ತಲೆನೋವು

ನಮ್ಮ ಜೀವನದಲ್ಲಿ ಹಲವಾರು ಬಾರಿ ತಲೆನೋವಿನ ಅನುಭವ ತೀವ್ರವಾಗಿರುತ್ತದೆ. ತಲೆನೋವಿನಿ ತೊಂದರೆ ಅನುಭವಿಸದವರು ಯಾರೂ ಇಲ್ಲ. ಸಾಮಾನ್ಯವಾಗಿ ತಲೆನೋವು ಮಾನಸಿಕ ಒತ್ತಡ, ಪ್ರಯಾಸ, ಹಾಗೂ ತೀವ್ರ ಆಯಾಸ, ತೀವ್ರವಾದ ಬಿಸಿಲಿನ ಜಳ ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಂದ ಬಂದೆರಗುತ್ತದೆ. ಅಲ್ಲದೇ ತೀವ್ರ ರಕ್ತದೊತ್ತಡ, ಮಧುಮೇಹ, ಮೈಗ್ರೇನ್ ಹಾಗೂ ಮೆದುಳಿನಲ್ಲಿ ಗಡ್ಡೆ ಬೆಳೆಯುತ್ತಿದ್ದರೂ ಕೂಡ ತಲೆನೋವು ಕಂಡುಬರುತ್ತದೆ.
ಮೈಗ್ರೇನ್:
ಮೈಗ್ರೇನ್ ಪ್ರಾಥಮಿಕವಾದ ತಲೆನೋವಿನ ಖಾಯಿಲೆ. ಇದು ಮೇಲಿಂದ ಮೇಲೆ ತೀವ್ರವಾಗಿ ಬಾಧಿಸುತ್ತದೆ. ತಲೆ ಅರ್ಧಭಾಗದಲ್ಲಿ ಪರಿಣಾಮ ಬೀರಿ, ಏರಿಳಿತಗೊಳ್ಳುತ್ತ ಸುಮಾರು 2 ರಿಂದ 72 ಗಂಟೆಯರೆಗೆ ನಿರಂತರವಾಗಿ ಇರುತ್ತದೆ. ಮುಖ್ಯವಾಗಿ ಮೈಗ್ರೇನ ಸಂದರ್ಭದಲ್ಲಿ ವಾಕರಿಕೆ, ವಾಂತಿ ಸೂಕ್ಷ್ಮವಾದ ವಾಸಣೆ ಹಾಗೂ ಶಬ್ದ ಉಂಟಾಗುತ್ತದೆ.
ಚಿಂತೆಯ ತಲೆನೋವು: ಚಿಂತೆಯ ತಲೆನೋವು ಮುಖ್ಯವಾಗಿ ಕುತ್ತಿಗೆ ಮತ್ತು ನೆತ್ತಿಯ ಸ್ನಾಯುಗಳ ಮೇಲೆ ಪರಿಣಾಮ ಬೀರಿ ಸಂಕುಚಿತಗೊಳ್ಳುತ್ತದೆ. ಇದರಿಂದ ಒತ್ತಡದ ಪ್ರತಿಕ್ರಿಯೆ ಉಂಟಾಗಿ ಖಿನ್ನತೆ, ಮೆದುಳಿಗೆ ಗಾಯ ಅಥವಾ ಆತಂಕ ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಬರಬಹುದು.ಆದರೆ ಬಹುಸಾಮಾನ್ಯವಾಗಿ ಯುವಕರಲ್ಲಿ ಹಾಗೂ ಇತರ ಹದಿಹರೆಯದವರಲ್ಲಿ ಕಂಡು ಬರುತ್ತದೆ. ಈ ರೀತಿಯ ತಲೆನೋವ ಅನ್ನು ವಿಶ್ರಾಂತಿ ಮತ್ತು ಧ್ಯಾನದಿಂದ ಕಡಿಮೆ ಮಾಡಬಹುದು.
ಮೆದುಳು ಜ್ವರ: ಮೆದುಳು ಜ್ವರವನ್ನು ವೈದ್ಯಕೀಯ ಸ್ಥಿತಿಯ ಮೇಲೆ ಅವಲಂಭಿತವಗಿರುತ್ತದೆ. ಮೆದುಳಿನ ಒಂದು ಭಾಗದಲ್ಲಿ ಭಾವು ಅಥವಾ ಊತ ಉಂಟಾಗಿರುವದರಿಂದ ಜ್ವರ ಬರುತ್ತದೆ. ಅಲ್ಲದೇ ಇನ್ನಿತರ ಗುಣಲಕ್ಷಣಗಳು ಕಂಡುಬರುತ್ತವೆ. ತೀವ್ರವಾದ ತಲೆನೋವು, ಹಸಿವು ಆಗದಿರುವದರ ಜೊತೆಗೆ ಮಾತನಾಡಲು ಮತ್ತು ಕೇಳಿಸಿಕೊಳ್ಳಲು ತೊಂದರೆಯುಂಟಾಗುತ್ತದೆ.
ಮೆದುಳಿನಲ್ಲಿ ಗಡ್ಡೆ:
ನಿರಂತರ ಒಂದೇ ಕೊಠಡಿಯಲ್ಲಿ ತಿರುಗಿದಂತಾಗುವದು. ತಲೆ ತಿರುಗುವಿಕೆ ಅಥವಾ ಸಮತೋಲನ ಕಳೆದುಕೊಳ್ಳುವದು.
ಮಾತನಾಡಲು ತೊಂದರೆಯುಂಟಾಗುವದು. ಕೇಳುವ ಸಮಸ್ಯೆ. ಕ್ರಮೇಣವಾಗಿ ಕಾಲು ಹಾಗೂ ಇನ್ನೀತರ ಸಂವೇದನಾ ಶೀಲತೆಯನ್ನು ಕಳೆದುಬಿಡುತ್ತದೆ. ವಯಕ್ತಿಕವಾಗಿ ಕೆಲವು ಬದಲಾವಣೆಗಳು, ಭಾವನಾತ್ಮಕ ಹಾಗೂ ಸಿಟ್ಟು ಬರುತ್ತದೆ. ಬರಬರುತ್ತ ಸಹಜವಾಗಿ ಗೊಂದಲಕ್ಕೀಡಾಗುತ್ತಾರೆ.

