Goa Medical College (GMC) will soon venture into state-of-the-art chest and robotic surgery Department according to Vishwajit Rane, Health Minister, Govt. of Goa
Health Minister...
ವಿಶ್ವ ಸ್ಟ್ರೋಕ್ ದಿನಾಚರಣೆ ನಿಮಿತ್ಯವಾಗಿ ಈ ಲೇಖನ
ಮೆದುಳಿನ ಭಾಗಕ್ಕೆ ಯಾವಾಗ ರಕ್ತದ ಹರಿವು ನಿಂತು ಹೋಗುತ್ತದೆಯೋ ಆಗ ಪಾರ್ಶ್ವವಾಯು (ಸ್ಟ್ರೋಕ್) ಆಗುತ್ತದೆ. ಅದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತದ ಹರಿವು ಯಾವುದೋ ಕಾರಣಕ್ಕೆ ಸ್ಥಗಿಗೊಳ್ಳುವದನ್ನು ಇಸ್ಕೆಮಿಕ್ ಸ್ಟ್ರೋಕ್ ಎಂದು ಕರೆಯಲಾಗುತ್ತದೆ. ಮೆದುಳಿನಲ್ಲಿ ಉಂಟಾಗುವ ರಕ್ತಸ್ರಾವವನ್ನು ಹೆಮೊರೆಜಿಕ್ (ಹೆಪ್ಪುಗಟ್ಟಿ) ಸ್ಟೊçÃಕ್ ಎನ್ನಲಾಗುತ್ತದೆ. ಮೆದುಳಿಗೆ ಅಗತ್ಯವಿರುವಷ್ಟು ರಕ್ತ, ಆಮ್ಲಜನಕ ಹಾಗೂ ಪೋಷಕಾಂಶಗಳ ಪೂರೈಕೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ಪಾರ್ಶ್ವವಾಯು ಉಂಟಾಗುತ್ತದೆ. ಇದು ಸಾಮಾನ್ಯವಾಗಿ 65 ರಿಂದ 75 ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ 35 ರಿಂದ 45 ರ ವಯಸ್ಸಿನವರಲ್ಲಿ ಕಡಿಮೆ.
ಪಾಶ್ವವಾಯು ಭಾರತದಲ್ಲಿ ಸಾವು ಮತ್ತು ಅಂಗವಿಕಲತೆಗೆ ಪ್ರಮುಖ ಕಾರಣವಾಗಿದೆ. ಕಳೆದ 3 ದಶಕಳಿಂದ ಶೇ. 70ರಷ್ಟು ಸಾವುಗಳು ನರ ಸಂಬAಧಿತ ಖಾಯಿಲೆಗಳಿಂದ ಉಂಟಾಗುತ್ತಿರುವದು ಕಂಡು ಬಂದಿದೆ. 2019ರಲ್ಲಿ ಸುಮಾರು 13 ಲಕ್ಷಕ್ಕೂ ಅಧಿಕ ಜನರು ಪಾರ್ಶ್ವವಾಯುವಿನಿಂದ ಬಳಲಿದ್ದು, ಅದರಲ್ಲಿ 6.99 ಲಕ್ಷ ಅಂದರೆ ಶೇ. 7.4ರಷ್ಟು ಜನ ಸಾವಿಗೀಡಾಗಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ 84-262/100 ಹಾಗೂ ನಗರದಲ್ಲಿ 334-424/100, ಜನಸಂಖ್ಯೆ ಆಧಾರದಲ್ಲಿ ನಡಸಿದ ಸಮೀಕ್ಷೆಯಲ್ಲಿ 119-145 ರಕ್ತದೊತ್ತಡ ಇದ್ದರೆ ಪಾರ್ಶ್ವವಾಯು ಬಂದೆರಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅತೀಯಾದ ಏರು ರಕ್ತದೊತ್ತಡ, ವಾಯುಮಾಲಿನ್ಯ, ಮಧುಮೇಹ, ಆಹಾರ ಶೈಲಿ ಹಾಗೂ ಬೊಜ್ಜು ಅತ್ಯಂತ ಅಪಾಯಕಾರಿ.
