಟ ಜಾನ್ ಅಂಬ್ಯು¯ನ್ಸ ಸೇವೆಯ ಕರ‍್ಯದರ್ಶಿಯಾಗಿದ್ದು, ಸುಮಾರು 3.5 ಲಕ್ಷಕ್ಕೂ ಅಧಿಕ ಜನರಿಗೆ ಪ್ರಥಮ ಚಿಕಿತ್ಸೆಯ ಕುರಿತು ತರಬೇತಿ ನೀಡಿದ್ದಾರೆ.

• 150ಕ್ಕೂ ಅಧಿಕ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದಾರೆ.

• ಸಾಮಾಜಿಕ ನ್ಯಾಯ ಇಲಾಖೆಯ ಸಹಕಾರದೊಂದಿಗೆ ಅಂಗವಿಕಲರಿಗೆ ಅನುಕೂಲವಾಗುವಂತೆ, ತ್ರೀಚಕ್ರ, ನಡೆದಾಡುವ ಸಾಧನ(ವಾಕರ) ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಿತರಿಸುತ್ತಾರೆ.

• ಶ್ರೀ ನಂಜುAಡಪ್ಪ ಅವರು ಡಾ. ರಾವ್ ಅವರ ಕ್ಲಿನಿಕಗೆ ಭೇಟಿ ನೀಡಿ ಅವರ ಸೇವೆಗ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಗೌರವಗಳು:

• ಸಮಾಜ ಸೇವೆ ಹಾಗೂ ಮಾನವೀಯತೆಗಾಗಿ 2019ರಲ್ಲಿ ನ್ಯಾಶನಲ್ ವರ್ಚುವಲ್ ಯುನಿರ್ವಸಿಟಿ ಪಾರ ಪೀಸ್ ಆ್ಯಂಡ ಎಜ್ಯುಕೇಶನ್ ಗೌರವ ಡಾಕ್ಟರೇಟ ನೀಡಿದೆ.

• ಮಲೇಶಿಯಾದ ಕೌಲಾಲಾಂಪೂರದಲ್ಲಿ 2019ರಲ್ಲಿ ನಡೆದ 22ನೇ ಅಂತರಾಷ್ಟಿçÃಯ ಸಾಂಸ್ಕೃತಿಕ ಮೇಳದಲ್ಲಿ ಅಂತರಾಷ್ಟಿçÃಯ ಮ್ಯಾನ ಆಫ್ ದಿ ಇಯರ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

• 2018ರಲ್ಲಿ ಭಾರತೀಯ ಅಂತರಾಷ್ಟಿçÃಯ ಫ್ರೆಂಡಶಿಪ್ ಸಂಸ್ಥೆಯು ಭಾರತ ಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

• ಕರ್ಣಾಟಕ ರಾಜ್ಯದ ರಾಜ್ಯಪಾಲರಾದ ಗೋವಿಂದ ನಾರಾಯಣ, ವಿ ಎಸ್ ರಮಾದೇವಿ, ಟಿ ಎನ್ ಚತುರ್ವೇದಿ ಹಾಗೂ ಹಂಸರಾಜ ಭಾರದ್ವಾಜ ಅವರು ಸತ್ಕರಿಸಿದ್ದಾರೆ.

Popular Doctors

Related Articles