ಮೈಆರೋಗ್ಯ ಪ್ರಥಮ ವರ್ಷಾಚರಣೆ

ಮೈ ಆರೋಗ್ಯ ಒಂದು ವರ್ಷದ ಹಿಂದಷ್ಟೇ ಜನಿಸಿದ ಒಂದು ಆರೋಗ್ಯ ಸುದ್ದಿ ಸಂಸ್ಥೆ. ಮೂರ್ನಾಲ್ಕು ಜನ ಸಮಾನ ಮನಸ್ಕರ ಗೆಳೆಯರ ಕನಸಿನ ಕೂಸಿದು. ಕೇವಲ ಒಂದು ವರ್ಷದಲ್ಲೇ ಲಕ್ಷಾಂತರ ಓದುಗರನ್ನು ಹೊಂದಬಹುದು ಎಂಬ ನಿರೀಕ್ಷೆಯೂ ಕೂಡಾ ಇರಲಿಲ್ಲ. ಆರೋಗ್ಯ ಸುದ್ದಿಗಳು, ಲೇಖನಗಳು, ಸಂದರ್ಶನಗಳು ವಿಶ್ವಾರ್ಹತೆಯ ಇಷ್ಟೊಂದು ಓದುಗರನ್ನು ಮೈಆರೋಗ್ಯ ತನ್ನೆಡೆಗೆ ಸೆಳೆಯುವದರಲ್ಲಿ ಯಶಸ್ವಿಯಾಯಿತು. ತಾವು ಎಲ್ಲೇ ಇರಿ ಸ್ಮಾರ್ಟ ಫೋನ್ ಕೈಲ್ಲಿದ್ದರೆ ಯಾವುದೇ ವೆಚ್ಚವಿಲ್ಲದೇ ಅದರ ಪರದೆ ಮೇಲೆ ಮೈರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ಮೈಆರೋಗ್ಯ ಪ್ರಸಾರ ಮಾಡುವ ಬುಲೆಟಿನಗಳು ಡಿಜಿಟಲ್ ಜಗತ್ತಿನಲ್ಲಿ ಎಲ್ಲರ ಆರೋಗ್ಯ ಕಾಳಜಿಯನ್ನು ಬಯಸುತ್ತಿದೆ. ಇದಕ್ಕೂ ಮುಖ್ಯವಾಗಿ ಔಷಧೀಯ, ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯನ್ನು ತಮ್ಮ ಮುಂದೆ ತೆರೆದಿಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ವೈದ್ಯಕೀಯ ವೃತ್ತಿನಿರತರು, ರೋಗಿಗಳು, ರೋಗಿಗಳನ್ನು ಪಾಲನೆ ಮಾಡುವ ಇನ್ನೀತರೆ ಆರೋಗ್ಯ ಕಾರ್ಯಕರ್ತರು ಅಷ್ಟೇ ಅಲ್ಲ ವಯಕ್ತಿಕ, ಕೌಟುಂಬಿಕ ಆರೋಗ್ಯದ ಕಾಳಜಿ ಹೊಂದಿರುವ ಪ್ರಜ್ಞಾವಂತರೂ ಇದರ ಓದುಗ ಮತ್ತು ವೀಕ್ಷಕ ಬಳಗದಲ್ಲಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಮೂರು ಲಕ್ಷಕ್ಕಿಂತ ಅಧಿಕ ವೈದ್ಯಕೀಯ ವೃತ್ತಿನಿರತು ಮೈಆರೋಗ್ಯವನ್ನು ಬೆಂಬಲಿಸಿರುವದು ಒಂದು ಹೆಮ್ಮೆಯ ವಿಚಾರ. ಮೈಆರೋಗ್ಯ ತಂಡವು ನಮ್ಮೆಲ್ಲ ಓದುಗ, ವೀಕ್ಷಕ ಬಳಗಕ್ಕೂ ವಿಮರ್ಶಕ ಮತ್ತು ಹಿತೈಷಿ ವರ್ಗಕ್ಕೂ ಚಿರಋಣಿಯಾಗಿದೆ.

