ಜಂಬಗಿ ಇಂಟಿಗ್ರೆಟೆಡ್ ಪಿಯು ವಿಜ್ಞಾನ ಮಹಾವಿದ್ಯಾಲವು ಕಿರಿಟದಲ್ಲಿನ ವಜ್ರ
ಚಿಕ್ಕ ಪಟ್ಟಣವಾದರೂ ದೊಡ್ಡ ಹೆಸರು ಮಾಡಿರುವ ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮವು ವೈದ್ಯಕೀಯ ಮೂಲಭೂತ ಸೌಲಭ್ಯ ಹಾಗೂ ಶಿಕ್ಷಣವನ್ನು ಪಡೆಯಲು ಜನರು ಮಹಾರಾಷ್ಟ್ರದ ಮಿರಜ ನಗರದತ್ತ ಮುಖಮಾಡುತ್ತಿದ್ದರು. ಆದರೆ ಗ್ರಾಮದ ಜನರು ವೈದ್ಯಕೀಯ ಮತ್ತು ಶಿಕ್ಷಣ ಸೇವೆಗಾಗಿ ಅತ್ಯಂತ ಕಷ್ಟದಿಂದ ಪರಿತಪಿಸುತ್ತಿದ್ದರು. ಈ ಸಮಯದಲ್ಲಿ ಇಬ್ಬರು ಯುವ ವೈದ್ಯರು ತಮ್ಮ ವೈದ್ಯಕೀಯ ಸ್ನಾತ್ತಕೋತ್ತರ ಪದವಿಯನ್ನು ಮಗಿಸಿ ವೈದ್ಯಕೀಯ ಸೌಲಭ್ಯದಿಂದ ತೀರಾ ಹಿಂದುಳಿದಿದ್ದ ಹಾರುಗೇರಿ ಗ್ರಾಮದಲ್ಲಿ ಡಾ. ಲ್ಕಷ್ಮಣ ಹಾಗೂ ಡಾ. ವರ್ಷಾ ಜಂಬಗಿ ಅವರು ವೈದ್ಯಕೀಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ನಗರಗಳಲ್ಲಿ ವಾಸಿಸುತ್ತ, ಐಷಾರಾಮಿ ಜೀವನ ನಡೆಸದೇ, ಧೃಡ ನಿಶ್ಚಯದಿಂದ ಸೇವೆಗೆ ಮುಂದಾದರು. ತಮ್ಮ ಕರ್ಮಭೂಮಿಯಾದ ಗ್ರಾಮದಲ್ಲಿ ಹೆರಿಗೆ, ಸ್ತ್ರೀರೋಗ ಮತ್ತು ವೈದ್ಯಕೀಯ ಸೇವೆ ಪ್ರಾರಂಭಿಸಿ, ಜನಸೇವೆಗೆ ಟೊಂಕಕಟ್ಟಿ ನಿಂತರು.
ವೈದ್ಯದಂಪತಿಗಳಾದ ಡಾ. ಜಂಬಗಿ ಅವರು, ಭಾರತದಲ್ಲಿ ಕೇವಲ ಶೇ. 28ರಷ್ಟು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶೇ. 75ರಷ್ಟು ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.ಗ್ರಾಮೀಣ ಭಾರತದಲ್ಲಿ ಶೇ. 72ರಷ್ಟು ಜನರು ವಾಸಿಸುತ್ತಿದ್ದು, ಅನೇಕ ರೋಗಗಳಿಂದ ಬಳಲುತ್ತಿರುವದು ಹಾಗೂ ಸಾಮಾಜಿಕ, ಆರ್ಥಿಕ ತೊಂದರೆಗಳಿಗೆ ತುತ್ತಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮೀಕ್ಷೆಯಂತೆ ಸುಮಾರು 13000 ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಅವಶ್ಯವಿದೆ. ಆದರೆ ಹಳ್ಳಿಯಿಂದಲೇ ಬಂದ ವೈದ್ಯರು ಕೂಡ ತಮ್ಮ ಗ್ರಾಮದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. ಗ್ರಾಮೀಣ ಜನರು ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಿರುವದನ್ನು ಮನಗಂಡು ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಮುಂದಾದರು.
