ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದು ಅನಾಗರೀಕ ಲಕ್ಷಣ

ಎಲೆ ಅಡಿಕೆ ತಂಬಾಕು ತಿನ್ನುವದು ಒಂದು ಚಟ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದು ಅನಾಗರೀಕರ ಲಕ್ಷಣ. ಯಾವುದೇ ಸ್ಥಳವಿರಲಿ ಅಲ್ಲಿ ಉಗುಳುವದನ್ನು ಸಾಮಾನ್ಯ ಮಾಡಿಕೊಂಡಿದ್ದಾರೆ. ಅನಾಗರೀಕರಿಂದ ಕೂಡಿದ ಸಮಾಜದಲ್ಲಿ ಆರೋಗ್ಯಯುತ ಜೀವನ ಹೇಗೆ ಸಾಧ್ಯ ? ಇದು ಕೇವಲ ನಮ್ಮ ಊರಿಗೆ ಮಾತ್ರ ಸೀಮಿತವಾಗಿಲ್ಲ, ವಿಶ್ವದಾದ್ಯಂತ ಅಸಹ್ಯಕರ ಹಾಗೂ ಸಹಿಸಿಕೊಳ್ಳಲಾಗದ ಅನಿಷ್ಠ ಪದ್ದತಿ. ವಿವೇಚನೆಯಿಲ್ಲದ ಪದ್ದತಿ ಹೆಚ್ಚಾಗಿ ಭಾರತ ಮತ್ತು ನೆರಯ ದೇಶಗಳಲ್ಲಿ ಕಾಣಬಹುದು.

ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ವೇಗವಾಗಿ ಹರಡುವದನ್ನು ತಡೆಗಟ್ಟಲು ಮುಂಜಾಗ್ರತ ಕ್ರಮಗಳ ಕುರಿತು ಎಚ್ಚರಿಕೆ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು( ಮಾಸ್ಕ) ಧರಿಸುವುದು, ಮೇಲಿಂದ ಮೇಲೆ ಕೈಗಳನ್ನು ತೊಳೆದುಕೊಳ್ಳುವದು ಸೇರಿದಂತೆ ವಿವಿಧ ಕ್ರಮಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ತಡೆಗಟ್ಟುವಲ್ಲಿ ಗಂಭೀರವಾದ ಯಾವುದೆ ಮಾರ್ಗಸೂಚಿಯನ್ನು ನೀಡಿಲ್ಲ. ಇದು ಸಮಾಜಿಕ ಅನಾರೋಗ್ಯಕ್ಕೆ ನಾಂದಿ.

ಸಾರ್ವಜನಿಕ ಆರೋಗ್ಯ ಕಾರ್ಯಕರ್ತರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೊರೊನಾ ವೈರಸ್ ಕೊವಿಡ್-19 ಹರಡುವಿಕೆಗೆ ಮುಖ್ಯ ಕಾರಣ. ಓರ್ವ ಸೊಂಕಿತ ವ್ಯಕ್ತಿಯ ಲಾಲಾರಸದಲ್ಲಿ 24 ಗಂಟೆಗಳಕಾಲ ವೈರಸ್ ಜೀವಿತವಾಗಿರುತ್ತದೆ ಎಂಬುದು ಸಮೀಕ್ಷೆಯೊಂದು ಹೇಳುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸುವುದರ ಬಗ್ಗೆ ಗಂಭೀರವಾದ ಕ್ರಮಗಳನ್ನು ಕೈಗೊಂಡು ಅವುಗಳ ಅನುಷ್ಠಾನಕ್ಕೆ ಗಮನಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುವುದರ ವಿರುದ್ದ ಹೋರಾಡಲು ಇದು ಸರಿಯಾದ ಸಮಯ. “ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿಎಂಬ ಚಳುವಳಿಯನ್ನು ಪ್ರಾರಂಭ ಮಾಡ ಬೇಕಾಗಿದೆ.

ತಂಬಾಕು, ತಂಬಾಕು ಉತ್ಪನ್ನಗಳು, ಗುಟ್ಟಾ ಸೇವಿಸುವವರಿಗೆ ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವದರೊಂದಿಗೆ ಅವರ ವಿರುದ್ದ ಗರಿಷ್ಠ ದಂಡವನ್ನು ವಿಧಿಸಬೇಕಾಗಿದೆ. ಕಾಯಿಲೆಯಿಂದ ಬಳಲುತ್ತಿರವ ವ್ಯಕ್ತಿಯು ಉಗುಳುವದರಿಂದ ಕೊರೊನಾ ವೈರಸ್ ಕೊವಿಡ್-19 ಅಷ್ಟೆ ಅಲ್ಲದೆ ಕ್ಷಯರೋಗದಂತ ರೋಗಗಳು ಆರೋಗ್ಯಯುತ ಮನುಷ್ಯನ ಮೇಲೆ ದಾಳಿ ಮಾಡಬಹುದು.