ಪಾರ್ಶ್ವವಾಯುಗೆ ತುರ್ತು ವೈದ್ಯಕೀಯ ಕಾಳಜಿ ಹಾಗೂ ಶೀಘ್ರ ಚಿಕಿತ್ಸೆ ನೀಡಿದರೆ ಮೆದುಳಿಗೆ ಉಂಟಾಗುವ ಗಂಭೀರತೆಯನ್ನು ತಡೆಯಬಹುದು. ಇದು ಯಾವಾಗ ಬೇಕಾದರೂ ಬಂದೆರಗಬಹುದು. ಲಕ್ಷಣಗಳು ಕಂಡ ಕೂಡಲೇ ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಬೇಕು. ಸ್ಟ್ರೋಕ್ ಆಗುವ ಮುಂಚೆ ಕೆಲವು ಸೂಚನೆಗಳು ಕಂಡು ಬರುತ್ತವೆ. ತಲೆನೋವು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಅಲ್ಲದೇ ಕೆಲ ದಿನಗಳ ಹಿಂದೆ ಗಂಭೀರ ಪಾರ್ಶ್ವವಾಯುವಿಗೆ ಒಳಗಾಗಿರುತ್ತಾರೆ. ಆದ್ದರಿಂದ ನಿರ್ಲಕ್ಷ್ಯ ತಾಳದೇ ಶೀಘ್ರವೇ ಚಿಕಿತ್ಸೆ ಪಡೆಯಬೇಕು.
ಮುನ್ನೆಚ್ಚರಿಕೆ ಲಕ್ಷಣಗಳು:
ಮುಖ, ತೋಳು ಅಥವಾ ಕಾಲು ದೇಹದ ಒಂದು ಬದಿಯಲ್ಲಿ ದೌರ್ಬಲ್ಯ ಕಂಡು ಬರುತ್ತದೆ. ಬೇರೆಯವರನ್ನು ಗುರುತಿಸುವಲ್ಲಿ ತೊಂದರೆ ಅಥವಾ ಗೊಂದಲಕ್ಕೀಡಾಗುವದು. ಮಾತನಾಡುವಲ್ಲಿ ಕಠೀಣತೆ ಎದುರಾಗುವದು. ಒಂದು ಅಥವಾ ಎರಡೂ ಕಣ್ಣುಗಳ ದೃಷ್ಠಿಗೆ ತೊಂದರೆ. ನಡೆದಾಡುವಾಗ ಅಥವಾ ನಿಲ್ಲಲು ಅಸಮತೋಲನ. ತಲೆ ತಿರುಗುವಿಕೆ. ಯಾವುದೇ ಕಾರಣವಿಲ್ಲದೇ ತೀವ್ರತರವಾದ ತಲೆನೋವು.
ಕಾರಣ: ಆಧುನಿಕತೆಯಲ್ಲಿ ಐಷಾರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಿರವವರು ಯಾವುದೇ ವ್ಯಾಯಾಮ, ಯೋಗ ಸೇರಿದಂತೆ ಚಟುವಟಿಕೆಗಳಿಲ್ಲದೇ ಜಡಜೀವನಶೈಲಿ ನಡೆಸುತ್ತಿರುವದು ಪ್ರಮುಖ ಕಾರಣ. ಅನಿಯಮಿತ ರಕ್ತದೊತ್ತಡ, ಮಧುಮೇಹ, ದೂಮಪಾನ, ಮದ್ಯಸೇವನೆ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದರೆ ಪಾರ್ಶ್ವವಾಯು ಉಂಟಾಗುವಲ್ಲಿ ಪ್ರಮುಖ ಕಾರಣವಾಗುತ್ತದೆ.
ತಡೆಗಟ್ಟುವಿಕೆ:
ನಿಮಗೆ ಉಂಟಾಗುವ ಪಾರ್ಶ್ವವಾಯುನ ಅಪಾಯಕಾರಿ ಹಾಗೂ ಗಂಭಿರತೆಯನ್ನು ಅರ್ಥಮಾಡಿಕೊಂಡು ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸುತ್ತ ಆರೋಗ್ಯಯುತ ಜೀವನಶೈಲಿ ಅಳವಡಿಸಿಕೊಂಡರೆ ಸ್ಟ್ರೋಕ್ ಅನ್ನು ತಡೆಗಟ್ಟಬಹುದು. ಈಗಾಗಲೇ ಪಾರ್ಶ್ವವಾಯುಗೆ ಒಳಗಾಗಿದ್ದರೆ ಮುಂದಾಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ:
ವೈದ್ಯರು ಸೂಚಿಸಿದಂತೆ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ಔಷಧೋಪಚಾರವನ್ನು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಔಷಧಿ ಸೇವಿಸುವದನ್ನು ನಿಲ್ಲಿಸಬೇಡಿ. ಒಂದು ವೇಳೆ ಮಾತ್ರೆ ನಿಲ್ಲಿಸಿದರೆ ಸ್ಟ್ರೋಕ್ ಗೆ ಕಾರಣವಾಗಬಹುದು.