ಎರಡು ದಶಕಗಳ ಹಿಂದೆ ಸುಮಾರು 50 ಹಾಸಿಗೆಗಳ ಆಶೀರ್ವಾದ ನರ್ಸಿಂಗ ಮತ್ತು ಹೆರಿಗೆ ಆಸ್ಪತ್ರೆ ಸ್ಥಾಪಿಸಿದರು. ಅತ್ಯುತ್ತಮ ಚಿಕಿತ್ಸೆಯೊಂದಿಗೆ ತಮ್ಮ ಸಮುದಾಯಕ್ಕೆ ಸೇವೆಯನ್ನು ನೀಡಲು ಪ್ರಾರಂಭಿಸಿದರು. ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡಿ ಗ್ರಾಮೀಣರ ಸ್ಮೃತಿಪಟಲದಲ್ಲಿ ನೆಲೆನಿಂತು ಅವರ ಹೃದಯ ಗೆದ್ದರು. ನಗರಗಳಲ್ಲಿ ಸಿಗುವ ಅತ್ಯಾಧುನಿಕ ವೈದ್ಯಕೀಯ ಸೇವೆ ಗ್ರಾಮೀಣ ಜನರಿಗೂ ಕೈಗೆಟಕುವ ದರದಲ್ಲಿ ಸಿಗಲಾರಂಭಿಸಿತು. ಅತ್ಯಂತ ಕ್ಲಿಷ್ಟಕರವಾದ ಹೆರಿಗೆ, ಅವಳಿಜವಳಿ ಕೃತಕ ಗರ್ಭಧಾರಣೆ, ನವಜಾತ ಶಿಶುಗಳ ಕಾಳಜಿ ಸೇರಿದಂತೆ ಸಕಲ ಸೇವೆಯನ್ನು ಡಾ. ವರ್ಷಾ ಜಂಬಗಿ ಅವರು, ಡಾ. ಲಕ್ಷ್ಮಣ ಜಂಬಗಿ ಅವರು ನರದಿಂದ ಲೀವರ, ಹೃದ್ರೋಗದ ವರೆಗೆ ಎಲ್ಲ ರೀತಿಯ ವೈದ್ಯಕೀಯ ಸೇವೆಯನ್ನು ನೀಡಲಾರಂಬಿಸಿದರು. ದಂಪತಿಗಳಿಬ್ಬರೂ ತಮ್ಮ ಜೀವನವನ್ನು ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗೆ ಮುಡಪಾಗಿಟ್ಟರು.
ಶಿಕ್ಷಣ ಸಂಸ್ಥೆಗಳ ಪ್ರಾರಂಭ:
ಕೇವಲ ಆರೋಗ್ಯ ಸೇವೆಯನ್ನು ಕಲ್ಪಿಸುವದರಿಂದ ಗ್ರಾಮೋದಯ ಅಸಾಧ್ಯವೆಂಬುದನ್ನು ಅರಿತ ದಂಪತಿಗಳು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವಲ್ಲಿ ಅವಿರತವಾದರು. ಗುಣಮಟ್ಟದ ಶಿಕ್ಷಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಾಗಿಲನ್ನು ತೆರೆದರು. 2003ರಲ್ಲಿ ಡಾ. ಎಸ್ ಎಸ್ ಜಂಬಗಿ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ನಿಧಾನವಾಗಿ ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು.
ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
2009ರಲ್ಲಿ ಸುಮಾರು 60 ಹಾಸಿಗೆಗಳ ಶ್ರೀ ಸಿದ್ದಿವಿನಾಯಕ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯವನ್ನು, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಗಳ ಅನುಮತಿ ಪಡೆದು ಆರಂಭಿಸಲಾಯಿತು. ನಂತರ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಿ, ಅದಕ್ಕೆ ತಕ್ಕಂತೆ ಬಾಲಕ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಯಿತು. ಅತ್ಯಾಧುನಿಕ ಆಯುರ್ವೇದ ಸೌಲಭ್ಯಗಳೊಂದಿಗೆ ಸುಮಾರು 300ಕ್ಕೂ ಅಧಿಕ ಸಿಬ್ಬಂದಿಗಳು, 50 ನುರಿತು ಶಿಕ್ಷಕರು ಇದ್ದಾರೆ. ಅದರೊಂದಿಗೆ ಬಿಎಡ್, ಪ್ಯಾರಾ ಮೆಡಿಕಲ್,, ನರ್ಸಿಂಗ ಕಾಲೇಜ ಸೇರಿದಂತೆ ಮುಂತಾದ ಮುಖ್ಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ.
ಜಂಬಗಿ ಇಂಟಿಗ್ರೆಟೆಡ್ ಪಿಯು ವಿಜ್ಞಾನ ಮಹಾವಿದ್ಯಾಲವು ಕಿರಿಟದಲ್ಲಿನ ವಜ್ರ
ಬೆಳಗಾವಿ ತಾಲೂಕಿನ ಹೊನಗಾ ಬಳಿ ಇರುವ 6 ಎಕರೆ ವಿಶಾಲವಾದ ಪರಿಸರದಲ್ಲಿ ತಲೆ ಎತ್ತಿರುವ ಜಂಬಗಿ ರೆಸಿಡೆನ್ಸಿಯಲ್ ಪಿಯು ಕಾಲೇಜ್, ಕಾರ್ಯಾರಂಭ ಮಾಡಿದ ಮೊದಲ ವರ್ಷದಲ್ಲೇ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಜತೆಗೆ, ಹೈಟೆಕ್ ದರ್ಜೆ ಮೂಲಸೌಕರ್ಯ ಕಲ್ಪಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಬಾಳು ಬೆಳಗುತ್ತಿದೆ.
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು:
ಪಿಯು ವಿಜ್ಞಾನ ವಿಭಾಗದಲ್ಲಿ ಗುಣಾತ್ಮಕ ಶಿಕ್ಷಣ ಪಡೆಯುವ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳತ್ತ ಮುಖಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಜಂಬಗಿ ಪಿಯು ಕಾಲೇಜು, ಅಂತಹ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಇಲ್ಲಿ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
320 ವಿದ್ಯಾರ್ಥಿಗಳಿಗೆ ಅವಕಾಶ:
ಈ ಕಾಲೇಜಿನಲ್ಲಿ 320 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸರ್ಕಾರ ಅನುಮತಿ ನೀಡಿದೆ. ಸದ್ಯ ಪಿಯು ಪ್ರಥಮ ವರ್ಷದಲ್ಲಿ 160 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಪೈಕಿ 80 ವಿದ್ಯಾರ್ಥಿಗಳು ಪಿಸಿಎಂಬಿ ವಿಷಯ ಆಯ್ದುಕೊಂಡಿದ್ದರೆ, 80 ವಿದ್ಯಾರ್ಥಿಗಳು ಪಿಸಿಎಂಎಸ್ ಅಭ್ಯಸಿಸುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಪಿಯು ಪ್ರಥಮ, ದ್ವಿತೀಯ ವರ್ಷದಲ್ಲಿ 320 ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಆದರೆ, ಟ್ರಸ್ಟ್ ಮಾತ್ರ 500 ವಿದ್ಯಾರ್ಥಿಗಳಿಗೆ ಪೂರಕವಾಗುವಷ್ಟು ಕಲಿಕಾ ಸೌಲಭ್ಯ ಒದಗಿಸಿದೆ.