headache

ತಲೆನೋವಿಗೆ ಸಿಟಿ ಎಂಆರ್‍ಐ ಮಾಡಿಸುವದು ಖಡ್ಡಾಯವೇ ?
ತಲೆನೋವಿನಿಂದ ಬಳಲುತ್ತಿರುವ ಎಲ್ಲರಿಗೂ ಸಿಟಿ ಎಂಆರ್‍ಐ ಮಾಡಿಸುವದು ಅವಶ್ಯವಿರುವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಮೆದುಳಿನಲ್ಲಿ ಏನಾದರೂ ತೊಂದರೆಯಿರುವ ಗುಣಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಂಡರೆ ಸ್ಕ್ಯಾನ ಮಾಡುವದು ಅತ್ಯವಶ್ಯ.
ಎಚ್ಚರಿಕೆ: ಯಾವಾಗ ಸಮಸ್ಯೆ
ನಿರಂತರವಾಗಿ ತೀವ್ರ ತಲೆನೋವು, ಒಮ್ಮಿಂದೊಮ್ಮೆಲೆ ತಲೆನೋವಿನ ಅನುಭವವಾಗುವದು.
ಮೇಲಿಂದಮೇಲೆ ತಲೆ ನೋವು ಹೆಚ್ಚಾಗುವದು. ತಲೆನೋವಿನೊಂದಿಗೆ ವಾಂತಿ, ಮೂರ್ಚೆ ಬರುವದು.ನಡೆದಾಡುವಾಗ ಸಮತೋಲನ ಕಳೆದುಕೊಳ್ಳುವದು.
ಯಾವುದೇ ಔಷಧ ಹಾಗೂ ಚಿಕಿತ್ಸೆಗೆ ಸ್ಪಂಧಿಸದಿದ್ದರೆ
ತಲೆನೋವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದು ನಿರಂತರವಾಗಿದ್ದರೆ ಖಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಸೂಚನೆ ಪಡೆದು ಚಿಕಿತ್ಸೆ ಪಡೆದುಕೊಳ್ಳಿ

Popular Doctors

Related Articles