ಪ್ರಥಮ ಚಿಕಿತ್ಸಾ ವಿಧಾನ ತಿಳಿದಿರುವದು ಅತ್ಯವಶ್ಯ

ಹೃದಯಾಘಾತ ಹಾಗೂ ಅಪಘಾತಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಮೃತಪಡುತ್ತಿದ್ದಾರೆ.
ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವದಕ್ಕಾಗಿ ವೈದ್ಯಕೀಯ ಜ್ಞಾನ ಅತ್ಯವಶ್ಯ ಎಂದು
ಯುಎಸ್ಎಮ್ ಕೆಎಲ್ಇಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಹೇಳಿದ್ದಾರೆ.
ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸಿಪಿಆರ್
ದಿನಾಚರಣೆಯ ಅಂಗವಾಗಿ ಆರೋಗ್ಯ ಸಹಾಯಕಿ ಪ್ರಶಿಕ್ಷಣಾರ್ಥಿಗಳು ಹಾಗೂ ಜೈನ್ ಮಹಾವಿದ್ಯಾಲಯದ
ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಬಿಎಲ್‌ಎಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಜೀವನದಲ್ಲಿ ತುರ್ತು ಹಠಾತ್ತನೆ ಬಂದೆರಗುತ್ತವೆ. ಆ ಸಂದರ್ಭವನ್ನು ಎದುರಿಸುವ ತಾಳ್ಮೆ ಜ್ಞಾನವನ್ನು ಹೊಂದಿ
ತಮ್ಮ ಹಾಗೂ ಪರಿಸ್ಥಿತಿಗೊಳಗಾದವರ ಜೀವ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿಯೋಜಿತ
ನಿರ್ದೇಶಕ ಡಾ. ಆರ್ ಜಿ ನೆಲವಿಗಿ ಮಾತನಾಡುತ್ತ, ಸಿ ಪಿ ಆರ್ ಇದು ಜೀವ ರಕ್ಷಣೆಯ ಅದ್ಭುತ ಕಲೆಯಾಗಿದ್ದು
ಪ್ರತಿಯೊಬ್ಬರೂ ಅರಿಯಬೇಕಾದ ವಿಷಯವಾಗಿದೆ. ಅಲ್ಲದೇ ಮಾನವೀಯತೆಯನ್ನು ಮೆರೆಯಲು ಅವಶ್ಯಕ.
ಆದ್ದರಿಂದ ಇದನ್ನು ಕಲಿಯಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

BLS

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಐಎಪಿಯ ಸದಸ್ಯ ಡಾ. ಶರದ ಶ್ರೇಷ್ಠಿ, ಕೆ ಎಲ್ ಇ
ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ್ ಕಡ್ಡಿ, ಡಾ.
ಅನಿತಾ ಮೋದಗೆ , ಡಾ. ಸೌಮ್ಯ ವೇರ್ಣೇಕರ, ಡಾ. ಸಂತೋಷ ಕರಮಸಿ, ಡಾ. ಬಸವರಾಜ
ಕುಡಸೋಮಣ್ಣವರ ಹಾಗೂ ಡಾ. ಪ್ರಜ್ಞಾ ಕುರಕುರೆ ಮುಂತಾದವರು  ತರಬೇತಿ ನೀಡಿದರು. ಕಾರ್ಯಕ್ರಮವನ್ನು
ಡಾ. ಪ್ರಜ್ಞಾ ಕುರಕುರೆ ನಿರೂಪಿಸಿದರು, ಡಾ. ಬಸವರಾಜ ಕುಡಸೋಮಣ್ಣವರ ವಂದಿಸಿದರು.

Popular Doctors

Related Articles