ಕೋವಿಡ್19 ಮಹಾಮಾರಿಯ ಎಲ್ಲ ಮಗ್ಗಲುಗಳನ್ನು ಓದುಗರ ಮುಂದಿಟ್ಟಾಗ ಓದುಗ ಮತ್ತು ವೀಕ್ಷಕ ಬಳಗವು ಇನ್ನಷ್ಟು ತನ್ನ ಬೆಂಬಲವನ್ನು ನೀಡಲಾರಂಭಿಸಿತು. ವೈದ್ಯಕೀಯ ಕ್ಷೇತ್ರದ ವಿಶೇಷ ತಜ್ಞರಿಂದ ವಿಡಿಯೋ ಸಂದೇಶಗಳು ಓದುಗರನ್ನು ಇನ್ನಷ್ಟು ನಮ್ಮ ಹತ್ತಿರ ಕರೆದುಕೊಂಡು ಬಂದವು. ಆಯುಷ್ಯ, ಫಿಸಿಯೋಥೆರಪಿ, ನ್ಯಾಚುರೋಪಥಿ, ಫಾರ್ಮಾಸಿ, ನರ್ಸಿಂಗ, ನ್ಯುಟ್ರಿಶಿಯನ್ ಸೈನ್ಸ, ಆಧ್ಯಾತ್ಮಕ ಆರೋಗ್ಯ, ಸಾಂಪ್ರಾದಯಿಕ ಔಷಧಿಗಳು ಸಧೃಡಕಾಯ, ಚಿಕಿತ್ಸಕ ದೃಷ್ಟಿಕೋನ, ಪುನರವಿಮರ್ಷೆಗಳು, ಮನೆಮದ್ದುಗಳು ಹೀಗೆ ಎಲ್ಲ ವಿಭಾಗಗಳಲ್ಲೂ ಮೈಆರೋಗ್ಯ ಓದುಗರ ಮನವನ್ನು ತನ್ನತ್ತ ಆಕರ್ಷಿಸಿದೆ. ಮುಂಬರುವ ದಿನಗಳಲ್ಲಿ ಮೈಆರೋಗ್ಯವು ತಮ್ಮೆಲ್ಲರ ಬೆಂಬಲದೊಂದಿಗೆ ಸ್ವದೇಶಿ ಅಭಿಯಾಣಕ್ಕೆ ಒತ್ತುಕೊಡಲಿದೆ. ಮೈಆರೋಗ್ಯ ತಂಡವು ಇನ್ನಷ್ಟು ಕಠಿಣ ಪರಿಶ್ರಮದೊಂದಿಗೆ ಅತ್ಯುತ್ತಮ ಚಿಕಿತ್ಸಾ ಉಪಕ್ರಮಗಳನ್ನು ಬೆರಳತುದಿಯಲ್ಲಿ ತಂದು ನಿಲ್ಲಿಸಲಿದೆ.

1year

ವೆಬ್ವಿನಾರ, ಆನಲೈನ್ ಕನ್ಸಲ್ಟೇಶನ ಮತ್ತು ಕ್ಲಿನಿಕಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವತ್ತ ಹೆಜ್ಜೆ ಇಡಲಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತ ತಾವಿದ್ದಲ್ಲಿಯೇ ಇದ್ದು ವೈದ್ಯಕೀಯ ಕಾರ್ಯಾಗಾರಗಳಲ್ಲಿ ಭಾಗವಹಿಸುವಂತ ಒಂದು ಉತ್ತಮ ವೇದಿಕೆಯನ್ನು ಮೈಆರೋಗ್ಯ ಸೃಷ್ಟಿಸಲಿದೆ. ವೈದ್ಯಕೀಯ ಲೋಕದ ಸಮಾವೇಶಗಳು, ಸನ್ನಿವೇಶ ನಿರ್ವಹಣೆ, ಆರೋಗ್ಯ ಕಾಳಜಿಯ ಗುಣಮಟ್ಟ ಸುಧಾರಣೆ, ಮಾನವ ಸಂಪನ್ಮೂಲಕ್ಕೆ ತರಬೇತಿ, ವೈದ್ಯಕೀಯ ಸೌಲಭ್ಯಗಳು ಮತ್ತು ಸೇವೆಗಳು ಸೇರಿದಂತೆ ಮುಂತಾದ ವಿಷಯಗಳತ್ತ ಮೈಆರೋಗ್ಯ ತನ್ನ ಆದ್ಯತೆಯ ಗಮನ ಇಟ್ಟುಕೊಂಡಿದೆ. ಮೈಆರೋಗ್ಯ ಜಗತ್ತಿನಾದ್ಯಂತ ಬಿತ್ತರಿಸುತ್ತಿರುವ ಮತ್ತು ಪ್ರಕಟಿಸುತ್ತಿರುವ ಲೇಖನಗಳು ಸಂದರ್ಶನಗಳಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವತ್ತ ಹೆಚ್ಚಿನ ಒತ್ತು ನೀಡಲಿರುವದಂತೂ ಸತ್ಯ. ಆರೋಗ್ಯಯುತ ಸಮಾಜ ನಿರ್ಮಾಣದ ಮುಖ್ಯ ಉದ್ದೇಶವನ್ನಿಟ್ಟುಕೊಂಡು ತಮ್ಮೆಲ್ಲರ ಬೆಂಬಲ ಮತ್ತು ಸಹಕಾರದೊಂದಿಗೆ ಮೈಆರೋಗ್ಯ ಮುಂದಿನ ಹೆಜ್ಜೆಗಳನ್ನು ಇಡಲಿದೆ.

ಧನ್ಯವಾದಗಳೊಂದಿಗೆ

ಸಂಪಾದಕರು

& ಸಂಪಾದಕೀಯ ಮಂಡಳಿ

Popular Doctors

Related Articles