ಸಕ್ಕರೆ ಅಂಶ ನಿಯಂತ್ರಣದಲ್ಲಿರಲಿ:
ನಿಯಮಿತ ಔಷಧೋಪಚಾರ, ಆಹಾರ ಪಥ್ಯೆ, ಯೋಗ ವ್ಯಾಯಾಮದ ಮೂಲಕ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊAಡು ಆರೋಗ್ಯವಾಗಿರಿ. ದಿನನಿತ್ಯ ನೀವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ ಹಾಗೂ ಕೊಬ್ಬು ಕಡಿಮೆ ಪ್ರಮಾಣದಲ್ಲಿರಲಿ. ಕೊಬ್ಬಿನಾಂಶವಿರುವ ಮಾಂಸ ಹಾಗೂ ಆಹಾರವನ್ನು ತ್ಯಜಿಸಿ. ವೈದ್ಯರ ಸಲಹೆ ಮೇರಗೆ ಅವಶ್ಯವಿರುವ ವ್ಯಾಯಾಮ ಮಾಡುತ್ತ ಕೊಲೆಸ್ಟಾçಲ್ ನಿಯಂತ್ರಣದಲ್ಲಿಡಿ. ಹಣ್ಣುಗಳು ಹಾಗೂ ತರಕಾರಿಯನ್ನು ಸಾಕಷ್ಟು ಸೇವಿಸಿ.
ತಂಬಾಕು ಸೇವನೆ ನಿಲ್ಲಿಸಿ: ತಂಬಾಕು ಸೇವೆನೆಯನ್ನು ತ್ಯಜಿಸುವದರಿಂದ ಪಾರ್ಶ್ವವಾಯು ಆಗುವ ಅಪಾಯವನ್ನು ಕಡಿಮೆ ಮಾಡಬಹುದು. ಮದ್ಯಸೇವನೆಯು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತ ಸರಾಗವಾಗಿ ಸಾಗಲು ತೊಂದರೆಯನ್ನುAಟು ಮಾಡಿ, ಪ್ರತಿರೋಧ ಒಡ್ಡಿ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ನಿಯಮಿತ ವ್ಯಾಯಾಮ: ನಡೆದಾಡುವದು, ಓಡಾಟ, ಹಗ್ಗದಾಟ, ಸೈಕ್ಲಿಂಗ, ಈಜುವದು, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ಯೋಗಾಸನ ಮಾಡುವದರಿಂದ ರಕ್ತದೊತ್ತಡ, ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಡಾ. ಸರೋಜಾ ಎ. ಒ. , ನರರೋಗ ಹಿರಿಯ ತಜ್ಞವೈದ್ಯರು
The Doctors coming under the Department of Medical Education may be banned from doing private practice hinted Dr. Sudhakar, Medical Education & Health Minister...
ಐದು ರೂಪಾಯಿ ಡಾಕ್ಟರ ಮಂಡ್ಯದ ಡಾ. ಶಂಕರೇಗೌಡ ಅವರಿಗೆ ರಾಷ್ಟ್ರಮಟ್ಟದ ಇಂಡಿಯನ್ ಆಫ್ ದಿ ಇಯರ- 2022 ಪ್ರಶಸ್ತಿ ಲಭಿಸಿದೆ. ಖಾಸಗಿ ಸಂಸ್ಥೆಯು ಕೊಡಮಾಡುವ ಸಾಮಾಜಿಕ ಬದಲಾವಣೆ ವಿಭಾಗದಲ್ಲಿ 5 ರೂಪಾಯಿ ವೈದ್ಯ...