ವಿವೇಚನೆಯಿಲ್ಲದೆ ಚಟದಲ್ಲಿ ತೊಡಗಿದವರಿಗೆ ಪರಿಸರ, ತಮ್ಮ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಕಿಂಚಿತ್ತು ಅರಿವು ಇರುವುದಿಲ್ಲ. ಅಷ್ಟೆ ಅಲ್ಲದೆ ತಂಬಾಕು, ಗುಟ್ಟಾ, ದೂಮಪಾನ, ಮದ್ಯಸೇವನೆಯಂತಹ ಚಟ ಇಲ್ಲದವರು ಕೂಡ ಯಾವುದೇ ವಿವೇಚನೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಚಟ ರೊಡಿಸಿಕೊಂಡಿದ್ದಾರೆ.

ಉಗುಳುವಿಕೆಗೆ ಯಾವುದೇ ನಿರ್ಭಂದ ಇಲ್ಲದೆ ಇರುವುದರಿಂದ ಜನರು ವಾಹನ ಸವಾರಿ ಮಾಡುವಾಗ, ದಾರಿಯ ಬದಿಯಲ್ಲಿ ಹೋಗುವಾಗ, ವಾಹನದಲ್ಲಿ ಸವಾರಿ ಮಾಡುವಾಗ ಕಿಟಕಿಯಲ್ಲಿ ಇಷ್ಟ ಬಂದ ಹಾಗೆ ಉಗುಳುವ ಪದ್ದತಿ ಇಟ್ಟುಕೊಂಡಿದ್ದಾರೆ. ಇಂತಃ ಕಠಿಣ ಪರಿಸ್ಥಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಒಬ್ಬ ವ್ಯಕ್ತಿಯ ಲಾಲಾರಸವು ವಾತಾವರಣದಲ್ಲಿ 24 ಗಂಟೆಗಳ ಕಾಲ ಇರುತ್ತದೆ, ಒಂದು ವೇಳೆ ವ್ಯಕ್ತಿಯು ಸೋಂಕಿತನಾಗಿದ್ದರೆ, ಅವರ ಲಾಲಾರಸದ ಸಂರ್ಪಕಕ್ಕೆ ಬಂದರೆ ಆರೋಗ್ಯಯುತವಾದ ವ್ಯಕ್ತಿವು ಕೂಡ ಅನಾರೋಗ್ಯಕ್ಕೆ ಒಳಗಾಗಬಹುದು. ಲಾಲಾರಸದ ಸಣ್ಣ ಸಣ್ಣ ಕಣಗಳು ವ್ಯಕ್ತಿಯ ಮೊಗು,ಕಣ್ಣು ಹಾಗೂ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಿ ಅನೇಕ ರೋಗಗಳನ್ನು ಉಂಟುಮಾಡಬಹುದು.

spitting

ಸ್ಥಳೀಯ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಸರಕಾರೇತರ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆಯ ವಿರುದ್ದ ಬ್ರಹತ್ ರ್ಯಾಲಿಯನ್ನು ಅಥವಾ ಚಳುವಳಿಯನ್ನು ಪ್ರಾರಂಭಿಸಬೇಕು. ಉತ್ತಮ ರಾಜಕೀಯ ನಾಯಕತ್ವ ಹೊಂದಿದ ವ್ಯಕ್ತಿಗಳು, ಪುರಸಭೆ, ಸಂಸ್ಥೆಗಳು, ಆಡಳಿತ ವರ್ಗದವರು ಸ್ವಾರ್ಥ ಭಾವವನ್ನು ಬಿಟ್ಟು ನಿಸ್ವಾರ್ಥತೆಯಿಂದ ಚಳುವಳಿಗೆ ಕೈ ಜೋಡಿಸ ಬೇಕಾಗಿದೆ.

ಕಠಿಣ ಕ್ರಮ :ಸುಂದರವಾದ ನಗರವು ರೂಪಗೊಳ್ಳಬೇಕಾದರೆ ಆರೋಗ್ಯಯುತ, ಸ್ವಚ್ಚ ಪರಿಸರ ನಿರ್ಮಾಣ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು, ಪೊಲೀಸ ಇಲಾಖೆ ಇವುಗಳ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು.

ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ನಿವೇನು ಮಾಡಬೇಕು?

ರಾಷ್ಟ್ರಿಯ ಆರೋಗ್ಯ ಸೇವೆ ಬ್ರಿಟನ ದೇಶದ ಪ್ರಕಾರ (ಎನ್ಎಚ್ಎಸ್).

ತಕ್ಷಣ ಸೋಪ ಮತ್ತು ಜಾಸ್ಥಿ ನೀರಿನಿಂದ ಲಾಲಾರಸವನ್ನು ತೊಳೆವುದು.

ಒಂದು ವೇಳೆ ಲಾಲಾರಸವು ಬಾಯಿ, ಮೂಗು, ಕಣ್ಣುಗಳಲ್ಲಿ ಹೋದರೆ ತಕ್ಷಣ ತಂಪು ನೀರಿನಿಂದ ತೊಳೆಯ ಬೇಕು.

ಒಂದು ವೇಳೆ ನಿಮಗೆ ಇದರಿಂದ ಅಪಾಯವೇನಿಸಿದರೆ ಬಹುಬೇಗನೆ ವೈದ್ಯರನ್ನು ಸಂರ್ಪಕಿಸಿ.

Priyanka

ಪ್ರಿಯಾಂಕಾ ಖೋತ
ಜನಸಂರ್ಕ ಅಧಿಕಾರಿ
ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಅಸ್ಪತ್ರೆ

Popular Doctors

Related Articles