ಸರಕಾರಿ ಶಾಲೆಗಳ ಮಕ್ಕಳಲ್ಲಿ ರಕ್ತ ಹಿನತೆ ತಡೆಗಟ್ಟುವುದು ಮತ್ತು ನಿಯಂತ್ರಿಸುವ ಕಾರ್ಯಕ್ರಮ

 

ರಕ್ತ ಹಿನತೇಯು ಭಾರತದಲ್ಲಿ ಸರ್ವೇ ಸಾಮಾನ್ಯ ವಾದ ರೋಗವಾಗಿದ್ದು ಅಂದಾಜು ಪ್ರತಿಶತ 50 ಶಾಲಾ ಮಕ್ಕಳಲ್ಲಿ ಕಂಡು ಬರುತ್ತದೆ. ರಕ್ತದಲ್ಲಿ ಕಬ್ಬಿಣ ಅಂಶದ ಕೋರತೆ ರಕ್ತ ಹಿನತೆಗೆ ಪ್ರಮುಖ ಕಾರಣ ವಾಗಿದೆ.ರಕ್ತಹಿನತೆಯು ಮಕ್ಕಳ ಬೌದ್ದಿಕ ಸಾಮರ್ಥ್ಯ ಮತ್ತು ಕಲಿಕೆಯ ಮೇಲೆ ದುಷ್ಪರಿನಾಮ ಬೀರುತ್ತದೆ.

ಭಾರತ ಸರಕಾರವು ರಕ್ತ ಹಿನತೆ ನಿಯಂತ್ರಿಸಲು ರಾಷ್ಟ್ರಿಯ ಪೋಷಣ ಅಭಿಯಾನದ ಅಡಿಯಲ್ಲಿ ರಕ್ತಹಿನತೆ ಮುಕ್ತ ಭಾರತ ಕಾರ್ಯಕ್ರಮವನ್ನು ಜಾರಿಗೆ ತರಾಗಿದೆ. ಟಿ ತ್ರೀ ——ಟೆಸ್ಟ,ಟ್ರೀಟ,ಟಾಕ ಹಂತಗಳಮೂಲಕ ಕಾರ್ಯಕ್ರಮವನ್ನು ಮಾಡಲಾ ಗುತ್ತಿದೆ.

ಟಿತ್ರೀ ಆರೋಗ್ಯ ಶಿಬಿರದ ಹಂತಗಳು

ಟೆಸ್ಟ: ಪ್ರಯೋಗತಂತ್ರಜ್ಞರಿಂತ ರಕ್ತದಲ್ಲಿನ ಹಿಮೋಗ್ಲೋಬಿನ ಅಂಶ ಪರಿಕ್ಷೆ ಮಾಡುವುದು.

ಟ್ರೀಟ: ತಜ್ಞ ವೈದ್ಯರ ಸಲಹೆಯಂತೆ ರಕ್ತಹಿನತೆಯ ಮಕ್ಕಳಿಗೆ ಚಿಕಿತ್ಸೆ ಕೊಡುವದು.

ಟಾಕ: ಹೆಚ್ಚು ಕಬ್ಬಿಣ ಅಂಶ ಹೊಂದಿರುವ ಆಹಾರ ಸೇವನೆಕುರಿತು ಆರೋಗ್ಯ ಶಿಕ್ಷಣ ಕೊಡುವುದು.

Dr. Sashikant Kulgod
Dr.SHASHIKANT KULGOD

photo2 1

ರಾಜಲಕ್ಮಿ ಚಿಲ್ಡ್ರನ ಫೌಂಡೇಶನ ಲೇಕವಿವ್ ಫೌಂಡೇಶನ್ ಹಾಗೂ ಲೇಕವಿವ್ಆಸ್ಪತ್ರೆ ಗೋವಾ ವೇಸ ಬೆಳಗಾವಿ ಸಹಯೋಗದೋಂದಿಗೆ 2018 ರಲ್ಲಿ ಬೆಳಗಾವಿ ನಗರದ 1500 ಸರಕಾರಿಶಾಲಾ ಮಕ್ಕಳಲ್ಲಿ ರಕ್ತದಲ್ಲಿನ ಹೀಮೋಗ್ಲೋಬಿನ ಅಂಶ ವನ್ನು ಪರಿಕ್ಷೆಗೋಳಪಡಿಸಾಯಿತು,ಅದರಲ್ಲಿ ಶೇಕಡಾ 40 ಮಕ್ಕಳಲ್ಲಿ ರಕ್ತ ಹೀನತೆ ಪತ್ತೇಯಾಯಿತು.ತೀವ್ರ ಹಾಗೂ ಮದ್ಯಮ ರಕ್ತಹಿನತೆಯ ಮಕ್ಕಳಿಗೆ ಕಬ್ಬಿಣ ಹಾಗೂ ಫೋಲಿಕ ಆ್ಯಸಿಡ ಔಷದಿಯಿಂದ ಮೂರು ತಿಂಗಳ ಕಾಲ ಚಿಕಿತ್ಸೆಗೊಳಪಡಿಸಲಾಯಿತು.2019 ರಲ್ಲಿ ಮತ್ತೋಮ್ಮೆ 500 ಮಕ್ಕಳಲ್ಲಿ ಪರಿಕ್ಷೆನಡೆಸಿ ಚಿಕಿತ್ಸೆಗೊಳಪಡಿಸಲಾಯಿತು.

ರಾಜಲಕ್ಮಿಚಿಲ್ಡ್ರನ ಫೌಂಡೇಶನ ಲೇಕವಿವ್ ಫೌಂಡೇಶನ್ ಹಾಗು ಲೇಕವಿವ್ ಆಸ್ಪತ್ರೆ ಗೋವಾವೇಸ ಬೆಳಗಾವಿ ಸಹಯೋಗದೋಂದಿಗೆ 2020 ರಲ್ಲಿ ಟಿ ತ್ರೀ ಟಿತ್ರೀ ಆರೋಗ್ಯ ಶಿಬಿರದ ಮೂಲಕ ಬೆಳಗಾವಿಯ ಎಲ್ಲ ಸರಕಾರಿ ಶಾಲೆಗಳಲ್ಲಿ ರಕ್ತ ಹಿನತೆ ತಡೆಗಟ್ಟುವುದು ಮತ್ತು ನಿಯಂತ್ರಿಸುವ ಕಾರ್ಯಕ್ರಮ ಆಯೋಜಿಸುವ ಯೋಜನೆ ಮಾಡಾಗಿದೆ.

Popular Doctors

Related Articles