ಏನೇನು ಸೌಲಭ್ಯ?:
ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಹಾವಿದ್ಯಾಲಯದ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರಶಾಂತತೆಯಿಂದ ಕೂಡಿರುವ ಸ್ಥಳದಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿದೆ. ಯುವಕ, ಯುವತಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಲಭ್ಯವಿದ್ದು, ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಮೆಸ್‌ನಲ್ಲಿ ಉತ್ತಮ ಊಟ, ಉಪಾಹಾರ ನೀಡಲಾಗುತ್ತಿದೆ. ಬೆಳಗಾವಿಯಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಎರಡು ಬಸ್‌ಗಳ ಸೌಲಭ್ಯವೂ ಇದೆ. ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳು ಈ ಬಸ್‌ಗಳನ್ನೇ ಬಳಸಬೇಕು ಎನ್ನುತ್ತಾರೆ ಟ್ರಸ್ಟ್‌ನ ಚೇರ್ಮನ್ ಡಾ.ಲಕ್ಷ್ಮಣ ಜಂಬಗಿ.
ಡಿಜಿಟಲ್ ಗ್ರಂಥಾಲಯ:
ಸುಸಜ್ಜಿತ ಕಟ್ಟಡ ಹೊಂದಿರುವ ಕಾಲೇಜಿನಲ್ಲಿ ಸ್ಮಾರ್ಟ್‌ಬೋರ್ಡ್ ಒಳಗೊಂಡಿರುವ ಕೊಠಡಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿರುವ ಪುಸ್ತಕಗಳ ಆಗರದ ಹಾಗೂ ಡಿಜಿಟಲ್ ಗ್ರಂಥಾಲಯವಿದೆ. ವಿಷಯಾಧಾರಿತ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ವೈ–ಫೈ ಸೌಲಭ್ಯವೂ ಇಲ್ಲಿದೆ. ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಗೃಹಗಳಿದ್ದು, ಕಾಲೇಜು ಆವರಣದ ಶುಚಿತ್ವಕ್ಕೆ ಒತ್ತು ನೀಡಲಾದ್ದು, ವೈದ್ಯಕೀಯ ಸೌಲಭ್ಯವಿದೆ. ಒತ್ತಡ ನಿರ್ವಹಣೆ ವೈದ್ಯರು ವಿದ್ಯಾರ್ಥಿಗಳೊಂದಿಗೆ ಕೌನ್ಸೆಲಿಂಗ್ ನಡೆಸುತ್ತಾರೆ. ಆಗಾಗ ಕಾಲೇಜಿಗೆ ಬರುವ ಸಂಪನ್ಮೂಲ ವ್ಯಕ್ತಿಗಳು ವ್ಯಕ್ತಿತ್ವ ವಿಕಸನ ಕುರಿತು ತರಬೇತಿ ನೀಡುತ್ತಾರೆ. ಸಮವಸ, ಬುಕ್‌ಗಳನ್ನು ಕಾಲೇಜಿನಲ್ಲೇ ವಿತರಿಸಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ:
ಈ ಕಾಲೇಜಿನಲ್ಲಿ ನಿಗದಿತ ಅವಧಿಯಲ್ಲೇ ಪರಿಣಾಮಕಾರಿಯಾಗಿ ಪಠ್ಯ ಬೋಧಿಸುವ ಜತೆಗೆ, ಐಐಟಿ–ಜೆಇಇ, ನೀಟ್ ಮತ್ತು ಸಿಇಟಿ ತರಬೇತಿಯನ್ನೂ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿರುವ ಮಂಗಳೂರು, ಉಡುಪಿ ಮತ್ತು ಕಾರವಾರದ ಬೋಧಕರನ್ನೇ ಇಲ್ಲಿ ನೇಮಿಸಿಕೊಳ್ಳಲಾಗಿದೆ. ಬೋಧಕ ಸಿಬ್ಬಂದಿ ತರಬೇತಿ ಮತ್ತು ಬೋಧನಾ ಕ್ಷೇತ್ರದಲ್ಲಿ 10-15 ವರ್ಷಗಳ ಅನುಭವ ಹೊಂದಿದ್ದಾರೆ.
