ಮಾನವನಿಗೆ ಹಂದಿ ಹೃದಯ ಕಸಿ ಮಾಡಿದ ವೈದ್ಯರು

ಹೃದಯ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಸ್ಥಳೀಯವಾಗಿ ಮಾರ್ಪಡಿಸಿರುವ ಹಂದಿಯ ಹೃದಯವನ್ನು ಕಸಿ ಮಾಡುವಲ್ಲಿ ಯಶಸ್ವಿಯಾಗಿರುವ ಅಮೆರಿಕ ವೈದ್ಯರು ವೈದ್ಯವಿಜ್ಞಾನದಲ್ಲಿ ಯಾವುದೂ ಅಸಾಧ್ಯವೇನಲ್ಲ ಎಂದು ಎತ್ತಿ ತೋರಿಸುವದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿಸಿದ್ದಾರೆ.

ವಿಶ್ವದಲ್ಲಿ ಇದೇ ಪ್ರಥಮ ಬಾರಿಗೆ ಮಾನವನಿಗೆ ಪ್ರಾಣಿಯ ಅಂಗಾAಗವನ್ನು ಕಸಿ ಮಾಡಿದ್ದು, ಅಮೆರಿಕದ ಮೇರಿಲ್ಯಾಂಡ್ ಯೂನಿವರ್ಸಿಟಿಯ ವೈದ್ಯಕೀಯ ಸ್ಕೂಲಿನ ಶಸ್ತ್ರಚಿಕಿತ್ಸಕರು 57 ವರ್ಷದ ಡೇವಿಡ್ ಬೆನೆಟ್ ಅವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿದ್ದಾರೆ.

ಡೇವಿಡ್ ಬೆನೆಟ್ ಅವರು ಶ್ವಾಸಕೋಶ ಹಾಗೂ ಹೃದಯ ರೋಗದಿಂದ ಬಳಲುತ್ತಿದ್ದರು. ಅವರು ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದು ಆರೋಗ್ಯವು ತುಂಬ ಕ್ಷೀಣವಾಗಿತ್ತು. ಅವರಿಗೆ ಮನುಷ್ಯರ ಹೃದಯವನ್ನು ಕಸಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಹಂತದಲ್ಲಿ ಡೇವಿಡ್ ಬೆನೆಟ್‌ಗೆ ಹಂದಿಯ ಹೃದಯವನ್ನು ಕಸಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಸಿಯಾಗಿರುವ ಹೃದಯ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದು ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

heart
(© natali_mis – stock.adobe.com)

‘ಮೇರಿಲ್ಯಾಂಡ್ ನಿವಾಸಿಯಾದ ನಾನು ಹಲವು ತಿಂಗಳಿAದ ಹಾಸಿಗೆಯಲ್ಲಿ ಮಲಗಿದ್ದೆ. ಅಂತಿಮವಾಗಿ ವೈದ್ಯರು ಕಸಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದರು. ನಾನು ಇದಕ್ಕೆ ಒಪ್ಪಿಕೊಂಡೆ. ಈ ಚಿಕಿತ್ಸೆ ನನಗೆ ಮಾಡುವ ಅಂತಿಮ ಚಿಕಿತ್ಸೆಯಾಗಿತ್ತು. ಕತ್ತಲಲ್ಲಿ ಗುಂಡು ಹೊಡೆದರೆ ವ್ಯಕ್ತಿಗೆ ತಗಲಬಹುದು ಅಥವಾ ತಾಗದಿರಬಹುದಾದ ಪರಿಸ್ಥಿತಿ ನನ್ನದಾಗಿತ್ತು. ಕೊನೆಗೆ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಾನು ನಡೆಯ ಬಲ್ಲೇ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ಅನುಮತಿ ನೀಡಿದ ಬಳಿಕವೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಚೇತರಿಸಿಕೊಳ್ಳುತ್ತಿರುವ ರೋಗಿಯು ಮಾತನಾಡಿದ್ದಾರೆ. ಎಂದು ಶಸ್ತ್ರಚಿಕಿತ್ಸಕ ವೈದ್ಯ ಬಾರ್ಟ್ಲಿ ಗ್ರಿಫಿತ್ ಹೇಳಿದ್ದಾರೆ.

ಹಂದಿ ಹೃದಯ ಕಸಿ ಮಾಡಿರುವ ಶಸ್ತ್ರಚಿಕಿತ್ಸೆಯು ವಿಶ್ವದಲ್ಲೊಯೇ ಪ್ರಥಮ. ಭವಿಷ್ಯದಲ್ಲಿ ಅಂಗಾAಗಳ ಕೊರತೆ ಸಮಸ್ಯೆಯನ್ನು ಪರಿಹರಿಸಲು ಇದು ಭರವಸೆ ಮೂಡಿಸಿರುವ ವಿಧಾನವಾಗಿದೆ ಎಂದು ಬಾರ್ಟ್ಲಿ ಗ್ರಿಫಿತ್ ಹೇಳಿದ್ದಾರೆ.

ಹೃದಯ ಕಸಿ ಮಾಡುವ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸಿದ್ದೇವೆ. ಹಂದಿ, ಬಬೂನ್ (ಕೋತಿ) ಸೇರಿದಂತೆ ವಿವಿಧ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿತ್ತು ಎಂದು ವೈದ್ಯ ಮೊಹಮ್ಮದ್ ಮೊಹಿದ್ದೀನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ 1984ರಲ್ಲಿ ಆಗ ತಾನೇ ಜನಿಸಿದ ಶಿಶುವಿನ ಹೃದಯಕ್ಕೆ ಕೋತಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಆದರೆ ಆ ಶಿಶು 20 ದಿನಗಳವರೆಗೆ ಬದುಕಿತ್ತು.

ಸದ್ಯ ವೈದ್ಯಲೋಕದಲ್ಲಿ ಮಾನವರ ಹೃದಯದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಹಂದಿಯ ಹೃದಯದ ಕವಾಟವನ್ನು ಬಳಕೆ ಮಾಡಲಾಗುತ್ತಿದೆ. ಹಾಗೇ ಹಂದಿಯ ಚರ್ಮವನ್ನು ಮನುಷ್ಯರ ಸುಟ್ಟ ಗಾಯಗಳ ಚರ್ಮಕ್ಕೆ ಕಸಿ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here