ಅವಧಿ ಪೂರ್ವ ಜನಿಸುವ ಮಗುವಿನ ಆರೈಕೆ

ಅವಧಿ ಪೂರ್ವ ಜನಿಸುವ (37 ವಾರಗಳ ಮುಂಚೆ ) ಮಗುವಿನ ಆರೈಕೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಅದರ ಲಾಲನೆ ಪೋಷಣೆ ಮಾಡುವಲ್ಲಿ ತಾಯಂದಿರು ಹಾಗೂ ನರ್ಸಿಂಗ ಸಿಬ್ಬಂಧಿ ಅತ್ಯಂತ ಮುತುವರ್ಜಿಯಿಂದ ಆರೈಕೆ ಮಾಡಬೇಕು. ನಿಗಧಿತ ಅವಧಿಗಿಂತ ಮುಂಚೆ ಜನಿಸುವ ಮಗುವಿಗೆ ಅತ್ಯಧಿಕ ಅನಾರೋಗ್ಯದ ತೊಂದರೆ ಇರುತ್ತದೆ. ಪ್ರಥಮವಾಗಿ ಅವಧಿಮುಂಚೆ ಜನಿಸಿದ ಮಗು ಚಿಕ್ಕದಾದ ಶರೀರÀ ಹೊಂದಿದ್ದು, ಅದಕ್ಕೆ ಕಾಂಗರೂ ತರ ಮಗುವನ್ನು ಬೆಚ್ಚಗೆ ಇಟ್ಟು ಆರೈಕೆ ಮಾಡಬೇ. ಅವಧಿ ಪೂರ್ವ ಜನಿಸಿದ ಮಗುವಿನ ಆರೈಕೆಯಲ್ಲಿ ತೀವ್ರ ನಿಗಾ ವಹಿಸಬೇಕಾಗುತ್ತದೆ. ಅತ್ಯತಂ ಕಡಿಮೆ ತೂಕ ಹೊಂದಿರುವ ಮಗುವಿಗೆ ಅನಾರೋಗ್ಯ ಬೆಂಬಿಡದೇ ಕಾಡುತ್ತದೆ. ಅದರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಕಾಮಾಲೆ ರೋಗ ಬಂದೆರಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅಲ್ಲದೇ 10ರಲ್ಲಿ 9 ಮಕ್ಕಳು ಪ್ರಾಣಾಪಾಯದಿಂದ ಪಾರಾಗುತ್ತಾರೆ ಎಂದು ನವಜಾತ ಶಿಶುಗಳ ತಜ್ಞವೈದ್ಯರಾದ ಡಾ. ಮನಿಷಾ ಭಾಂಡನಕರ ಅವರು ಎಚ್ಚರಿಕೆ ನೀಡುತ್ತಾರೆ.

ಮಗುವಿಗೆ ಹಾಲು ಕುಡಿಯಲು ಮತ್ತು ಪಚನಕ್ರಿಯೆಯಲ್ಲಿ ತೊಂದರೆಯುಂಟಾಗಬಹುದು. ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶ ಹಾಗೂ ಕಡಿಮೆ ರಕ್ತ ಇರುವುದರಿಂದ ಆಮ್ಲಜನಕ ಕಡಿಮೆ ಪೂರೈಕೆ ಆಗುವ ಸಾಧ್ಯತೆ ಇದ್ದು, ಅತ್ಯಂತ ಗಂಭೀರ ವಿಷಯ ಎಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವದರಿಂದ ಮಗುವಿಗೆ ಸೋಂಕು ತಗಲುವದು. ಒಂದೊಂದು ಸಾರಿ ಉಸಿರಾಟ ನಿಂತುಬಿಡುತ್ತದೆ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಬಹುದು. ಕೆಲವು ಬಾರಿ ಕಿವಿ ಮತ್ತು ಕಣ್ಣಿನ ದೃಷ್ಠಿ ದುರ್ಬಲಗೊಳ್ಳುತ್ತದೆ. ಮುಂದೊಂದು ದಿನ ದೈಹಿಕ ಮತ್ತು ಮಾನಸಿಕ ತೊಂದರೆ ಉಂಟಾಗಬಹುದು.

ವಿಶ್ವದಲ್ಲಿಯೇ ಅತೀ ಹೆಚ್ಚು ಅವಧಿ ಪೂರ್ವ ಮಗು ಜನಿಸುವದು ಭಾರತದಲ್ಲಿಯೇ. ವಿಶ್ವದಲ್ಲಿ 15 ಮಿಲಿಯನ್ ಮಕ್ಕಳು ಅವಧಿಪೂರ್ವ ಜನಿಸಿದರೆ, ಅದರಲ್ಲಿ 1 ಮಿಲಿಯನ್ ಮಕ್ಕಳು ಸಾವನ್ನಪ್ಪುತ್ತಿದ್ದು, ಕೆಲವು 5 ವರ್ಷದೊಳಗೆ ಮರಣಹೊಂದುತ್ತಿವೆ. ಇನ್ನುಳಿದವು ಅನಾರೋಗ್ಯದಿಂದ ಬಳಲುತ್ತವೆ. ಆಫ್ರಿಕಾ ಮತ್ತು ದಕ್ಷಿಣ ಏಶಿಯಾಯದಲ್ಲಿ ಶೇ.60 ರಷ್ಟು ಹಾಗೂ ವಿಶ್ವದ 184 ದೇಶಗಳಲ್ಲಿ ಶೇ. 5 ರಿಂದ 18 ರಷ್ಟು ಮಕ್ಕಳು ಅವಧಿಪೂರ್ವವಾಗಿ ಜನಿಸುತ್ತಿವೆ. ವಿಶ್ವದ 10 ದೇಶಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿರುವದು ಅತ್ಯಂತ ಕಳವಳಕಾರಿ. ಬಹಳಷ್ಟು ಶಿಶುಗಳು 32 ರಿಂದ 36 ವಾರಕ್ಕಿಂತ ಮುಂಚೆ ಜನಿಸುತ್ತವೆ ಮತ್ತು 2.5ಕ್ಕಿಂತ ಕಡಿಮೆ ತೂಕ ಹೊಂದಿರುತ್ತವೆ. ಇದರಿಂದ ಮಗುವಿನ ಉಸಿರಾಟದಲ್ಲಿ ಏರುಪೇರಾಗುವದರಿಂದ ಮಗು ಬೆಳವಣಿಗೆಯಲ್ಲಿ ಚೇತರಿಕೆ ಕಂಡು ತನ್ನ ಸ್ವಶಕ್ತಿಯಿಂದ ಉಸಿರಾಡಲು ಪ್ರಯತ್ನಿಸುವವರೆಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ.