ಶೈಕ್ಷಣಿಕ ಸೌಲಭ್ಯದ ಲಾಭ ಪಡೆಯಲು ಕೋರಿಕೆ
ಪ್ರತಿವರ್ಷ ನಡೆಯುವ ನೀಟ್ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳೇ ಹೆಚ್ಚಾಗಿ ಯಶಸ್ಸು ಗಳಿಸುತ್ತಾರೆ. ಅವರು ಪಿಯು ವ್ಯಾಸಂಗದ ಅವಧಿಯಲ್ಲಿ ಉತ್ತಮ ತರಬೇತಿ ಪಡೆಯುವುದು ಇದಕ್ಕೆ ಕಾರಣ. ಇಂದು ಪಿಯು ದ್ವಿತೀಯ ವರ್ಷದ ಶೇ. 98 ಅಂಕ ಗಳಿಸಿದರೂ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸಿಗುವುದು ಅನುಮಾನ. ಹಾಗಾಗಿ, ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪಿಯು ಗುಣಾತ್ಮಕ ಶಿಕ್ಷಣದ ಜತೆಗೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನೂ ನೀಡುತ್ತಿದ್ದೇವೆ. ಈ ಭಾಗದ ವಿದ್ಯಾರ್ಥಿಗಳು ಮತ್ತು ಪಾಲಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಟ್ರಸ್ಟ್‌ನ ಚೇರ್ಮನ್ ಡಾ.ಲಕ್ಷ್ಮಣ ಜಂಬಗಿ ಕೋರಿದ್ದಾರೆ.
ಟ್ಯೂಷನ್ ಶುಲ್ಕದಲ್ಲಿ ವಿನಾಯಿತಿ
ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜನ್ಮತಳೆದ ಜಂಬಗಿ ಮೆಮೋರಿಯಲ್ ಎಜುಕೇಷನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ಕಡಿಮೆ ಶುಲ್ಕದಲ್ಲೇ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿದೆ. ಇತರ ಕಡೆಗಳಿಗಿಂತಲೂ ಕಾಲೇಜು, ಹಾಸ್ಟೆಲ್ ಶುಲ್ಕ ಶೇ.30 ಕಡಿಮೆ ಇದೆ. ಶೇ.90 ಅಂಕ ಗಳಿಸಿದವರಿಗೆ ಟ್ಯೂಷನ್ ಶುಲ್ಕದಲ್ಲಿ ವಿನಾಯಿತಿ ನೀಡುವ ಜತೆಗೆ, ಸ್ಕಾಲರ್‌ಶಿಪ್ ಕೂಡ ನೀಡಲಾಗುತ್ತಿದೆ.
ಕಾಲೇಜು ಆರಂಭಕ್ಕೆ ಪ್ರೇರಣೆ
ವೈದ್ಯಕೀಯ ಕ್ಷೇತ್ರದಲ್ಲಿ 3 ದಶಕಗಳ ಅನುಭವ ಹೊಂದಿರುವ ಚೇರ್ಮನ್ ಡಾ.ಲಕ್ಷ್ಮಣ ಎಸ್. ಜಂಬಗಿ, ತಮ್ಮ ತಂದೆ ಹೆಸರಿನಲ್ಲೇ ಆರಂಭಿಸಿದ್ದ ಟ್ರಸ್ಟ್‌ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಪಡೆಯಲು ತಮ್ಮ ಮಗನನ್ನೇ ಮಂಗಳೂರಿಗೆ ಕಳುಹಿಸಿದ್ದರು. ಆಗ ತಾವು ಮತ್ತು ಮಗ ಅನುಭವಿಸಿದ ಯಾತನೆಯನ್ನೇ ಸವಾಲಾಗಿ ಸ್ವೀಕರಿಸಿದ ಜಂಬಗಿ, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಕಾಲೇಜು ತೆರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೇ ಒತ್ತು ಕೊಟ್ಟಿದ್ದಾರೆ. ಪಿಯು ವಿಜ್ಞಾನದ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಈಗಾಗಲೇ ಆಸಕ್ತ ಪೋಷಕರು / ವಿದ್ಯಾರ್ಥಿಗಳು 7349049222 ಗೆ ಕರೆ ಮಾಡಬಹುದು.
Author: Dr. Pramod Sulikeri, Ph.D