pre term baby

ಅವಧಿ ಪೂರ್ವ ಮಗು ಜನಿಸುವದೇಕೆ ?

ಅವಳಿ ಜವಳಿ ಅಥವಾ ತ್ರಿವಳಿ ಶಿಶಗಳಿರುವದು. ತಾಯಿಯ ಗರ್ಭಾಶಯದಲ್ಲಿ ತೊಂದರೆ, ತಾಯಿಯು ಯಾವುದಾದರೂ ಸೊಂಕಿನಿಂದ ಬಳಲುತ್ತಿದ್ದರೆ ವೈದ್ಯಕೀಯ ಸ್ಥಿತಿಗತಿ, ತಾಯಿ ಮಧುಮೇಹದಿಂದ ಬಳಲುತ್ತಿದ್ದರೆ, ಅವಧಿಪೂರ್ವ ಪ್ರಸವವಾಗಿದ ಇತಿಹಾಸ ಇದ್ದರೆ ಅವಧಿ ಪೂರ್ವ ಶಿಶು ಜನಿಸುವ ಸಂದರ್ಭ ಅಧಿಕವಾಗಿರುತ್ತದೆ.

ಅವಧಿಪೂರ್ವ ಜನಿಸುವ ಶಿಶು ಉಸಿರಾಟದ ತೊಂದರೆ, ಹೃದಯ ಸಮಸ್ಯೆ, ಪಚನಕ್ರಿಯೆ ವ್ಯವಸ್ಥೆಯ ಮೇಲೆ ಪರಿಣಾಮ, ಕಾಮಲೆ, ರಕ್ತಹೀನತೆ, ಸೋಂಕು ತಗಲುವ ಸಾಧ್ಯತೆ ಅಧಿಕವಿರುತ್ತದೆ. ನಂತರದ ದಿನಗಳಲ್ಲಿಯೂ ಕೂಡ ಮಗು ಬೆಳವಣಿಗೆಯಾದಂತೆ ಕೆಲ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇಗನೆ ಮಾತನಾಡಲು ಸಾಧ್ಯವಾಗದಿರುವದು. ಬೆಳವಣಿಗೆ ಮತ್ತು ನಡೆದಾಡಲು ಸಮಸ್ಯೆ, ಹಲ್ಲುಗಳ ಸಮಸ್ಯೆ, ದೃಷ್ಠಿ ಮತ್ತು ಶಬ್ದ ಕೇಳುವಲ್ಲಿ ಸಮಸ್ಯೆ, ಯೋಚಿಸುವ ಮತ್ತು ಕಲೆಕೆಯಲ್ಲಿ ತೊಂದರೆ ಹಾಗೂ ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

65 ದೇಶಗಳಲ್ಲಿ ಕಳೆದ 20 ವರ್ಷಗಳಲ್ಲಿ ಇದು ಹೆಚ್ಚಾಗಿದ್ದು, ಅವಧಿಪೂರ್ವ ಮಗು ಜನಿಸಬಾರದೆಂದರೆ ತಾಯಂದಿರು ಮೊದಲು ಆರೋಗ್ಯವಾಗಿರಬೇಕು. ಗರ್ಭವತಿ ಸಂದರ್ಭದಲ್ಲಿ ಒಳ್ಳೆಯ ಆರೈಕೆ ಹಾಗೂ ನಿಯಮಿತವಾಗಿ ವೈದ್ಯರ ಸಲಹೆಯನ್ನು ಪಡೆಯಬೇಕು. ಅದರಲ್ಲಿಯೂ ಮುಖ್ಯವಾಗಿ ಅವಳಿ ಜವಳಿ ಹಾಗೂ ಅಪೌಷ್ಠಿಕಾಂಶತೆ, ಮಧುಮೇಹ, ರಕ್ತದೊತ್ತಡ, ಸೋಂಕಿನಿಂದ ಬಳಲುತ್ತಿದ್ದರೆ, ಅವರಿಗೆ ಸರಿಯಾದ ಚಿಕಿತ್ಸೆ ಹಾಗೂ ಆರೈಕೆ ನೀಡಬೇಕು ಎಂದು ತಜ್ಞವೈದ್ಯರು ಸಲಹೆ ನೀಡುತ್ತಾರೆ.


premature birth is a birth that takes place more than three weeks before the baby’s estimated due date. In other words, a premature birth is one that occursbefore the start of the 37th week of pregnancy.

Popular Doctors

Related Articles